ADVERTISEMENT

ಫ್ಯಾಕ್ಟ್ ಚೆಕ್: ಬ್ಯಾಂಕ್‌ಗಳ ಖಾಸಗೀಕರಣ ಸುದ್ದಿ ಎಷ್ಟು ಸತ್ಯ?

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2022, 19:30 IST
Last Updated 22 ಆಗಸ್ಟ್ 2022, 19:30 IST
   

ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಬಿಟ್ಟು, ಸರ್ಕಾರಿ ಸ್ವಾಮ್ಯದ ಎಲ್ಲ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡಲು ಸರ್ಕಾರ ನಿರ್ಧರಿಸಿದೆ ಎಂಬುದಾಗಿ ‘ಝೀನ್ಯೂಸ್ ಹಿಂದಿ’ ಸೇರಿದಂತೆ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಸಾಮಾಜಿಕ ಜಾಲತಾಣಗಳಲ್ಲಿ ಇದರ ಬಗ್ಗೆ ಚರ್ಚೆಯಾಗುತ್ತಿದೆ. ಬಂಡವಾಳ ಹಿಂತೆಗೆತ ನೀತಿಯಡಿ 2 ಬ್ಯಾಂಕ್‌ಗಳ ಖಾಸಗೀಕರಣ ಮಾಡುವುದಾಗಿ ಹಣಕಾಸು ಸಚಿವರು 2021–22ರ ಸಾಲಿನ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದರು ಎಂಬುದಾಗಿಯೂ ಚರ್ಚೆಯಾಗುತ್ತಿದೆ.

ನೀತಿ ಆಯೋಗದ ಮಾಜಿ ಉಪಾಧ್ಯಕ್ಷ ಅರವಿಂದ ಪನಗರಿಯಾ ಹಾಗೂ ಎನ್‌ಸಿಎಇಆರ್‌ ಮಹಾನಿರ್ದೇಶಕಿ ಪೂನಂ ಗುಪ್ತಾ ಅವರು ‘ಭಾರತ ನೀತಿ ವೇದಿಕೆ’ಗೆ ಸಲ್ಲಿಸಿರುವ ವರದಿಯಲ್ಲಿ, ಎಸ್‌ಬಿಐ ಬಿಟ್ಟು ಉಳಿದ ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಪ್ರಸ್ತಾವ ಇರಿಸಿದ್ದರು. ಈ ಪ್ರಸ್ತಾವವನ್ನೇ ನಿರ್ಧಾರ ಎಂಬುದಾಗಿ ತಪ್ಪಾಗಿ ವರದಿ ಮಾಡಲಾಗಿದೆ. ಖಾಸಗೀಕರಣದ ಬಗ್ಗೆ ಸರ್ಕಾರ ಈವರೆಗೆ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಕೇಂದ್ರ ಸಚಿವ ಭಾಗವತ್ ಕರಾಡ್ ಅವರು ಲೋಕಸಭೆಗೆ ತಿಳಿಸಿದ್ದರು. ಈ ಪ್ರಕ್ರಿಯೆ ಆರಂಭಿಸಬೇಕಾದರೆ, ಬ್ಯಾಂಕಿಂಗ್‌ ಕಾಯ್ದೆಗೆ ತಿದ್ದುಪಡಿ ತರಬೇಕಿದೆ ಎಂಬುದನ್ನು ಅವರು ಉಲ್ಲೇಖಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT