ADVERTISEMENT

Fact Check: ಕೋವಿಡ್‌ ಮೃತರ ಅಂತಿಮ ಸಂಸ್ಕಾರಕ್ಕೆ ಡೀಲ್ ಕುದುರಿಸಲಾಗುತ್ತದೆಯೇ?

​ಪ್ರಜಾವಾಣಿ ವಾರ್ತೆ
Published 10 ಮೇ 2021, 19:31 IST
Last Updated 10 ಮೇ 2021, 19:31 IST
   

‘ಬೆಂಗಳೂರಿನಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಅಂತಿಮ ಸಂಸ್ಕಾರಕ್ಕೆ 35 ಸಾವಿರ ರೂಪಾಯಿಗೆ ಡೀಲ್ ಕುದುರಿಸಿಕೊಳ್ಳಲಾಗುತ್ತದೆ. ಡೀಲ್ ಕುದುರಿಸಿಕೊಂಡ ಏಜೆನ್ಸಿ 5-8 ಜನ ಮುಸ್ಲಿಮರಿಗೆ 7-8 ಸಾವಿರ ರೂಪಾಯಿ ನೀಡಿ ಮೃತ ದೇಹವನ್ನು ದಹನಕ್ಕೆ ನೀಡುತ್ತದೆ. ದಹನದ ವೇಳೆ ಟೋಪಿ ಹಾಕಿಕೊಂಡು ಮುಸ್ಲಿಮರು ದೊಡ್ಡ ಸಮಾಜ ಸೇವೆ ಮಾಡಿದಂತೆ ಪೋಸ್‌ ಕೊಡುತ್ತಾರೆ’ ಎಂಬ ಪೋಸ್ಟರ್‌ ಅನ್ನು ಪೋಸ್ಟ್‌ಕಾರ್ಡ್ ಕನ್ನಡ ತನ್ನ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದೆ. ಮುಸ್ಲಿಮರು, ಹಿಂದೂಗಳ ಅಂತ್ಯಸಂಸ್ಕಾರ ನಡೆಸುತ್ತಿರುವ ಎರಡು ಚಿತ್ರಗಳ ಕೊಲಾಜ್ ಅನ್ನು ಹಂಚಿಕೊಳ್ಳಲಾಗಿದೆ.

ಇದು ಸುಳ್ಳುಸುದ್ದಿ ಎಂದು ಆಲ್ಟ್‌ನ್ಯೂಸ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. ಈ ಪೋಸ್ಟರ್‌ನಲ್ಲಿ ಬಳಸಿಕೊಂಡಿರುವ ಒಂದು ಚಿತ್ರವು ದೆಹಲಿಯದ್ದು. ಆ ಫೋಟೊವನ್ನು ಪಿಟಿಐ ಛಾಯಾಗ್ರಾಹಕ ಮನ್ವಿಂದರ್ ವಸಿಷ್ಠ ಲವ ಟ್ವೀಟ್ ಮಾಡಿದ್ದರು. ಎರಡನೇ ಚಿತ್ರವು ಬೆಂಗಳೂರಿನದ್ದು. ಅದರಲ್ಲಿ ಪಿಎಫ್‌ಐ ಸದಸ್ಯರು ಹಿಂದೂವೊಬ್ಬರ ಅಂತ್ಯಸಂಸ್ಕಾರಕ್ಕೆ ನೆರವು ನೀಡುವ ದೃಶ್ಯವಿದೆ. ಆ ಚಿತ್ರವನ್ನು ಬೆಂಗಳೂರಿನ ಲೋಕೇಶ್ ಎಂಬುವವರು ಪೋಸ್ಟ್ ಮಾಡಿದ್ದರು. ಅವರು ಈಗ ಸ್ಪಷ್ಟನೆ ನೀಡಿದ್ದಾರೆ. ‘ಪಿಎಫ್‌ಐ ಸಂಘಟನೆಯವರು ಉಚಿತವಾಗಿ ಈ ಸೇವೆ ನೀಡಿದ್ದಾರೆ. ಪೋಸ್ಟ್‌ಕಾರ್ಡ್ ವೈರಲ್ ಮಾಡಿರುವ ಸುದ್ದಿ ಸುಳ್ಳು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT