ADVERTISEMENT

ಭಾರತೀಯ ರೈಲ್ವೆ: 2.65 ಲಕ್ಷ ಹುದ್ದೆಗಳು ಖಾಲಿ ಇವೆ ಎಂದು ಸಂಸತ್‌ಗೆ ಮಾಹಿತಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2022, 21:30 IST
Last Updated 6 ಫೆಬ್ರುವರಿ 2022, 21:30 IST
   

ನವದೆಹಲಿ: ಭಾರತೀಯ ರೈಲ್ವೆಯಲ್ಲಿ 2,177 ಗೆಜೆಟೆಡ್ ಹುದ್ದೆಗಳು ಸೇರಿದಂತೆ ಒಟ್ಟು 2,65,547 ಹುದ್ದೆಗಳು ಖಾಲಿ ಇವೆ ಎಂದು ಸರ್ಕಾರ ಸಂಸತ್ತಿಗೆ ತಿಳಿಸಿದೆ.

2016 ರಿಂದ, ರೈಲ್ವೆಯು ವಿವಿಧ ಹುದ್ದೆಗಳಿಗೆ 1,89,790 ಜನರನ್ನು ನೇಮಿಸಿಕೊಂಡಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಕೇರಳದ ರಾಜ್ಯಸಭಾ ಸದಸ್ಯ ವಿ.ಶಿವದಾಸನ್ ಅವರ ಪ್ರಶ್ನೆಗೆ ಅಂಕಿ–ಅಂಶಗಳ ಸಹಿತ ಉತ್ತರ ನೀಡಿದ್ದಾರೆ.

ಪೂರ್ವ ರೈಲ್ವೆ ವಲಯದಲ್ಲಿ ಹೆಚ್ಚಿನ ಹುದ್ದೆಗಳು ಖಾಲಿ ಇವೆ. 195 ಗೆಜೆಟೆಡ್ ಹಾಗೂ 28,204 ಇತರೆ ಹುದ್ದೆಗಳು ಖಾಲಿ ಇವೆ. ಪಶ್ಚಿಮ ರೈಲ್ವೆ ವಲಯದಲ್ಲಿ 172 ಗೆಜೆಟೆಡ್ ಮತ್ತು 26,227 ಇತರೆ ಹುದ್ದೆಗಳು ಖಾಲಿ ಇವೆ. ನೈಋತ್ಯ ರೈಲ್ವೆ ವಲಯದಲ್ಲಿ 65 ಗೆಜೆಟೆಡ್ ಮತ್ತು 6,525 ಇತರೆ ಹುದ್ದೆಗಳು ಖಾಲಿ ಇವೆ.

ADVERTISEMENT

‘ಸಾವಿರಾರು ಹುದ್ದೆಗಳು ಖಾಲಿ ಇರುವುದು ಕಳವಳಕಾರಿಯಾಗಿದೆ’ ಎಂದು ಶಿವದಾಸನ್ ಹೇಳಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.