ADVERTISEMENT

ಮತ್ತೆ ಬಂದಿದೆ ಬೆಂಗಳೂರು ಕೇಕ್ ಷೋ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2020, 19:30 IST
Last Updated 23 ಡಿಸೆಂಬರ್ 2020, 19:30 IST
ಕೊರೊನಾ ಕೇಕ್‌
ಕೊರೊನಾ ಕೇಕ್‌   

ಕೊರೊನಾದ ಕರಾಳ ದಿನಗಳನ್ನು ಕಳೆದು ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂಭ್ರಮವನ್ನು ಎದುರುಗಾಣಲು ಸಜ್ಜಾಗುತ್ತಿದ್ದೇವೆ. ಕ್ರಿಸ್‌ಮಸ್ ಹಾಗೂ ಹೊಸವರ್ಷದ ರಂಗನ್ನು ಹೆಚ್ಚಿಸಲು ಪ್ರತಿ ವರ್ಷದಂತೆ ಈ ವರ್ಷವೂ ಬೆಂಗಳೂರಿನಲ್ಲಿ ಕೇಕ್ ಷೋ ಆಯೋಜಿಸಲಾಗಿದೆ. ಕಳೆದ 46 ವರ್ಷಗಳಿಂದ ನಗರದಲ್ಲಿ ನಡೆಯುತ್ತಿರುವ ಕೇಕ್‌ ಪ್ರದರ್ಶನದಲ್ಲಿ ವಿಭಿನ್ನ ಪರಿಕಲ್ಪನೆಯ ಕೇಕ್‌ಗಳು ಜನರನ್ನು ಸೆಳೆಯುತ್ತಿದ್ದವು. ಈ ಬಾರಿ ಕೇಕ್ ಪ್ರದರ್ಶನದ ವಿಶೇಷತೆ ಎಂದರೆ ಕೇಕ್‌ಗಳಿಗೆ ಕಲಾತ್ಮಕ ಸ್ಪರ್ಶ ನೀಡಿರುವುದು.

ಸಿ. ರಾಮಚಂದ್ರನ್ ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ಕೇಕ್ ಪ್ರದರ್ಶನ ಆಯೋಜಿಸಿದ್ದರು. ಈ ಬಾರಿಯ ಕಲಾತ್ಮಕ ಕೇಕ್‌ಗಳ ವಿನ್ಯಾಸಕರು ಶೆಫ್‌ ಸ್ಯಾಮಿ ಜೆ. ರಾಮಚಂದ್ರನ್‌ ಅವರು. ಇವರು ‘ಶುಗರ್ ಸ್ಲ್ಕಪ್ಟ್ ಕೇಕ್ ಆರ್ಟ್‌’ ಸಂಸ್ಥೆಯ ನಿರ್ದೇಶಕರು. 2019ರಲ್ಲಿ ಅವರು ಕೇಕ್ ಹೀರೊ ಅವಾರ್ಡ್‌ ಚಾಂಪಿಯನ್ ಕೂಡ ಆಗಿದ್ದರು. ಈ ಬಾರಿ ರಾಮಚಂದ್ರನ್ ತಮ್ಮ ಎಲ್ಲಾ ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಸಿಬ್ಬಂದಿ ಜೊತೆ ಸೇರಿ 3–4 ತಿಂಗಳ ಸತತ ಶ್ರಮದ ಬಳಿಕ ಅಪರೂಪದ ಸಕ್ಕರೆ ಕಲಾಕೃತಿಗಳನ್ನು ಕೇಕ್ ಉತ್ಸವಕ್ಕಾಗಿ ಸಿದ್ಧಪಡಿಸಿದ್ದಾರೆ.

ಕೊರೊನಾ ವೈರಸ್‌, ಬಂಡೆಯ ಮೇಲೆ ಕುಳಿತಿರುವ ಸಿಂಹ, ವಾಲುತ್ತಿರುವ ಪೀಸಾ ಗೋಪುರ, ನಟರಾಜ ಮೂರ್ತಿ, ಗಂಧರ್ವ ಲೋಕ, ಡೊರೆಮನ್ ಮುಂತಾದ ಕಲಾಕೃತಿಗಳ ಕೇಕ್‌ಗಳು ಪ್ರದರ್ಶನದಲ್ಲಿವೆ.

ADVERTISEMENT

ಈ ಕೇಕ್‌ ಪ್ರದರ್ಶನ ಬೆಂಗಳೂರಿನ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನದಲ್ಲಿ (ಯುಬಿ ಸಿಟಿ ಎದುರು) ನಡೆಯುತ್ತಿದೆ. ಡಿಸೆಂಬರ್ 18 ರಿಂದ ಪ್ರದರ್ಶನ ಆರಂಭವಾಗಿದ್ದು 2021ರ ಜನವರಿ 3ಕ್ಕೆ ಮುಗಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.