ADVERTISEMENT

Fact Check: ಸೂರ್ಯಗ್ರಹಣದ ಮಾಹಿತಿಗೆ ನಾಸಾ ಪಂಚಾಂಗ ಬಳಕೆ?

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2022, 19:30 IST
Last Updated 13 ಡಿಸೆಂಬರ್ 2022, 19:30 IST
   

ಸೂರ್ಯಗ್ರಹಣ ಸಂಭವಿಸುವ ವಿಶ್ವಾಸಾರ್ಹ ಮಾಹಿತಿಯನ್ನು ಹಿಂದೂ ಪಂಚಾಗದ ಮೂಲಕ ಮಾತ್ರವೇ ಪಡೆಯಬಹುದು ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧಾನಾ ಸಂಸ್ಥೆ (ನಾಸಾ) ಒಪ್ಪಿಕೊಂಡಿದೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ‘₹120 ಕೋಟಿ ಖರ್ಚು ಮಾಡಿ, ಮೂರು ಬಾರಿ ಅಭಿಪ್ರಾಯವನ್ನು ಬದಲಿಸಿದ ಬಳಿಕ, ಪಂಚಾಂಗದಲ್ಲಿ ಮಾತ್ರ ಸೂರ್ಯಗ್ರಹಣದ ಖಚಿತ ಮಾಹಿತಿ ಇದೆ ಎಂಬುದನ್ನು ನಾಸಾ ಒಪ್ಪಿಕೊಂಡಿದೆ’ ಎಂಬ ಪೋಸ್ಟ್‌ ಹರಿದಾಡುತ್ತಿದೆ. ಇದು ನಾಸಾದ ಖಗೋಳಶಾಸ್ತ್ರಜ್ಞರೊಬ್ಬರ ಹೇಳಿಕೆಯನ್ನು ಆಧರಿಸಿದೆ ಎಂದು ಹೇಳಲಾಗಿದೆ. ಆದರೆ ಇದು ದಾರಿ ತಪ್ಪಿಸುವ ಮಾಹಿತಿ.

ಸೂರ್ಯಗ್ರಹಣದ ಮಾಹಿತಿಗೆ ಪಂಚಾಂಗವನ್ನು ಬಳಕೆ ಮಾಡುವುದಾಗಿ ನಾಸಾ ಹೇಳಿಕೊಂಡಿಲ್ಲ ಎಂದು ‘ಲಾಜಿಕಲ್ ಇಂಡಿಯನ್’ ತಿಳಿಸಿದೆ. ಸೂರ್ಯಗ್ರಹಣವನ್ನು ಗಣಿತಶಾಸ್ತ್ರ ಹಾಗೂ ನ್ಯೂಟನ್‌ ಚಲನೆಯ ನಿಯಮಗಳ ಆಧಾರದಲ್ಲಿ ಖಚಿತವಾಗಿ ಲೆಕ್ಕಹಾಕುವ ಸಂಪೂರ್ಣ ವಿಧಾನವನ್ನು ನಾಸಾ ತನ್ನ ಜಾಲತಾಣದಲ್ಲಿ ಪ್ರಕಟಿಸಿದೆ. ಗ್ರಹಣ ಹಾಗೂಹಿಂದೂ ಪಂಚಾಂಗಕ್ಕೆ ಸಂಬಂಧಿಸಿದಂತೆ ನಾಸಾದ ಅಧಿಕೃತ ಜಾಲತಾಣದ ವೇದಿಕೆಯೊಂದರಲ್ಲಿ ನಡೆದ ಚರ್ಚೆಯಲ್ಲಿ ಭಾಗಿಯಾಗಿದ್ದ ನಾಸಾದ ಖಗೋಳಶಾಸ್ತ್ರಜ್ಞರು,ಗ್ರಹಣಗಳ ಬಗ್ಗೆ ಪ್ರಾಚೀನ ಹಿಂದೂಗಳಿಗೆ ಗೊತ್ತಿತ್ತು ಎನಿಸುತ್ತದೆ ಎಂದು ವ್ಯಕ್ತಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ್ದರು. ಆದರೆ, ಪಂಚಾಂಗ ಆಧರಿಸಿ ಗ್ರಹಣದ ಮಾಹಿತಿಯನ್ನು ನಾಸಾ ನೀಡುತ್ತದೆ ಎಂಬುದು ಸತ್ಯಕ್ಕೆ ದೂರವಾದುದು. ಸಾಮಾಜಿಕ ಜಾಲತಾಣಗಳಲ್ಲಿರುವ ಪೋಸ್ಟ್‌ನ ಮೂಲ ಮಾಹಿತಿಯು, ವಿಡಂಬನಾ ಬರಹಗಳನ್ನು ಪ್ರಕಟಿಸುವ ‘ದಿ ಫಾಕ್ಸಿ’ ಎಂಬ ವೆಬ್‌ಸೈಟ್‌ನಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT