ADVERTISEMENT

‌Fact Check: ಉತ್ತರ ಪ್ರದೇಶ ರಾಜ್ಯ ವಿಭಜನೆ?

​ಪ್ರಜಾವಾಣಿ ವಾರ್ತೆ
Published 15 ಜೂನ್ 2021, 19:31 IST
Last Updated 15 ಜೂನ್ 2021, 19:31 IST
ಉತ್ತರ ಪ್ರದೇಶ ವಿಭಜನೆ ಕುರಿತು ಓಡಾಡುತ್ತಿರುವ ನಕಲಿ ಪೋಸ್ಟರ್
ಉತ್ತರ ಪ್ರದೇಶ ವಿಭಜನೆ ಕುರಿತು ಓಡಾಡುತ್ತಿರುವ ನಕಲಿ ಪೋಸ್ಟರ್   

ಹೆಚ್ಚು ಜನಸಂಖ್ಯೆ ಇರುವ ಉತ್ತರ ಪ್ರದೇಶ ರಾಜ್ಯವು ಮೂರು ಹೋಳಾಗಲಿದೆ. ರಾಜ್ಯವನ್ನು ಒಡೆದು ಮೂರು ಪ್ರತ್ಯೇಕ ರಾಜ್ಯ ಮಾಡಲಾಗುತ್ತದೆ. ಉತ್ತರ ಪ್ರದೇಶ, ಪೂರ್ವಾಂಚಲ ಮತ್ತು ಬುಂದೇಲ್‌ಖಂಡ ರಾಜ್ಯಗಳು ಜನ್ಮತಾಳಲಿವೆ. ಈ ಬಗ್ಗೆ ಕೇಂದ್ರ ಸರ್ಕಾರವು ಪ್ರಸ್ತಾವ ಇಟ್ಟಿದೆ – ಎಂಬ ಪೋಸ್ಟ್‌ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಸಾಕಷ್ಟು ಓಡಾಡುತ್ತಿದೆ. ವಿಧಾನಸಭಾ ಚುನಾವಣೆಗೂ ಮುನ್ನವೇ ರಾಜ್ಯ ವಿಭಜನೆ ನಡೆಯಲಿದೆ ಎಂದು ಚರ್ಚೆಯಾಗುತ್ತಿದೆ.

ಈ ಸಂದೇಶ ಸುಳ್ಳು ಎಂದು ತಿಳಿಸುವ ಪುರಾವೆಗಳನ್ನು ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ವೇದಿಕೆ ಒದಗಿಸಿದೆ. ಕೇಂದ್ರ ಯಾವುದೇ ಪ್ರಸ್ತಾವ ಕಳುಹಿಸಿಲ್ಲ ಎಂದು ಜೂನ್ 12ರಂದು ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿತ್ತು. ಸಚಿವ ಸಿದ್ಧಾರ್ಥನಾಥ್ ಸಿಂಗ್ ಅವರು ಈ ಸಂದೇಶ ಸುಳ್ಳು ಎಂದು ತಿಳಿಸಿದ್ದಾರೆ. ಪಿಐಬಿ ಹಾಗೂ ಕೇಂದ್ರ ಸರ್ಕಾರದ ಸಾರ್ವಜನಿಕ ಸಂಪರ್ಕ ಇಲಾಖೆ ಸಹ ಇದು ಸುಳ್ಳು ಎಂದಿವೆ. 2011ರಲ್ಲಿ ಬಿಎಸ್‌ಪಿ ನಾಯಕಿ ಮಾಯಾವತಿ ಅವರು ರಾಜ್ಯ ವಿಭಜಿಸಿ ನಾಲ್ಕು ರಾಜ್ಯಗಳನ್ನು ಸೃಷ್ಟಿಸುವ ಪ್ರಸ್ತಾವ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT