ADVERTISEMENT

ಮಾಸ್ಟರ್ ಶೆಫ್ ಆಸ್ಟ್ರೇಲಿಯಾ ಸ್ಪರ್ಧೆ: ಜಸ್ಟಿನ್ ನಾರಾಯಣ್‌ಗೆ ₹1.80 ಕೋಟಿ ಬಹುಮಾನ

​ಪ್ರಜಾವಾಣಿ ವಾರ್ತೆ
Published 15 ಜುಲೈ 2021, 6:55 IST
Last Updated 15 ಜುಲೈ 2021, 6:55 IST
ಜಸ್ಟಿನ್‌ ನಾರಾಯಣ್‌
ಜಸ್ಟಿನ್‌ ನಾರಾಯಣ್‌   

ಆಸ್ಟ್ರೇಲಿಯಾದ ಜನಪ್ರಿಯ ಅಡುಗೆ ಕಾರ್ಯಕ್ರಮ ‘ಮಾಸ್ಟರ್ ಶೆಫ್ ಆಸ್ಟ್ರೇಲಿಯಾ ರಿಯಾಲಿಟಿ‘ ಸ್ಪರ್ಧೆಯಲ್ಲಿ ಭಾರತೀಯಮೂಲದ ಜಸ್ಟಿನ್ ನಾರಾಯಣ್ವಿಜಯಿಯಾಗಿದ್ದಾರೆ.

13ನೇ ಸೀಸನ್‌ನ ಈ ಕಾರ್ಯಕ್ರಮದಲ್ಲಿಜಸ್ಟಿನ್ ನಾರಾಯಣ್ಜಯಗಳಿಸುವ ಮೂಲಕ ₹1.80 ಕೋಟಿ ನಗದು ಬಹುಮಾನ ಹಾಗೂ ಪಾರಿತೋಷಕವನ್ನು ಪಡೆದುಕೊಂಡಿದ್ದಾರೆ.

ವಿವಿಧ ಹಂತಗಳ ಈ ರಿಯಾಲಿಟಿ ಸ್ಪರ್ಧೆಯಲ್ಲಿ 60ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗಿಯಾಗಿದ್ದರು. ಪ್ರಧಾನ ಸುತ್ತಿನಲ್ಲಿ ಮೂವರು ಸ್ಪರ್ಧಿಗಳು ಮಾತ್ರ ಉಳಿದುಕೊಂಡಿದ್ದರು. ಅಂತಿಮ ಸುತ್ತಿಗೆ ಬಂದವರಲ್ಲಿ ಮೂವರು ಭಾರತೀಯರು ಎಂಬುದು ವಿಶೇಷ. ಇವರಲ್ಲಿ ಜಸ್ಟಿನ್‌ ನಾರಾಯಣ್‌, ಕಿಶ್ವಾರ್‌ ಚೌಧರಿ ಹಾಗೂ ದೀಪೇಂದ್ರ ಚಬ್ಬರ್‌ ಇದ್ದರು.

ADVERTISEMENT

ಮೂವರು ಸ್ಪರ್ಧಿಗಳು ಜಡ್ಜ್‌ಗಳಿಗೆ ಭಾರತದ ಸಾಂಪ್ರದಾಯಿಕ ಅಡುಗೆಗಳನ್ನು ಉಣಬಡಿಸಿದರು. ಬಂಗಾಳಿ ಹಾಗೂ ಉತ್ತರ ಭಾರತೀಯ ಖಾದ್ಯಗಳು ವಿಶೇಷವಾಗಿದ್ದವು. ಅಂತಿಮವಾಗಿ ತೀರ್ಪುಗಾರರುಜಸ್ಟಿನ್ ನಾರಾಯಣ್ ಅವರನ್ನು ವಿಜಯಿ ಎಂದು ಘೋಷಣೆ ಮಾಡಿ ನಗದು ಬಹುಮಾನ ಹಾಗೂ ಪಾರಿತೋಷಕ ನೀಡಿದರು.

ಆಸ್ಟ್ರೇಲಿಯಾದಲ್ಲಿ ಮಾಸ್ಟರ್‌ ಶೆಫ್ ಆಗಿರುವಜಸ್ಟಿನ್ ನಾರಾಯಣ್ ಅವರು ತಮ್ಮ ಗೆಲುವಿನ ಚಿತ್ರಗಳು ಹಾಗೂ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಈ ಗೆಲುವನ್ನು ಅಭಿಮಾನಿಗಳಿಗೆ ಅರ್ಪಿಸಿದ್ದಾರೆ.

ವಿದೇಶಗಳಲ್ಲಿಮಾಸ್ಟರ್‌ ಶೆಫ್ ರಿಯಾಲಿಟಿ ಶೋ ಹೆಚ್ಚು ಜನಪ್ರಿಯವಾಗಿದೆ. ಕಾರ್ಯಕ್ರಮ ಭಾರತದ ಪ್ರಾದೇಶಿಕ ಭಾಷೆಗಳಲ್ಲೂ ಪ್ರಸಾರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.