ADVERTISEMENT

ಶೆಫ್ ರಣವೀರ್ ಬ್ರಾರ್ ಆ್ಯಪ್

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2019, 20:15 IST
Last Updated 20 ಮಾರ್ಚ್ 2019, 20:15 IST
ರಣವೀರ್ ಬ್ರಾರ್
ರಣವೀರ್ ಬ್ರಾರ್   

ಅಂತರರಾಷ್ಟ್ರೀಯಮಟ್ಟದ ಖ್ಯಾತ ಶೆಫ್ ರಣವೀರ್ ಬ್ರಾರ್ ಅವರ ಪಾಕದ ಅಪ್ಲಿಕೇಷನ್ ಅನ್ನು ಹಂಗಾಮ ಅಭಿವೃದ್ಧಿಪಡಿಸಿದೆ.

‘ರಣವೀರ್ ಬ್ರಾರ್’ ಹೆಸರಿನಲ್ಲಿರುವ ಈ ಆ್ಯಪ್, ರಣವೀರ್ ಅವರು ನಡೆಸಿದ ಆಹಾರ ಅಧ್ಯಯನಗಳನ್ನು ನಿರೂಪಿಸುತ್ತದೆ. ಪಾಕವಿಧಾನಗಳ ಮೂಲಕ ಬಳಕೆದಾರರಿಗೆ ವಿಭಿನ್ನ ಒಳನೋಟವನ್ನು ಈ ಆ್ಯಪ್ ನೀಡಲಿದೆ. ರಣವೀರ್ ಅವರ ಪಾಕಜೀವನದ 20ಕ್ಕೂ ಹೆಚ್ಚಿನ ವರ್ಷಗಳ ಅನುಭವ ಈಗ ಈ ಆ್ಯಪ್ ಮೂಲಕ ಬೆರಳ ತುದಿಯಲ್ಲೇ ದೊರೆಯಲಿದೆ.

ಈ ಆ್ಯಪ್‌ನಲ್ಲಿ ಸಾವಿರಕ್ಕೂ ಹೆಚ್ಚಿನ ಪಾಕ ವಿಧಾನಗಳಿವೆ. ವೈವಿಧ್ಯಮಯ ಆಹಾರ ಮತ್ತು ತ್ವರಿತ ಪಾಕವಿಧಾನಗಳಿಗೆ ಈ ಅಪ್ಲಿಕೇಶನ್ ಉತ್ತಮವಾಗಿದ್ದು, ಪ್ರತಿ ಹಂತ-ಹಂತದ ವಿವರಣೆ ಮತ್ತು ಪದಾರ್ಥಗಳ ಅಳತೆಗಳನ್ನು ನೀಡುತ್ತದೆ.

ADVERTISEMENT

‘ಈ ಆಧುನಿಕ ಜಗತ್ತಿನಲ್ಲಿ ವಾಸ್ತವವಾಗಿ ನಮ್ಮನ್ನು ಹತ್ತಿರ ತರುವುದು ಆಹಾರ ಮಾತ್ರ. ನನ್ನ ಅನುಭವವನ್ನು ಬಳಸಿಕೊಂಡು ನನಗೆ ತಿಳಿದ ಹೊಸ ಅಡುಗೆಗಳನ್ನು ಆಸಕ್ತಿಯಿಂದ ನಾನು ಮಾಡುತ್ತಿದ್ದೇನೆ. ಇದು ನನ್ನ ಜ್ಞಾನ ನಿಧಿಯ ಸಂಗ್ರಹವಾಗಿದ್ದು ಕಳೆದ ಐದು ವರ್ಷಗಳಲ್ಲಿ ಭಾರತದ ಮೂಲೆಮೂಲೆಗೆ ತೆರಳಿ ಮಾಡಿದ ಪಾಕವಿಧಾನಗಳಿವೆ. ಇದು ನನ್ನೊಂದಿಗೆ ಊಟವನ್ನು ಹಂಚಿಕೊಳ್ಳಲು ಮತ್ತು ನನ್ನ ಅಡುಗೆಮನೆಯ ನೋಟವನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ’ ಎನ್ನುತ್ತಾರೆ ರಣವೀರ್ ಬ್ರಾರ್.

ಈ ಅಪ್ಲಿಕೇಶನ್ ಅನ್ನು ಆಂಡ್ರಾಯ್ಡ್ ಮತ್ತು ಐಒಎಸ್‌ನಲ್ಲಿ ನೇರವಾಗಿ ಡೌನ್‌ಲೋಡ್ ಮಾಡಬಹುದು.

ಗೂಗಲ್ ಪ್ಲೇ: https://bit.ly/2SN1Nrz
ಐಒಎಸ್‌ನಲ್ಲಿ https://apple.co/2IZQRqT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.