ADVERTISEMENT

ಚಹಾ ಪ್ರಿಯರಿಗೆ ‘ಹಾಫ್ ಟೀ’

Half Tea

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2020, 19:45 IST
Last Updated 8 ಮಾರ್ಚ್ 2020, 19:45 IST
ಹಾಫ್‌ ಟೀ ಸೆಂಟರ್
ಹಾಫ್‌ ಟೀ ಸೆಂಟರ್   

ಹಾಫ್ ಟೀ, ಬೈಟು ಕಾಫಿ ಬೆಂಗಳೂರಿಗರನರನಾಡಿಯಲ್ಲಿ ಮಿಳಿತವಾದ ಪದ. ದಿನದಲ್ಲಿ ಐದಾರು ಬಾರಿ ಹಾಫ್ ಟೀ ಅಥವಾ ಕಾಫಿ ಸವಿಯಲು ತಯಾರಿರುವ ನಾವು, ಒಮ್ಮೆಲೆ ಪೂರ್ತಿ ಕಪ್‌ಗೆ ಒಲ್ಲೆ ಎನ್ನೋದು ಮಾತ್ರ ಸೋಜಿಗದ ವಿಚಾರ.

ಬೆಂಗಳೂರಿನ ಜನತೆಯಲ್ಲಿ ಹಾಸುಹೊಕ್ಕಾಗಿರುವ ‘ಹಾಫ್‌ ಟೀ, ಅರ್ಧ ಕಾಫಿ’ ಹವ್ಯಾಸವನ್ನೇ ಬ್ರಾಂಡ್‌ ಮಾಡಿಕೊಂಡ ನಾಲ್ವರು ಎಂಜಿನಿಯರಿಂಗ್ ಪದವೀಧರರು ರಾಜಾಜಿ ನಗರದ ಮೊದಲನೇ ಬ್ಲಾಕ್‍ನಲ್ಲಿ (ಅನನ್ಯ ಆಸ್ಪತ್ರೆ ರಸ್ತೆ) ‘ಹಾಫ್‌ ಟೀ’ ಎಂಬ ಚಿಕ್ಕ, ಚೊಕ್ಕ ಚಹಾ ಕೇಂದ್ರ ಆರಂಭಿಸಿದ್ದಾರೆ.

ಸುರೇಶ್ ನಾರಾಯಣ್, ವಿನಯ್, ಹನುಮಂತು ಮತ್ತು ಚಂದನ್ ಈ ಚಹಾ ಕೇಂದ್ರ ಆರಂಭಿಸಿರುವ ಯುವಕರು. ಎಂಜಿನಿಯರಿಂಗ್ ಓದಿ, ಕೆಲ ಕಾಲ ಐ.ಟಿ ಮತ್ತು ಮೆಕ್ಯಾನಿಕಲ್‌ ಉದ್ಯಮಗಳಲ್ಲಿ ಕೆಲಸ ಮಾಡುತ್ತಾ ನವೋದ್ಯಮ ಆರಂಭಿಸುವ ಕನಸು ಕಂಡರು. ಆ ಕನಸು ‘ಹಾಫ್‌ ಟೀ‘ ಮೂಲಕ ನನಸಾಗಿದೆ.

ADVERTISEMENT

‘ಹಾಫ್‌ ಟೀ’ ಕೇಂದ್ರ ಆರಂಭಿಸುವ ಮುನ್ನ ಈ ತಂಡ ಭಾರತ ಸೇರಿದಂತೆ ವಿದೇಶಗಳಲ್ಲಿರುವ ಟೀ, ಕಾಫಿ ಬಗ್ಗೆ ಅಧ್ಯಯನ ನಡೆಸಿದೆ. ಆರಂಭದಲ್ಲಿ ಈ ತಂಡ ಸುಮಾರು 50 ಬಗೆಯ ಟೀ ಪುಡಿಯನ್ನು ವಿವಿಧ ಐ.ಟಿ ಕಂಪನಿ ಮತ್ತು ಮನೆ, ಮನೆಗೆ ಪೂರೈಸುವ ಕೆಲಸ ಮಾಡಿದೆ. ಆನಂತರವೇ ‘ಹಾಫ್‌ ಟೀ’ ಚಹಾ ಕೇಂದ್ರ ಆರಂಭಿಸಿದೆ. ಈ ಚಹಾ ಕುಡಿಯಲು ಬರುವವರಿಗೆ ‘ಸ್ವಾಸ್ಥ್ಯ ಜ್ಞಾನ’ ಹೆಚ್ಚಿಸಿಕೊಳ್ಳಲು ಮಿನಿ ಗ್ರಂಥಾಲಯವೂ ಇದೆ. ನೀವು, ರಾಜಾಜಿನಗರದ ಕಡೆ ಹೋದರೆ, ಒಮ್ಮೆ ‘ಹಾಫ್-ಟೀ’ಗೆ ಭೇಟಿ ಕೊಡಿ. ಅಲ್ಲಿ ಸಿಗುವ ಟೀ ಸವಿದು ಬನ್ನಿ.

ಮಾಹಿತಿಗೆ ಸುರೇಶ್ ನಾರಾಯಣ್- 8884942735 ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.