ADVERTISEMENT

ಎಮಿರೇಟ್ಸ್‌ನಲ್ಲಿ ಸಮ್ಮರ್‌ ಟ್ವಿಸ್ಟ್‌

​ಪ್ರಜಾವಾಣಿ ವಾರ್ತೆ
Published 25 ಜೂನ್ 2019, 19:45 IST
Last Updated 25 ಜೂನ್ 2019, 19:45 IST
ಮ್ಯಾಂಗೊ
ಮ್ಯಾಂಗೊ   

ಎಮಿರೇಟ್ಸ್‌ ವಿಮಾನಯಾನ ಸಂಸ್ಥೆ ತನ್ನ ಗ್ರಾಹಕರಿಗಾಗಿ ಸಮ್ಮರ್‌ ಟ್ವಿಸ್ಟ್‌ ಪರಿಚಯಿಸುತ್ತಿದೆ. ಇಲ್ಲಿ ಭಾರತೀಯ ಅಲ್ಫಾನ್ಸೊ ಮಾವಿನಹಣ್ಣಿನಿಂದ ಪಾನೀಯ ಹಾಗೂ ಇನ್ನೂ ಕೆಲವು ಖಾದ್ಯಗಳನ್ನು ತಯಾರಿಸಿ ವಿಶ್ವದಾದ್ಯಂತ ಕೊಂಡೊಯ್ಯುವುದು ವಿಶೇಷ.

ಎಮಿರೇಟ್ಸ್‌ನ ಶೆಫ್‌ಗಳು ಸ್ಥಳೀಯತೆಗೆ ಪ್ರಾಮುಖ್ಯತೆ ನೀಡುತ್ತಿರುವುದೇ ಇದಕ್ಕೆ ಕಾರಣ. ತಾಜಾ ಹಣ್ಣುಗಳನ್ನು ಬಳಸಿ ಪಾನೀಯ ಮಾಡಲಾಗುತ್ತದೆ. ಇದಕ್ಕಾಗಿ ವಿಮಾನಯಾನ ಸಂಸ್ಥೆ ಸ್ಥಳೀಯವಾಗಿ ಮಾವಿನಹಣ್ಣುಗಳ ವ್ಯಾಪಾರಿಗಳನ್ನು ಹುಡುಕುತ್ತದೆ.

ರೌಂಡ್‌ ದಿ ಕ್ಲಾಕ್‌ ಕಿಚನ್‌ ಮೂಲಕ ದಿನಕ್ಕೆ 520 ವಿಮಾನಗಳಿಗೆ ಊಟ ಒದಗಿಸಲಾಗುತ್ತದೆ. ಒಂದು ನಿಮಿಷಕ್ಕೆ 209 ಊಟಗಳನ್ನು ಸಪ್ಲೆ ಮಾಡುತ್ತದೆ. ಎಮಿರೇಟ್ಸ್‌ ಸಂಸ್ಥೆ 1,800 ಶೆಫ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಒಟ್ಟು 12,450 ವಿಧದ ಖಾದ್ಯಗಳನ್ನು ಮಾಡಲಾಗುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.