ADVERTISEMENT

ಫೆ. 26ರಿಂದ ‘ದುಬೈ ಫುಡ್‌ ಫೆಸ್ಟಿವಲ್‌’

18 ದಿನಗಳ ಫುಡ್‌ ಫೆಸ್ಟಿವಲ್‌ಗೆ ದುಬೈ ಸಜ್ಜು 

​ಪ್ರಜಾವಾಣಿ ವಾರ್ತೆ
Published 22 ಜನವರಿ 2020, 20:00 IST
Last Updated 22 ಜನವರಿ 2020, 20:00 IST
ಬೀಚ್‌ ಕ್ಯಾಂಟೀನ್‌ನಲ್ಲಿ ಊಟದೊಂದಿಗೆ ಸಂಗೀತದ ರಸದೌತಣ 
ಬೀಚ್‌ ಕ್ಯಾಂಟೀನ್‌ನಲ್ಲಿ ಊಟದೊಂದಿಗೆ ಸಂಗೀತದ ರಸದೌತಣ    

ಬಾಯಲ್ಲಿ ನಿರೂರಿಸುವ ವೈವಿಧ್ಯಮಯ ಖಾದ್ಯಗಳಿಂದ ಪ್ರಸಿದ್ಧವಾದ ಫುಡ್‌ ಫೆಸ್ಟಿವಲ್‌ಗೆ ದುಬೈ ಸಜ್ಜಾಗಿದೆ. ಫೆಬ್ರುವರಿ 26ರಿಂದ ಮಾರ್ಚ್‌ 14ರವರೆಗೆ ನಡೆಯಲಿರುವ ಏಳನೇ ಆಹಾರ ಮೇಳದಲ್ಲಿ ದೇಶ, ವಿದೇಶಗಳ ಆಹಾರ ಪ್ರಿಯರು ಪಾಲ್ಗೊಳ್ಳುತ್ತಾರೆ.

18 ದಿನಗಳ ಆಹಾರ ಮೇಳದಲ್ಲಿ (ಡಿಎಫ್‌ಎಫ್‌ –2020)ಅರಬ್‌ ಸಂಯುಕ್ತ ಸಂಸ್ಥಾನ (ಯುಎಇ) ಸೇರಿದಂತೆ ಕೊಲ್ಲಿ ರಾಷ್ಟ್ರಗಳ ವೈವಿಧ್ಯಮಯ ತಿಂಡಿ, ತಿನಿಸು ಮತ್ತು ಆಹಾರಗಳನ್ನು ಇಲ್ಲಿ ಸವಿಯಬಹುದು. ದುಬೈ ಟೂರಿಸಂ ಇಲಾಖೆಯ ದುಬೈ ಫೆಸ್ಟಿವಲ್ಸ್‌ ಆ್ಯಂಡ್‌ ರಿಟೇಲ್‌ ಎಸ್ಟಾಬ್ಲಿಷ್‌ಮೆಂಟ್‌ (ಡಿಎಪ್‌ಆರ್‌ಇ) ಈ ಆಹಾರ ಮೇಳ ಆಯೋಜಿಸಿದೆ.

ಬೀಚ್‌ ಕ್ಯಾಂಟೀನ್‌ ಆಹಾರ ಮೇಳದ ಪ್ರಮುಖ ಆಕರ್ಷಣೆ.ದುಬೈನ ಸುಂದರ ಕಡಲ ಕಿನಾರೆಗಳಲ್ಲಿ ಸ್ವಾದಿಷ್ಟ ಖಾದ್ಯಗಳನ್ನುಸವಿಯುವ ಜತೆ ಹಾಯಾಗಿ ಸಂಗೀತ ಆಲಿಸಬಹುದು. ಬೇಜಾರಾದರೆ ಸಮುದ್ರದಲ್ಲಿ ಈಜಿ ಬಿಸಿಲಿಗೆ ಮೈಯೊಡ್ಡಬಹುದು. ಜತೆಗೆ ಸಂಗೀತ ಆಲಿಸಬಹುದು. ಮಕ್ಕಳು ನಕ್ಕು, ನಲಿಯಲು ವಿಶಾಲವಾದ ಹಸಿರು ಹುಲ್ಲಿನ ಮೈದಾನಗಳಲ್ಲಿ ಆಟೋಟಗಳು ನಡೆಯುತ್ತವೆ.

ADVERTISEMENT

ಅಡುಗೆ ಕಲಿಯುವ ಹಂಬಲವುಳ್ಳವರಿಗೆ ಮಾಸ್ಟರ್‌ ಕ್ಲಾಸ್‌, ಹೆಸರಾಂತ ಸೆಲಿಬ್ರಿಟಿ ಶೆಫ್‌ಗಳ ಕೈ ಅಡುಗೆ ಸವಿಯಲು ಶೆಫ್‌ ಟೇಬಲ್‌ಗಳಿರುತ್ತವೆ. ಶಾಪಿಂಗ್‌ ಮಾಲ್‌, ಹೈಪರ್ ಮಾರ್ಕೆಟ್‌, ರೆಸ್ಟೋರೆಂಟ್‌ಗಳಲ್ಲಿ ಆಹಾರ ಮೇಳಕ್ಕೆ ಸಂಬಂಧಿಸಿದ ಪ್ರಮೋಷನಲ್‌ ಚಟುವಟಿಕೆಗಳಿರುತ್ತವೆ.

ವಿಶ್ವ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ದುಬೈಯನ್ನು ಮುಂಚೂಣಿಗೆ ತರುವ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಮೂಲಕ ಪ್ರಮುಖ ವಾಣಿಜ್ಯ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ದುಬೈ ಟೂರಿಸಂ ಇಲಾಖೆ ಈ ಆಹಾರ ಮೇಳ ಆಯೋಜಿಸುತ್ತಿದೆ. ಜಾಗತಿಕ ಮಟ್ಟದಲ್ಲಿ ಪ್ರವಾಸಿಗರನ್ನು ಸೆಳೆಯಲು ದುಬೈ ಶಾಪಿಂಗ್‌ ಫೆಸ್ಟಿವಲ್‌ ಮಾದರಿಯಲ್ಲಿಯೇ ಆರು ವರ್ಷಗಳಿಂದ ಆಹಾರ ಮೇಳವನ್ನು ಆಯೋಜಿಸುತ್ತಿದೆ.

ವಿವರಗಳಿಗೆ http://www.dubaifoodfestival.com/ or @DubaiFoodFest and #Dubai FoodFest ತಾಣಗಳಿಗೆ ಭೇಟಿ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.