ADVERTISEMENT

Fact Check| ಅರಬ್ ಅರಸನಿಗೆ ಕೇಸರಿ ಶಾಲು ಹೊದಿಸಿದರೇ ಮೋದಿ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಸೆಪ್ಟೆಂಬರ್ 2021, 19:30 IST
Last Updated 12 ಸೆಪ್ಟೆಂಬರ್ 2021, 19:30 IST
ಪ್ರಧಾನಿ ಮೋದಿ ಮತ್ತು ಸೌದಿ ಅರಸ
ಪ್ರಧಾನಿ ಮೋದಿ ಮತ್ತು ಸೌದಿ ಅರಸ   

ಅಬುಧಾಬಿಯ ರಾಜಕುಮಾರ ಮೊಹಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ಜತೆ ಪ್ರಧಾನಿ ನರೇಂದ್ರ ಮೋದಿ ಅವರು ಇರುವ ಚಿತ್ರವೊಂದು ಇತ್ತೀಚೆಗೆ ವೈರಲ್ ಆಗಿದೆ. ನಹ್ಯಾನ್ ಅವರು ಕೇಸರಿ ನಿಲುವಂಗಿ ಹಾಗೂ ಶಾಲು ಧರಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಫೇಸ್‌ಬುಕ್‌ನಲ್ಲಿ ಪ್ರಕಟವಾಗಿರುವ ಈ ಚಿತ್ರವನ್ನು ಹಲವರು ಶೇರ್ ಮಾಡಿಕೊಂಡಿದ್ದಾರೆ. ‘ಜೈಹೋ ಮೋದಿಜೀ. ಅರಬ್ ರಾಜಕುಮಾರನನ್ನೂ ಕೇಸರಿಮಯ ಮಾಡಿದ್ದೀರಿ. ಜೈ ಶ್ರೀರಾಮ್’ ಎಂಬುದಾಗಿ ಪೂಜಾ ರಜಪೂತ್ ಎಂಬುವರು ಉಲ್ಲೇಖಿಸಿದ್ದಾರೆ.

ಈ ಚಿತ್ರವನ್ನು ಫೊಟೊಶಾಪ್ ಮೂಲಕ ತಿದ್ದಲಾಗಿದೆ ಎಂದು ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ವೇದಿಕೆ ತಿಳಿಸಿದೆ. ತಿರುಚಲಾಗಿದೆ ಎಂದು ಮೇಲ್ನೋಟಕ್ಕೇ ಕಂಡುಬಂದರೂ ಜನರು ಶೇರ್ ಮಾಡುತ್ತಿದ್ದಾರೆ. ಚಿತ್ರವನ್ನು ರಿವರ್ಸ್ ಇಮೇಜ್ ಮೂಲಕ ಪರಿಶೀಲಿಸಿದಾಗ, 2019ರಲ್ಲಿ ಮೋದಿ ಅವರು ಯುಎಇಗೆ ಭೇಟಿ ನೀಡಿದಾಗ ಸೆರೆಹಿಡಿದ ಚಿತ್ರ ಎಂಬುದು ದೃಢಪಟ್ಟಿದೆ. ಮೋದಿ ಅವರಿಗೆ ಅತ್ಯುನ್ನತ ನಾಗರಿಕ ಗೌರವ ದಿ ಆರ್ಡರ್‌ ಆಫ್‌ ದಿ ಜಾಯೇದ್ ಪುರಸ್ಕಾರ ನೀಡುವ ಸಂದರ್ಭದಲ್ಲಿ ತೆಗೆದ ಈ ಚಿತ್ರವನ್ನು ಹಲವು ಸುದ್ದಿಮಾಧ್ಯಮಗಳು ಅಂದು ಪ್ರಕಟಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT