ADVERTISEMENT

Fact check: ಶಿಕ್ಷಕರಿಗೆ ಪ್ರತ್ಯೇಕ ಲಾಂಛನ ಬಿಡುಗಡೆಗೆ ಒಪ್ಪಿಗೆ?

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 22:23 IST
Last Updated 21 ಸೆಪ್ಟೆಂಬರ್ 2021, 22:23 IST
   

ದೇಶದಲ್ಲಿ ಶಿಕ್ಷಕ ಸಮುದಾಯ ದೊಡ್ಡ ಸಂಖ್ಯೆಯಲ್ಲಿದೆ. ಇಂತಹ ಬೃಹತ್ ಸಮುದಾಯವನ್ನು ಗುರುತಿಸಲು ಒಂದು ಪ್ರತ್ಯೇಕ ಲಾಂಛನ ರಚಿಸಲಾಗಿದೆ. ಇದು ಶಿಕ್ಷಕ ವೃಂದದ ಪ್ರತಿಬಿಂಬದಂತಿದೆ. ಈ ಲಾಂಛನವನ್ನು ಶಿಕ್ಷಕರು ತಮ್ಮ ವಾಹನಗಳ ಮೇಲೆ ಅಂಟಿಸಿಕೊಳ್ಳಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಹೀಗೊಂದು ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಶಿಕ್ಷಕರಿಗೆ ಪ್ರತ್ಯೇಕ ಲಾಂಛನ ಬಿಡುಗಡೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ ಎಂಬುದು ಸುಳ್ಳು ಸುದ್ದಿ ಎಂದು ಪಿಐಬಿ ಫ್ಯಾಕ್ಟ್ ಚೆಕ್ ವೇದಿಕೆ ಖಚಿತಪಡಿಸಿದೆ. ಸುಪ್ರೀಂ ಕೋರ್ಟ್ ಇಂತಹ ಯಾವುದೇ ಆದೇಶವನ್ನು ಹೊರಡಿಸಿಲ್ಲ. ಇಂತಹ ಆಧಾರರಹಿತ ಸಂದೇಶಗಳನ್ನು ಇತರರಿಗೆ ಕಳುಹಿಸಬೇಡಿ ಎಂದು ಸೂಚಿಸಿದ್ದು, ಗೊಂದಲಕ್ಕೆ ಒಳಗಾಗದಂತೆ ಶಿಕ್ಷಕ ಸಮುದಾಯಕ್ಕೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT