ADVERTISEMENT

Fact Check | ಮದ್ಯ ಪಡೆಯಲು ಸಾಲುಗಟ್ಟಿ ನಿಂತಿದ್ದು ಪ್ರತಿಭಟನಾನಿರತರು ರೈತರೇ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಸೆಪ್ಟೆಂಬರ್ 2021, 16:24 IST
Last Updated 16 ಸೆಪ್ಟೆಂಬರ್ 2021, 16:24 IST
   

ಬಾಟಲಿಗಳಲ್ಲಿರುವ ಮದ್ಯವನ್ನು ಡ್ರಮ್‌ವೊಂದಕ್ಕೆ ಸುರಿಯುತ್ತಿರುವ ಕೆಲವರು... ಆ ಮದ್ಯವನ್ನು ಪಡೆಯಲು ಹರಸಾಸಹ ಪಡೆಯುತ್ತಿರುವ ಜನಸಾಗರ... ಈ ಎರಡು ವಿಡಿಯೊಗಳು ವೈರಲ್ ಆಗಿವೆ. ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರುಮದ್ಯ ಪಡೆಯಲು ಪೈಪೋಟಿಗೆ ಬಿದ್ದಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಮಯಾಂಕ್ ಎಂಬುವರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ವಿಡಿಯೊವನ್ನು ಸಾವಿರಾರು ಜನರು ವೀಕ್ಷಿಸಿದ್ದಾರೆ.

ವಿಡಿಯೊಗಳನ್ನು ಪರಿಶೀಲಿಸಿದಾಗ, ರೈತರಿಗೆ ಸಂಬಂಧಿಸಿದ ಯಾವುದೇ ಧ್ವಜಗಳು ಕಾಣಿಸಿಲ್ಲ ಎಂದು ಆಲ್ಟ್‌ನ್ಯೂಸ್ ವರದಿ ಮಾಡಿದೆ. ಇದು ಲೂಧಿಯಾನದ ಬಾಬಾ ರೋಧು ಶಾಹ್‌ಜಿ ಮೇಳಕ್ಕೆ ಸಂಬಂಧಿಸಿದ್ದು ಎಂದು ತಿಳಿದುಬಂದಿದೆ. ಕೌಂಕೆ ಕಾಲನ್ ಎಂಬ ಗ್ರಾಮದಲ್ಲಿ ಬಾಬಾ ರೋಧು ಶಾಹ್‌ಜಿ ಅವರಿಗೆ ಮದ್ಯ ಸಮಾರಾಧನೆ ನಡೆಸುವ ಸಂಪ್ರದಾಯ ವರ್ಷಗಳಿಂದ ಇದೆ. ಮೊದಲಿಗೆ ನೈವೇದ್ಯ ಸಲ್ಲಿಸಿ, ಬಳಿಕ ಭಕ್ತರಿಗೆ ಅದನ್ನು ವಿತರಿಸಲಾಗುತ್ತದೆ. ರೈತರ ಪ್ರತಿಭಟನೆಗೂ, ಈ ಮದ್ಯಾರಾಧನೆಗೂ ಯಾವುದೇ ಸಂಬಂಧವಿಲ್ಲ ಎಂಬುದು ದೃಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT