ADVERTISEMENT

fact check: ಮನುಷ್ಯರಿಗೂ ಹರಡುತ್ತಿದೆಯೇ ಚರ್ಮಗಂಟು ರೋಗ?

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2022, 19:30 IST
Last Updated 11 ಅಕ್ಟೋಬರ್ 2022, 19:30 IST
ಮನುಷ್ಯರಿಗೂ ಹರಡುತ್ತಿದೆಯೇ ಚರ್ಮಗಂಟು ರೋಗ
ಮನುಷ್ಯರಿಗೂ ಹರಡುತ್ತಿದೆಯೇ ಚರ್ಮಗಂಟು ರೋಗ   

ದೇಶದ ಸಾವಿರಾರು ಜಾನುವಾರುಗಳುಚರ್ಮಗಂಟು ರೋಗದಿಂದ (ಎಲ್‌ಎಸ್‌ಡಿ) ಬಳಲುತ್ತಿವೆ. ಹಲವು ಜಾನುವಾರುಗಳು ಮೃತಪಟ್ಟಿವೆ.ಕ್ಯಾಪ್ರಿಪಾಕ್ಸ್ ಎಂಬ ವೈರಾಣುವಿನ ಮೂಲಕ ಒಂದು ಜಾನುವಾರುವಿನಿಂದ ಮತ್ತೊಂದಕ್ಕೆ ಇದು ಹರಡುತ್ತದೆ. ಆದರೆ, ಈ ಸೋಂಕು ಜಾನುವಾರುಗಳ ಮೂಲಕ ಮನುಷ್ಯರಿಗೂ ಹರಡುತ್ತಿದೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ರೋಗ ತಗುಲಿದೆ ಎನ್ನಲಾದ ವ್ಯಕ್ತಿಯೊಬ್ಬರ ಚಿತ್ರವೊಂದು ವೈರಲ್ ಆಗಿದ್ದು, ವ್ಯಕ್ತಿಯ ಮೈಮೇಲೆ ಗಂಟುಗಳು ಮೂಡಿರುವುದು ಕಾಣಿಸುತ್ತದೆ. ಹಲವರು ಈ ರೋಗದಿಂದ ಮೃತಪಟ್ಟಿದ್ದಾರೆ ಎಂದೂ ಸುದ್ದಿಯಾಗುತ್ತಿದೆ. ಆದರೆ ಇದು ಸುಳ್ಳು.

ಚರ್ಮಗಂಟು ರೋಗವು ಜಾನುವಾರುಗಳಲ್ಲಿ ಮಾತ್ರ ಕಂಡುಬರುವ ಸೋಂಕು ಎಂದು ವೈದ್ಯಕೀಯ ತಜ್ಞರು ಸ್ಪಷ್ಟಪಡಿಸಿದ್ದಾರೆ. ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ರೋಗಗಳ (ಝೊನೊಟಿಕ್) ಸಾಲಿನಲ್ಲಿ ಈ ರೋಗ ಬರುವುದಿಲ್ಲ. ರೋಗಪೀಡಿತ ಜಾನುವಾರುವಿನಿಂದ ಮನುಷ್ಯರಿಗೆ ಈ ಸೋಕು ಹರಡಿರುವ ಯಾವ ನಿದರ್ಶನವೂ ಇಲ್ಲ. ವೈರಲ್ ಆಗಿರುವ ಚಿತ್ರದಲ್ಲಿರುವ ವ್ಯಕ್ತಿ ಪಾಕಿಸ್ತಾನದವರು. ಪೆಮ್ಫಿಗಸ್ ವಲ್ಗ್ಯಾರಿಸ್ ಮತ್ತು ಸರ್ಪಸುತ್ತು ಸೋಂಕು ತಗುಲಿದ್ದ ಈ ವ್ಯಕ್ತಿ ಗುಣಮುಖರಾಗಿ ಲಾಹೋರ್‌ನ ಜಿನ್ನಾ ಆಸ್ಪತ್ರೆಯಿಂದ ಮನೆಗೆ ಹೋಗಿದ್ದಾರೆ ಎಂದು ‘ದಿ ಕ್ವಿಂಟ್’ ಜಾಲತಾಣ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT