ADVERTISEMENT

ದಕ್ಷಿಣ ಆಫ್ರಿಕಾದಿಂದ ವಾಪಸ್‌ ಬಂದ ಚಂಡೀಗಡದ ವ್ಯಕ್ತಿಗೆ ಕೊರೊನಾ ಸೋಂಕು

ಪಿಟಿಐ
Published 30 ನವೆಂಬರ್ 2021, 4:46 IST
Last Updated 30 ನವೆಂಬರ್ 2021, 4:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಂಡೀಗಡ: ಕೆಲವು ದಿನಗಳ ಹಿಂದೆ ದಕ್ಷಿಣ ಆಫ್ರಿಕಾದಿಂದ ಹಿಂದುರುಗಿದ ಚಂಡೀಗಡದ 39 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ಸೋಮವಾರ ದೃಢ ಪಟ್ಟಿದೆ.

ಅಪಾಯಕಾರಿಯಾಗಿ ಪರಿಣಮಿಸಿರುವ ಕೋವಿಡ್‌ನ ನೂತನ ರೂಪಾಂತರ ಓಮೈಕ್ರಾನ್‌ ಸೋಂಕು ತಗುಲಿರುವ ಸಾಧ್ಯತೆ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಹೆಚ್ಚುವರಿ ಪರೀಕ್ಷೆಗಾಗಿ ಆತನ ಮಾದರಿಯನ್ನು ಹೆಚ್ಚಿನ ಪರೀಕ್ಷೆಗೆ ದಿಲ್ಲಿಗೆ ಕಳುಹಿಸಲಾಗಿದೆ.

ನವೆಂಬರ್‌ 21ಕ್ಕೆ ಚಂಡೀಗಡಕ್ಕೆ ವಾಪಸ್‌ ಆದ ಸಂದರ್ಭ ನಡೆಸಿದ ಕೊರೊನಾ ಪರೀಕ್ಷೆಯಲ್ಲಿ ಕೋವಿಡ್‌ ನೆಗೆಟಿವ್‌ ವರದಿ ಬಂದಿತ್ತು. ಆತನ ಕುಟುಂಬದ ಓರ್ವ ಸದಸ್ಯನಿಗೆ ಮತ್ತು ಮನೆಯ ಕೆಲಸದ ಓರ್ವ ಸಿಬ್ಬಂದಿಗೆ ಕೊರೊನಾ ಸೋಂಕು ಪತ್ತೆಯಾಗಿದೆ.

ADVERTISEMENT

ಕಳೆದ ವಾರ ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್‌ ರೂಪಾಂತರ ಬಿ.1.1.529 ಅಥವಾ ಓಮೈಕ್ರಾನ್‌ ಸೋಂಕು ಮೊದಲ ಬಾರಿಗೆ ಕಾಣಿಸಿಕೊಂಡಿತ್ತು. ವಿಶ್ವ ಆರೋಗ್ಯ ಸಂಸ್ಥೆ ಇದನ್ನು 'ಆತಂಕಕಾರಿ ರೂಪಾಂತರ' ಎಂದು ಗುರುತಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.