ADVERTISEMENT

Fact Check: ‘ನಿರುದ್ಯೋಗಿಗಳಿಗೆ ಭತ್ಯೆ’ ವೈರಲ್ ಆಗಿರುವ ಸಂದೇಶದ ಅಸಲಿಯತ್ತೇನು?

​ಪ್ರಜಾವಾಣಿ ವಾರ್ತೆ
Published 8 ಜುಲೈ 2021, 19:31 IST
Last Updated 8 ಜುಲೈ 2021, 19:31 IST
ಫ್ಯಾಕ್ಟ್‌ಚೆಕ್
ಫ್ಯಾಕ್ಟ್‌ಚೆಕ್   

‘ನಿರುದ್ಯೋಗಿಗಳಿಗೆ ಕೇಂದ್ರ ಸರ್ಕಾರವು ಕೌಶಲ ಅಭಿವೃದ್ಧಿ ಕಾರ್ಯಕ್ರಮದ ಅಡಿ ಹಣಕಾಸು ನೆರವು ನೀಡುತ್ತಿದೆ.sebd.in.net ಎಂಬ ಸಂಶೋಧನಾ ಸಂಸ್ಥೆಯು ಈ ಹಣಕಾಸು ನೆರವು ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರುತ್ತಿದೆ.sebd.in.net ಜಾಲತಾಣದಲ್ಲಿ ಇರುವ ಅರ್ಜಿ ನಮೂನೆಯನ್ನು ಭರ್ತಿ ಮಾಡಿ. ಅರ್ಜಿ ಶುಲ್ಕವನ್ನು ಪಾವತಿ ಮಾಡಿ. ನಿಮಗೆ ನಿರುದ್ಯೋಗಿ ಭತ್ಯೆ ದೊರೆಯುತ್ತದೆ’ ಎಂಬ ವಿವರ ಇರುವ ಸಂದೇಶಗಳು ಸಾಮಾಜಿಕ ಜಾಲತಾಣ ಮತ್ತು ಫೋನ್‌ ಸಂದೇಶದಲ್ಲಿ ವೈರಲ್ ಆಗಿದೆ. ಅರ್ಜಿಯನ್ನು ಭರ್ತಿ ಮಾಡಿ, ಶುಲ್ಕ ಪಾವತಿ ಮಾಡಲು ಈ ಸಂದೇಶದಲ್ಲಿರುವ ಲಿಂಕ್‌ಗಳು ನೆರವಾಗುತ್ತವೆ.

‘ನಿರುದ್ಯೋಗಿಗಳಿಗೆ ಆರ್ಥಿಕ ನೆರವು ನೀಡುವ ಯಾವುದೇ ಕಾರ್ಯಕ್ರಮವನ್ನು ಕೌಶಲ ಅಭಿವೃದ್ಧಿ ಕಾರ್ಯಕ್ರಮದ ಅಡಿ ಕೇಂದ್ರ ಸರ್ಕಾರ ಆರಂಭಿಸಿಲ್ಲ.sebd.in.net ಎಂಬ ಸಂಸ್ಥೆ ಅಡಿ ನಿರುದ್ಯೋಗ ಭತ್ಯೆ ನೀಡಲು ಯಾವುದೇ ಕಾರ್ಯಕ್ರಮ ರೂಪಿಸಿಲ್ಲ. ಈ ಸಂದೇಶದಲ್ಲಿ ಇರುವ ಮಾಹಿತಿ ಸಂಪೂರ್ಣ ಸುಳ್ಳು. ಅರ್ಜಿ ಸಲ್ಲಿಸುವಾಗ ಪಾವತಿ ಮಾಡುವ ಅರ್ಜಿ ಶುಲ್ಕವನ್ನು ಲಪಟಾಯಿಸಲು ರೂಪಿಸಿರುವ ತಂತ್ರ ಇದು. ಇಂತಹ ಸಂದೇಶಗಳ ಬಲೆಗೆ ಬೀಳಬೇಡಿ. ಅರ್ಜಿ ಶುಲ್ಕ ಪಾವತಿಸಬೇಡಿ. ನಿಮ್ಮ ಬ್ಯಾಂಕ್ ಖಾತೆ ವಿವರ, ಪಾಸ್‌ವರ್ಡ್ ಮತ್ತು ಒಟಿಪಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ’ ಎಂದು ಪಿಐಬಿ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT