ADVERTISEMENT

ಫ್ಯಾಕ್ಟ್‌ಚೆಕ್: 12 ಗಂಟೆಯೊಳಗೆ ವಾಪಸಾದರೆ ಟೋಲ್ ಶುಲ್ಕ ಪಾವತಿಸಬೇಕಿಲ್ಲ, ನಿಜವೇ?

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2022, 19:45 IST
Last Updated 24 ಆಗಸ್ಟ್ 2022, 19:45 IST
   

ದೇಶದ ಪ್ರಮುಖ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನ ಸವಾರರು ಟೋಲ್‌ಗಳಲ್ಲಿ ರಸ್ತೆ ಬಳಕೆದಾರರ ಶುಲ್ಕ ಪಾವತಿಸುತ್ತಿದ್ದಾರೆ. ಆದರೆ, ರಸ್ತೆ ಬಳಕೆದಾರಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ ಎಂದು ತಿಳಿಸುವ ಸ್ಕ್ರೀನ್‌ಶಾಟ್‌ವೊಂದು ವೈರಲ್ ಆಗಿದೆ. ‘ವಾಹನ ಸವಾರರು ತಾವು ಹೋದ ರಸ್ತೆಯಲ್ಲಿ 12 ಗಂಟೆಯೊಳಗೆ ವಾಪಸಾದರೆ, ಶುಲ್ಕ ಪಾವತಿಸಬೇಕಿಲ್ಲ’ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಇದನ್ನು ಪ್ರಕಟಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

ವಾಹನ ಸವಾರರು ಸಂಚರಿಸಿದ ರಸ್ತೆಯಲ್ಲಿ 12 ಗಂಟೆಯೊಳಗೆ ವಾಪಸಾದರೆ ಟೋಲ್ ಶುಲ್ಕ ಪಾವತಿಸಬೇಕಿಲ್ಲ ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ ಎಂದು ಪಿಐಬಿ ಫ್ಯಾಕ್ಟ್‌ಚೆಕ್ ವೇದಿಕೆ ಸ್ಪಷ್ಟಪಡಿಸಿದೆ. ಶುಲ್ಕ ವಿನಾಯಿತಿ ಬಗ್ಗೆ ಕೇಂದ್ರ ಸರ್ಕಾರವಾಗಲೀ, ಸಚಿವ ನಿತಿನ್ ಗಡ್ಕರಿ ಅವರಾಗಲೀ ಯಾವುದೇ ಆದೇಶ ಹೊರಡಿಸಿಲ್ಲ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT