ADVERTISEMENT

ಟಾಯ್‌ಕಿಯಲ್ಲಿ ವಿಶೇಷ ಖಾದ್ಯ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2019, 19:45 IST
Last Updated 24 ಸೆಪ್ಟೆಂಬರ್ 2019, 19:45 IST
ಬಿಬಿಂಬಾಪ್‌
ಬಿಬಿಂಬಾಪ್‌   

ಜಪಾನ್‌ ಶೈಲಿಯ ಖಾದ್ಯಗಳ ಟಾಯ್‌ಕಿ ರೆಸ್ಟೋರೆಂಟ್‌ನಲ್ಲಿ ಕೊರಿಯಾದ ಖಾದ್ಯ ‘ಬಿಬಿಂಬಾಪ್‌’ ಪರಿಚಯಿಸಲಾಗಿದೆ.

ಕೊರಿಯಾ ಊಟದ ಥಾಲಿಯಲ್ಲಿ ಈ ಖಾದ್ಯ ಲಭ್ಯ. ತರಕಾರಿ, ಕಾಳುಗಳು, ಮಾಂಸ, ಎಣ್ಣೆಯ ಮಿಶ್ರಣದೊಂದಿಗೆ ಇದನ್ನು ತಯಾರಿಸಲಾಗಿದೆ. ಒಂದು ಸಣ್ಣ ಬೌಲ್‌ನಲ್ಲಿ ಸಿಗುವ ಈ ಖಾದ್ಯದಿಂದ ಸಾಕಷ್ಟು ಪೌಷ್ಠಿಕಾಂಶಗಳು ದೇಹ ಸೇರಲಿವೆ ಎನ್ನುವುದು ರೆಸ್ಟೋರೆಂಟ್ ಭರವಸೆ. ‘ಬಿಬಿಂ’ ಎಂದರೆ ಪೌಷ್ಠಿಕಾಂಶವುಳ್ಳ ವಿವಿಧ ತರಕಾರಿ ಹಾಗೂ ಕಾಳುಗಳ ಮಿಶ್ರಣ ಎಂದರ್ಥವಂತೆ.

‘ಬಾಪ್‌’ ಎಂದರೆ ಇದು ಒಂದು ರೀತಿಯ ಅಕ್ಕಿ. ಇದರಿಂದ ಅನ್ನ ತಯಾರಿಸಿ ಕಾಳುಗಳ ಮಿಶ್ರಣಕ್ಕೆ ಸೇರಿಸಲಾಗುತ್ತದೆ. ಚಿಕನ್‌ ಬಿಬಿಂಬಾಪ್‌ ಹಾಗೂ ಟೋಫು ವೆಜ್‌ ಬಿಬಿಂಬಾಪ್‌ ಕೂಡ ಇಲ್ಲಿ ಲಭ್ಯ.

ADVERTISEMENT

ಸ್ಥಳ–ಟಾಯ್‌ಕಿ, 100 ಅಡಿ ರಸ್ತೆ, ಇಂದಿರಾನಗರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.