ADVERTISEMENT

Fact Check | ಮುಸ್ಲಿಂ ರಾಷ್ಟ್ರ ಮಾಡುವ ಕನಸು: ರಾಹುಲ್ ಟ್ವೀಟ್‌ನ ಅಸಲಿಯತ್ತೇನು?

​ಪ್ರಜಾವಾಣಿ ವಾರ್ತೆ
Published 5 ಜುಲೈ 2021, 19:30 IST
Last Updated 5 ಜುಲೈ 2021, 19:30 IST
ವೈರಲ್ ಆಗಿರುವ ಟ್ವೀಟ್‌ ಚಿತ್ರ
ವೈರಲ್ ಆಗಿರುವ ಟ್ವೀಟ್‌ ಚಿತ್ರ   

‘ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಬಿಜೆಪಿ ಹೊರಟಿದೆ. ಆದರೆ ನಮ್ಮ ಪೂರ್ವಜರು ಭಾರತವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಮಾಡುವ ಕನಸು ಕಂಡಿದ್ದರು’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹೇಳಿದ್ದಾರೆ ಎಂಬ ವಿವರ ಇರುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ರಾಹುಲ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಆ ಟ್ವೀಟ್‌ ಅನ್ನು ಎಬಿಪಿ ನ್ಯೂಸ್ ತನ್ನ ಬುಲೆಟಿನ್‌ನಲ್ಲಿ ತೋರಿಸಿದೆ ಎಂದು ಹಲವರು ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ.

‘ಪೌರತ್ವ ತಿದ್ದುಪಡಿ ಮಸೂದೆಯು ಸಂವಿಧಾನದ ಮೇಲಿನ ದಾಳಿ’ ಎಂದು 2019ರ ಡಿಸೆಂಬರ್ 10ರಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು. ಆ ಟ್ವೀಟ್‌ ಅನ್ನು ಎಬಿಪಿ ನ್ಯೂಸ್ ತನ್ನ ಸುದ್ದಿ ಬುಲೆಟಿನ್‌ನಲ್ಲಿ ಪ್ರಕಟಿಸಿತ್ತು. ಆ ಸುದ್ದಿ ಬುಲೆಟಿನ್‌ನ ವಿಡಿಯೊ ಎಬಿಪಿ ನ್ಯೂಸ್‌ನ ಯುಟ್ಯೂಬ್ ಚಾನಲ್‌ನಲ್ಲಿ ಇನ್ನೂ ಲಭ್ಯವಿದೆ. ಎಬಿಪಿ ನ್ಯೂಸ್‌ನ ಸುದ್ದಿ ಬುಲೆಟಿನ್‌ ಅನ್ನು ಸ್ಕ್ರೀನ್‌ಶಾಟ್‌ ಮಾಡಿ, ಅದರಲ್ಲಿನ ಪಠ್ಯವನ್ನು ಮಾತ್ರ ಬದಲಿಸಲಾಗಿದೆ. ಮೂಲ ವಿಡಿಯೊ ಮತ್ತು ವೈರಲ್ ಆಗಿರುವ ಸ್ಕ್ರೀನ್‌ಶಾಟ್‌ನಲ್ಲಿರುವ ಅಕ್ಷರಗಳ ವಿನ್ಯಾಸ ಬೇರೆ-ಬೇರೆಯಾಗಿದೆ. ಹೀಗೆ ಸ್ಕ್ರೀನ್‌ಶಾಟ್‌ ಅನ್ನು ತಿರುಚುವ ಮೂಲಕ ರಾಹುಲ್ ಗಾಂಧಿ ಅವರ ಬಗ್ಗೆ ಸುಳ್ಳು ಸುದ್ದಿ ಸೃಷ್ಟಿಸಲಾಗಿದೆ’ ಎಂದು ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT