ADVERTISEMENT

ಕಲಬೆರಕೆ ಪತ್ತೆಗೆ ಮೂರು ಹಂತದಲ್ಲಿ ನಡೆಯುತ್ತದೆ ವೈಜ್ಞಾನಿಕ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2019, 2:25 IST
Last Updated 28 ಜುಲೈ 2019, 2:25 IST
   

ಮೈಸೂರು: ಆಹಾರದ ಸುರಕ್ಷತೆ ಮತ್ತು ಗುಣಮಟ್ಟದ ಪರೀಕ್ಷೆಗೆ ಮೂರು ರೀತಿಯಲ್ಲಿ ಮಾದರಿಗಳನ್ನು (ಸಮೀಕ್ಷೆ ಉದ್ದೇಶದ ಮಾದರಿ, ಕಾನೂನಾತ್ಮಕ ಸಂಗ್ರಹ, ದೂರು ಆಧಾರಿತ) ಸಂಗ್ರಹಿಸಲಾಗುತ್ತದೆ.

ಒಂದು ಉತ್ಪನ್ನ ದೋಷಪೂರಿತವಾಗಿದ್ದರೆ, ಮಾಹಿತಿ ಸರಿ ಇಲ್ಲದೆ ಇದ್ದರೆ ಅದು ಮಿಸ್‌ ಬ್ರ್ಯಾಂಡ್‌ ಉತ್ಪನ್ನಗಳ ಅಡಿಯಲ್ಲಿ ಬರುತ್ತದೆ. ಒಂದು ಆಹಾರ ಪದಾರ್ಥದ ಗುಣಮಟ್ಟ ಇಂತಿಷ್ಟೇ ಇರಬೇಕು ಎಂಬ ಮಾನದಂಡ ಕಾಯ್ದೆಯಲ್ಲಿ ಇದೆ. ಅದಕ್ಕೆ ಪೂರಕವಾಗಿ ಇಲ್ಲದೆ ಇದ್ದರೆ ಅಂಥವುಗಳನ್ನು ಗುಣಮಟ್ಟ ರಹಿತ (ಸಬ್‌ ಸ್ಟ್ಯಾಂಡರ್ಡ್‌) ಎನ್ನಲಾಗುತ್ತದೆ. ಮಾರಣಾಂತಿಕ ಸಮಸ್ಯೆಗಳನ್ನು ಉಂಟುಮಾಡುವ ಅಂಶಗಳು ಇದ್ದರೆ ಅಂಥವುಗಳ ತಯಾರಕರಿಗೆ ದಂಡ, ಕಠಿಣ ಶಿಕ್ಷೆಯನ್ನೂ ವಿಧಿಸಲಾಗುತ್ತದೆ.

ವಿಷಕಾರಿ ರಾಸಾಯನಿಕಗಳು ಸೇರಿಕೊಂಡಿರುವುದನ್ನು ಪತ್ತೆ ಮಾಡಲು ಆಹಾರ ಮಾದರಿಗಳನ್ನು ಸಂಗ್ರಹಿಸಿ ಫೊರೆನ್ಸಿಕ್‌ ವಿಜ್ಞಾನ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲಾಗುತ್ತದೆ ಎನ್ನುತ್ತಾರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ಮೈಸೂರಿನ ಅಂಕಿತ ಅಧಿಕಾರಿ ಡಾ.ಎಸ್‌.ಚಿದಂಬರ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.