ADVERTISEMENT

ಫ್ಯಾಕ್ಟ್‌ಚೆಕ್: ತಾಲಿಬಾನ್‌ಗಳಿಗೆ ಬಾಲೆಯ ಗುಂಡಿನೇಟು?

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 19:31 IST
Last Updated 6 ಸೆಪ್ಟೆಂಬರ್ 2021, 19:31 IST
ಫ್ಯಾಕ್ಟ್‌ಚೆಕ್: ತಾಲಿಬಾನ್‌ಗಳಿಗೆ ಬಾಲೆಯ ಗುಂಡಿನೇಟು?
ಫ್ಯಾಕ್ಟ್‌ಚೆಕ್: ತಾಲಿಬಾನ್‌ಗಳಿಗೆ ಬಾಲೆಯ ಗುಂಡಿನೇಟು?   

ಇಡೀ ಅಫ್ಗಾನಿಸ್ತಾನವು ತಾಲಿಬಾನ್ ತೆಕ್ಕೆಯಲ್ಲಿದ್ದರೂ, ಪಂಜ್‌ಶಿರ್ ಪ್ರಾಂತ್ಯ ಮಾತ್ರ ಪ್ರತಿರೋಧ ತೋರುತ್ತಿದೆ. ಅಲ್ಲಿನ ಎಲ್ಲ ವಯೋಮಾನದವರೂ ತಾಲಿಬಾನಿಗಳ ವಿರುದ್ಧ ತೊಡೆತಟ್ಟಿದ್ದಾರೆ. ಸಣ್ಣ ವಯಸ್ಸಿನ ಬಾಲಕಿಯೊಬ್ಬಳು ಬಂದೂಕು ಹಿಡಿದಿರುವ ಚಿತ್ರವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬಾಲಕಿಯರೂ ತಾಲಿಬಾನ್‌ಗಳಿಗೆ ಶಸ್ತ್ರಸಜ್ಜಿತ ತಿರುಗೇಟು ನೀಡುತ್ತಿದ್ದಾರೆ ಎಂಬುದಾಗಿ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ.

ಈ ಚಿತ್ರವನ್ನು ರಿವರ್ಸ್ ಇಮೇಜ್ ಮೂಲಕ ಪರಿಶೀಲಿಸಿದಾಗ, ಸದ್ಯದ ತಾಲಿಬಾನ್ ಸಂಘರ್ಷಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನ್ಯೂಸ್ ಮೀಟರ್‌ ಸೇರಿದಂತೆ ವಿವಿಧ ವೆಬ್‌ಸೈಟ್‌ಗಳು ಸ್ಪಷ್ಟಪಡಿಸಿವೆ. ಈ ಚಿತ್ರಕ್ಕೆ ಸಂಬಂಧಿಸಿದ ಮೂಲ ವಿಡಿಯೊ ಒಂದು ವರ್ಷ ಹಳೆಯದು. ಈ ವಿಡಿಯೊವನ್ನು 2020ರ ಜನವರಿಯಲ್ಲಿ ಯೂಟ್ಯೂಬ್‌, ಫೇಸ್‌ಬುಕ್ ಹಾಗೂ ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ವಿಡಿಯೊದ ಹಿನ್ನೆಲೆ ಬಗ್ಗೆ ಅಷ್ಟಾಗಿ ಮಾಹಿತಿ ದೊರಕದಿದ್ದರೂ, ಈಗಿನ ಅಫ್ಗನ್ ಸನ್ನಿವೇಶಕ್ಕೂ, ಇದಕ್ಕೂ ಸಂಬಂಧವಿಲ್ಲ ಎಂದು ಹೇಳಬಹುದು ಎಂದು ಫ್ಯಾಕ್ಟ್‌ಚೆಕ್ ವೆಬ್‌ಸೈಟ್‌ಗಳು ಅಭಿಪ್ರಾಯಪಟ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT