ADVERTISEMENT

ಅಖಿಲೇಶ್‌ಗೆ ರಾಮ ನವಮಿ - ಮಹಾ ನವಮಿ ನಡುವಣ ವ್ಯತ್ಯಾಸ ಗೊತ್ತಿಲ್ಲ: ಬಿಜೆಪಿ

ಪಿಟಿಐ
Published 14 ಅಕ್ಟೋಬರ್ 2021, 13:29 IST
Last Updated 14 ಅಕ್ಟೋಬರ್ 2021, 13:29 IST
ಅಖಿಲೇಶ್ ಯಾದವ್
ಅಖಿಲೇಶ್ ಯಾದವ್   

ಲಖನೌ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಅವರಿಗೆ 'ರಾಮ ನವಮಿ' ಮತ್ತು 'ಮಹಾ ನವಮಿ' ನಡುವಣ ವ್ಯತ್ಯಾಸ ಗೊತ್ತಿಲ್ಲ ಎಂದು ಭಾರತೀಯ ಜನತಾ ಪಕ್ಷವು (ಬಿಜೆಪಿ) ವ್ಯಂಗ್ಯವಾಡಿದೆ.

ವಿಶ್ವದಾದ್ಯಂತ ಹಿಂದೂಗಳು ಮಹಾ ನವಮಿ ಆಚರಿಸುತ್ತಿರುವ ಸಂದರ್ಭದಲ್ಲಿ ಶುಭ ಹಾರೈಸಿದ ಅಖಿಲೇಶ್, ತಮ್ಮ ಸಂದೇಶದಲ್ಲಿ ಮಹಾ ನಮವಿ ಬದಲು ರಾಮ ನವಮಿ ಎಂದು ತಪ್ಪಾಗಿ ಉಲ್ಲೇಖಿಸಿದ್ದರು. ಬಳಿಕ ಇದನ್ನು ಅಳಿಸಿ ಹಾಕಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಇದನ್ನೇ ಅಸ್ತ್ರವಾಗಿ ಬಳಸಿಕೊಂಡಿರುವ ಬಿಜೆಪಿ, 'ನವ ಹಿಂದೂ' ಆಗಿರುವ ಅಖಿಲೇಶ್‌ಗೆ ರಾಮ ನವಮಿ ಮತ್ತು ಮಹಾ ನವಮಿ ನಡುವಣ ವ್ಯತ್ಯಾಸ ತಿಳಿದಿಲ್ಲ ಎಂದು ಟೀಕಿಸಿದೆ.

ರಾಮ ನವಮಿ ಹಾಗೂ ಮಹಾ ನವಮಿ ನಡುವಣ ವ್ಯತ್ಯಾಸ ತಿಳಿಯದ ಅಖಿಲೇಶ್ ಅವರು ರಾಮ ಮತ್ತು ಪರಶುರಾಮರ ಬಗ್ಗೆ ಮಾತನಾಡುತ್ತಾರೆ. ಜನರನ್ನು ಮೂರ್ಖರನ್ನಾಗಿಸಬೇಡಿ ಎಂದು ಹೇಳಿದೆ.

'ಕರಸೇವಕರ ಮೇಲೆ ನಿರಂತರ ಆರೋಪ ಮಾಡುವವರು ಚುನಾವಣೆ ಸಮೀಪಿಸುವಾಗ ಹಿಂದೂಗಳಂತೆ ನಾಟಕ ಮಾಡಿದಾಗ ಹೀಗೆ ಸಂಭವಿಸುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ರಾಮ ನವಮಿಯನ್ನು 'ಚೈತ್ರ' ಮಾಸದಲ್ಲಿ ಆಚರಿಸಲಾಗುತ್ತದೆ. ಈಗ ದುರ್ಗಾ ದೇವತೆಯ ಮಹಾ ನವಮಿ ಆಚರಿಸಲಾಗುತ್ತದೆ' ಎಂದು ಬಿಜೆಪಿ ಮುಖಂಡ ಅಮಿತ್ ಮಾಳವೀಯ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.