ADVERTISEMENT

ಆಹಾರ ಕಲಬೆರಕೆ ತಡೆಗೆ ಏನಾಗಬೇಕಿದೆ? 

​ಪ್ರಜಾವಾಣಿ ವಾರ್ತೆ
Published 28 ಜುಲೈ 2019, 1:25 IST
Last Updated 28 ಜುಲೈ 2019, 1:25 IST
   

ನಮ್ಮ ಆರೋಗ್ಯದ ದೃಷ್ಟಿಯಿಂದ, ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಇಂದು ಆಹಾರದ ಕಲಬೆರಕೆಯನ್ನು ನಾವು ತಡೆಯಲೇಬೇಕಾಗಿದೆ. ಅದಕ್ಕೆ ಹಲವು ಕ್ರಮಗಳನ್ನು ತಜ್ಞರು, ಅಧಿಕಾರಿಗಳು ಶಿಫಾರಸು ಮಾಡುತ್ತಾರೆ. ಅವುಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.

-ಭಾರತ ಬಹು ಆಹಾರ ಸಂಸ್ಕೃತಿಯ ದೇಶ. ಇದರಮೂಲ ತಿರುಳು ಪೌಷ್ಟಿಕತೆ. ಸದ್ಯ ದೇಶದ ಆಹಾರ ಸಂಸ್ಕೃತಿಗೆ ಧಕ್ಕೆಯಾಗಿದೆ. ಸ್ಥಳೀಯ ಆಹಾರ ಸಂಸ್ಕೃತಿ ಉಳಿಯದೇ ಯಾವ ಕಾನೂನುಗಳೂ ಕಲಬೆರಕೆಯನ್ನು ತಡೆಯಲಾರವು ಎಂಬುದು ತಜ್ಞರ ಮಾತು.

-ಸಾವಯವ ಉತ್ಪನ್ನಗಳಿಗೆ ಪ್ರೋತ್ಸಾಹ ಸಿಗಬೇಕು. ಕೃಷಿ ಪದ್ಧತಿಯಲ್ಲೂ ಬದಲಾಗಬೇಕು.
-ಭಾರತೀಯ ಆಹಾರ ಸುರಕ್ಷತೆ, ಗುಣಮಟ್ಟ ಪ್ರಾಧಿಕಾರ(ಎಫ್‌ಎಸ್‌ಎಸ್‌ಎಐ) ಬಲವರ್ಧನೆಯಾಗಬೇಕು. ಆರೋಗ್ಯ ಇಲಾಖೆ ಅಧೀನದಿಂದ ಬೇಪರ್ಟ್ಟು ಸ್ವತಂತ್ರ ಇಲಾಖೆಯಾಗಬೇಕು.

ADVERTISEMENT

-ಕೇಂದ್ರ ಬಜೆಟ್‌ನಲ್ಲಿ ಆಹಾರ ಸುರಕ್ಷತೆಗೆ ₹130 ರಿಂದ ₹150 ಕೋಟಿ ಅನುದಾನ ನೀಡಲಾಗುತ್ತಿದೆ. ಅಮೆರಿಕ ಆಹಾರ ಸುರಕ್ಷತಾ ಕಾರ್ಯಗಳಿಗೆ ₹10 ಸಾವಿರ ಕೋಟಿ ವ್ಯಯಿಸುತ್ತಿದೆ. ಆಹಾರ ಸುರಕ್ಷತೆಯ ವಿಚಾರವನ್ನು ನಮ್ಮ ಸರ್ಕಾರಗಳು ನೋಡುವ ದೃಷ್ಟಿಕೋನ ಬದಲಾಗಬೇಕು. ಹೆಚ್ಚಿನ ಅನುದಾನ ನೀಡಬೇಕು.

-ಆಹಾರ ಕಲಬೆರಕೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ರೂಪಿಸಬೇಕು.

-ಆಹಾರ ಸುರಕ್ಷತಾಧಿಕಾರಿಗಳನ್ನು ಅಗತ್ಯಕ್ಕೆ ತಕ್ಕಂತೆ ಕಾಲ ಕಾಲಕ್ಕೆ ನೇಮಿಸುವ, ಅವರಿಗೆ ಆಹಾರ ಸುರಕ್ಷತೆಯ ಕುರಿತು ತರಬೇತಿ ನೀಡಬೇಕು.

-ಪ್ರಯೋಗಾಲಯಗಳಿಗೆ ಸುಸಜ್ಜಿತ ಸೌಕರ್ಯ, ಸವಲತ್ತು, ಯಂತ್ರೋಪಕರಣಗಳನ್ನು ನೀಡಬೇಕು.

-ವಿದೇಶದಲ್ಲಿ ಆಹಾರ ಪದಾರ್ಥಗಳನ್ನು ಪ್ರತಿ ಹಂತದಲ್ಲೂ ಮೇಲ್ವಿಚಾರಣೆಗೆ ಒಳಪಡಿಸಲಾಗುತ್ತದೆ. ಆದರೆ, ಭಾರತದಲ್ಲಿ ಮಾರುಕಟ್ಟೆಗೆ ಬರುವ ಆಹಾರ ಪದಾರ್ಥಗಳಿಗೆ ಮೇಲುಸ್ತುವಾರಿಯೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.