ADVERTISEMENT

ಫ್ಯಾಕ್ಟ್‌ಚೆಕ್‌: ರಾಹುಲ್‌ ಕುರಿತು ವೈರಲ್‌ ಆಗಿರುವುದು ತಿರುಚಲಾಗಿರುವ ವಿಡಿಯೊ!

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 23:30 IST
Last Updated 10 ಆಗಸ್ಟ್ 2022, 23:30 IST
   

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಭಾಷಣದ ವಿಡಿಯೊ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ‘ದೇಶದ ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ಕಾಂಗ್ರೆಸ್‌ ಹೋರಾಡುತ್ತಿದೆ’ ಎಂದು ರಾಹುಲ್‌ ಹೇಳಿದ್ದಾರೆ. ನಾಲ್ಕು ಸೆಕೆಂಡ್‌ಗಳ ಈ ವಿಡಿಯೊ ತುಣುಕನ್ನು ಮೊದಲಿಗೆ ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್‌ ಮಾಳವೀಯ ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದರು. ‘ರಾಹುಲ್‌ ಅವರ ಹೇಳಿಕೆಗಳು ಕೇವಲ ಬಾಲಿಶತನದಿಂದ ಕೂಡಿರುವುದಿಲ್ಲ. ಬದಲಾಗಿ ಅಪಾಯಕಾರಿಯೂ ಆಗಿರುತ್ತವೆ’ ಎಂದು ಅವರು ವಿಡಿಯೊ ಜೊತೆ ವಿವರಣೆ ನೀಡಿದ್ದರು.

ವೈರಲ್‌ ಆಗಿರುವುದು ತಿರುಚಲಾಗಿರುವ ವಿಡಿಯೊ ಎಂದು ‘ದಿ ಲಾಜಿಕಲ್‌ ಇಂಡಿಯನ್‌’ ವೇದಿಕೆ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ. ಮೂಲ ವಿಡಿಯೊವನ್ನು ‘ಇಂಡಿಯಾ ಟುಡೆ’ ಆಗಸ್ಟ್‌ 5ರಂದು ಪ್ರಕಟಿಸಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ ದೇಶದ ಆರ್ಥಿಕ, ಸಾಂಸ್ಥಿಕ ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಂಡಿವೆ. ದೇಶದ ಎಲ್ಲಾ ಸಂಸ್ಥೆಗಳೂ ಬಿಜೆಪಿ, ಆರ್‌ಎಸ್‌ಎಸ್‌ ಅಣತಿಯಂತೆ ಕೆಲಸ ಮಾಡುತ್ತಿವೆ. ಆದರೆ ಯುಪಿಎ ಕಾಲದಲ್ಲಿ ಆ ಎಲ್ಲಾ ಸಂಸ್ಥೆಗಳನ್ನು ಕಾಂಗ್ರೆಸ್‌ ಬಳಸಿಕೊಂಡಿತ್ತು ಎಂದು ಆರೋಪಿಸಲಾಗುತ್ತಿದೆ ಎಂದುರಾಹುಲ್‌ ತಮ್ಮ ಸುದೀರ್ಘ ಭಾಷಣದಲ್ಲಿ ಹೇಳಿದ್ದಾರೆ. ಮಾಳವೀಯ ಅವರು ರಾಜಕೀಯ ಕಾರಣಕ್ಕಾಗಿ ಈ ವಿಡಿಯೊವನ್ನು ತಿರುಚಿ ತಪ್ಪು ಅರ್ಥ ಬರುವಂತೆ ಬಿಂಬಿಸಿದ್ದಾರೆ ಎಂದು ಫ್ಯಾಕ್ಟ್‌ಚೆಕ್‌ನಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT