ADVERTISEMENT

Fact Cehck| ಬ್ರಿಟಿಷ್ ಸೇನೆಯಲ್ಲಿದ್ದರೇ ಮಹಾತ್ಮಾ ಗಾಂಧೀಜಿ?

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 19:30 IST
Last Updated 23 ಜನವರಿ 2023, 19:30 IST
   

ಮಹಾತ್ಮ ಗಾಂಧಿ ಅವರು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಬರುವ ಮುನ್ನ ಬ್ರಿಟಿಷ್ ಸೇನೆಯ ಸೇವೆಯಲ್ಲಿದ್ದರು. ಬ್ರಿಟನ್‌ ಸೇನೆಯಲ್ಲಿ ಅವರು ಇದ್ದಾಗ ತೆಗೆಸಿಕೊಂಡ ಚಿತ್ರ ಇದು ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಜತೆಗೆ ಕಪ್ಪು–ಬಿಳುಪಿನ ಚಿತ್ರವನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಆದರೆ, ಈ ಚಿತ್ರದ ಜತೆಗೆ ನೀಡಿರುವ ವಿವರ ಸುಳ್ಳು.

ಮಹಾತ್ಮ ಗಾಂಧಿ ಅವರು ಬ್ರಿಟಿಷ್ ಸೇನೆಯಲ್ಲಿ ಎಂದಿಗೂ ಸೇವೆಯಲ್ಲಿರಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿರುವ ಚಿತ್ರಕ್ಕೂ, ಅವರು ಬ್ರಿಟಿಷ್ ಸೇವೆಯಲ್ಲಿದ್ದರು ಎಂಬುದಕ್ಕೂ ಸಂಬಂಧವಿಲ್ಲ. ಗಾಂಧಿ ಅವರು ದಕ್ಷಿಣ ಆಫ್ರಿಕಾದಲ್ಲಿ ಇದ್ದಾಗ, ಎರಡು ಫುಟ್‌ಬಾಲ್‌ ತಂಡಗಳನ್ನು ಕಟ್ಟಿದ್ದರು. ಆ ಎರಡೂ ತಂಡಗಳ ಜತೆಗೆ 1913ರಲ್ಲಿ ಸಿರ್ಕಾದಲ್ಲಿ ಗಾಂಧಿ ಅವರು ತೆಗೆಸಿಕೊಂಡಿದ್ದ ಚಿತ್ರ ಇದು. ಈ ಚಿತ್ರವನ್ನು ತಪ್ಪು ಮಾಹಿತಿಗಳೊಂದಿಗೆ ಹಂಚಿ ಕೊಳ್ಳಲಾಗಿದೆ. ಗಾಂಧಿ ಅವರು ಬ್ರಿಟಿಷ್‌ ಸೇನೆಗಾಗಿ ಸ್ವಯಂಪ್ರೇರಿತವಾಗಿ ಆಂಬುಲೆನ್ಸ್‌ ಕೋರ್‌ ಅನ್ನು ಸ್ಥಾಪಿಸಿದ್ದರು ಎಂದು ಇತಿಹಾಸಕಾರ ರಾಮಚಂದ್ರ ಗುಹಾ ಅವರು ಹೇಳಿದ್ದಾರೆ. ಆದರೆ, ಗಾಂಧಿ ಅವರು ಬ್ರಿಟಿಷ್‌ ಸೇನೆಯ ಸೇವೆಯಲ್ಲಿ ಇದ್ದರು ಎಂಬುದು ತಪ್ಪು ಮಾಹಿತಿ ಎಂದು ಆಲ್ಟ್‌ನ್ಯೂಸ್‌ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT