ADVERTISEMENT

ಸೆ.19ರವರೆಗೆ ಕೋವಿಶೀಲ್ಡ್‌ನ 65 ಕೋಟಿ ಡೋಸ್‌ ಸ್ವೀಕಾರ: ಆರೋಗ್ಯ ಸಚಿವಾಲಯ

ಕೋವ್ಯಾಕ್ಸಿನ್‌ ಲಸಿಕೆಯ 9.1 ಕೋಟಿ ಡೋಸ್‌ ಪೂರೈಕೆ

ಪಿಟಿಐ
Published 1 ಅಕ್ಟೋಬರ್ 2021, 13:26 IST
Last Updated 1 ಅಕ್ಟೋಬರ್ 2021, 13:26 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಸೆ.19 ವರೆಗೆ ಕೋವಿಶೀಲ್ಡ್‌ ಲಸಿಕೆಯ 65.25 ಕೋಟಿಗೂ ಅಧಿಕ ಹಾಗೂ ಕೋವ್ಯಾಕ್ಸಿನ್‌ನ 9.1 ಕೋಟಿಗೂ ಹೆಚ್ಚು ಡೋಸ್‌ಗಳನ್ನು ಸ್ವೀಕರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪುಣೆ ಮೂಲದ ಸೀರಂ ಇನ್ಸ್‌ಟಿಟ್ಯೂಟ್‌ ಆಫ್‌ ಇಂಡಿಯಾ (ಎಸ್‌ಐಐ) ಕೋವಿಶೀಲ್ಡ್‌ ಹಾಗೂ ಹೈದರಾಬಾದ್‌ ಮೂಲದ ಭಾರತ್ ಬಯೋಟೆಕ್‌ ಕಂಪನಿ ಕೋವ್ಯಾಕ್ಸಿನ್‌ ಲಸಿಕೆಯನ್ನು ಉತ್ಪಾದಿಸಿ, ಪೂರೈಸುತ್ತಿವೆ.

ಅಕ್ಟೋಬರ್‌ನಲ್ಲಿ ಕೋವಿಶೀಲ್ಡ್‌ನ 22 ಕೋಟಿ ಡೋಸ್‌ಗಳನ್ನು ಪೂರೈಕೆ ಮಾಡುವುದಾಗಿ ಎಸ್‌ಐಐ ಮಾಹಿತಿ ನೀಡಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಎಸ್‌ಐಐ ಸಂಸ್ಥೆ ತನ್ನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿದ್ದು, ತಿಂಗಳಿಗೆ 20 ಕೋಟಿಗೂ ಅಧಿಕ ಡೋಸ್‌ಗಳಷ್ಟು ಲಸಿಕೆ ತಯಾರಿಸಲಿದೆ.

‘ಈಗ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲಾಗಿದ್ದು, ವರ್ಷಾಂತ್ಯದ ಒಳಗಾಗಿ ಲಸಿಕೆಯ 66 ಕೋಟಿ ಡೋಸ್‌ಗಳನ್ನು ಪೂರೈಕೆ ಮಾಡಲಾಗುವುದು. ಇದರೊಂದಿಗೆ ಈ ವರ್ಷ ಕೋವಿಶೀಲ್ಡ್‌ನ 130 ಕೋಟಿಗೂ ಅಧಿಕ ಡೋಸ್‌ಗಳನ್ನು ಪೂರೈಕೆ ಮಾಡಿದಂತಾಗಲಿದೆ’ ಎಂದು ಎಸ್‌ಐಐನ ನಿರ್ದೇಶಕ (ಸರ್ಕಾರ ಮತ್ತು ನಿಯಂತ್ರಣ ವಿಭಾಗ) ಪ್ರಕಾಶಕುಮಾರ್‌ ಸಿಂಗ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.