ADVERTISEMENT

Fact Check: ರಾಮ ಮಂದಿರ ನಿರ್ಮಾಣ ಕುರಿತು ವೈರಲ್ ಆಗಿರುವ ವಿಡಿಯೊದ ಅಸಲಿಯತ್ತೇನು?

​ಪ್ರಜಾವಾಣಿ ವಾರ್ತೆ
Published 6 ಜುಲೈ 2021, 19:31 IST
Last Updated 6 ಜುಲೈ 2021, 19:31 IST
   

‘ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿದೆ. ಇಲ್ಲಿದೆ ನೋಡಿ ಅದ್ಭುತವಾದ ರಾಮ ಮಂದಿರ. ದೇವಾಲಯದ ವಿನ್ಯಾಸವನ್ನು ನೋಡಿ. ಅದ್ಭುತವಾದ ಕೆತ್ತನೆಯನ್ನು ನೋಡಿ’ ಎಂಬ ವಿವರ ಇರುವ 3 ನಿಮಿಷಗಳ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಫೇಸ್‌ಬುಕ್‌ನಲ್ಲಿ ಈ ವಿಡಿಯೊವನ್ನು ಹೆಚ್ಚು ಬಾರಿ ಹಂಚಿಕೊಳ್ಳಲಾಗಿದೆ. ಜತೆಗೆ ವಾಟ್ಸ್‌ಆ್ಯಪ್‌ನಲ್ಲಿಯೂ ಈ ವಿಡಿಯೊ ವೈರಲ್ ಆಗಿದೆ. ವಿಡಿಯೊದಲ್ಲಿ ಇರುವ ಮಂದಿರಕ್ಕೆ ಸಂಬಂದಿಸಿದಂತೆ ಕನ್ನಡದಲ್ಲಿ ವಿವರ ಇರುವ ಪೋಸ್ಟರ್‌ಗಳೂ ವೈರಲ್ ಆಗಿವೆ.

ಈ ಪೋಸ್ಟರ್ ಮತ್ತು ವಿಡಿಯೊವಿನ ಅಸಲಿಯತ್ತನ್ನು ದಿ ಲಾಜಿಕಲ್ ಇಂಡಿಯನ್ ಪರಿಶೀಲಿಸಿದೆ. ‘ವಿಡಿಯೊದಲ್ಲಿ ಇರುವ ದೇವಾಲಯದ ದೃಶ್ಯವನ್ನು ಸ್ಕ್ರೀನ್‌ಶಾಟ್ ಮಾಡಿ, ಗೂಗಲ್ ರಿವರ್ಸ್ ಇಮೇಜ್ ಸರ್ಚ್‌ನಲ್ಲಿ ಹುಡುಕಿದೆವು. ಇದು ಅಯೋಧ್ಯೆಯ ರಾಮ ಮಂದಿರವಾಗಿರದೆ, ಗುಜರಾತ್‌ನ ಜೈನ ತರಂಗ ತೀರ್ಥ ಧಾಮ ಎಂಬುದು ಪತ್ತೆಯಾಯಿತು. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌, ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಗಾಗ್ಗೆ ಅಧಿಕೃತ ಮಾಹಿತಿಯನ್ನು ನೀಡುತ್ತಿರುತ್ತದೆ. 2021ರ ಮೇ 30ರಂದು ಈ ಟ್ರಸ್ಟ್‌ ಟ್ವೀಟ್ ಮಾಡಿದ್ದು, ರಾಮ ಮಂದಿರದ ಅಡಿಪಾಯ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದೆ. ಹೀಗಾಗಿ ವಿಡಿಯೊದಲ್ಲಿ ಇರುವ ದೇವಾಲಯ ಅಯೋಧ್ಯೆಯ ರಾಮ ಮಂದಿರ ಅಲ್ಲ ಎಂಬುದು ಸ್ಪಷ್ಟ’ ಎಂದು ದಿ ಲಾಜಿಕಲ್ ಇಂಡಿಯನ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT