ADVERTISEMENT

ದೆಹಲಿಯಲ್ಲಿ ಇಂದು 19 ಜನರಿಗೆ ಕೋವಿಡ್; ಈ ವರ್ಷದಲ್ಲೇ ಅತಿ ಕಡಿಮೆ ಪ್ರಕರಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಆಗಸ್ಟ್ 2021, 14:15 IST
Last Updated 21 ಆಗಸ್ಟ್ 2021, 14:15 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕಳೆದ24 ಗಂಟೆಗಳಲ್ಲಿ ಕೋವಿಡ್‌-19ಸೋಂಕು ದೃಢಪಟ್ಟ ಕೇವಲ19 ಪ್ರಕರಣಗಳು ವರದಿಯಾಗಿವೆ. ಇದು ದೆಹಲಿಯಲ್ಲಿ ಈ ವರ್ಷ ಒಂದು ದಿನದ ಅವಧಿಯಲ್ಲಿ ದಾಖಲಾದ ಅತ್ಯಂತ ಕಡಿಮೆ ಪ್ರಕರಣಗಳಾಗಿವೆ.

ದೆಹಲಿ ಸರ್ಕಾರದಪ್ರಕಟಣೆ ಪ್ರಕಾರ,ಇಂದು ಒಟ್ಟು59,740 ಕೋವಿಡ್‌ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ ಕೇವಲ19 ಪ್ರಕರಣಗಳು ಬೆಳಕಿಗೆ ಬಂದಿರುವುದರಿಂದ, ಸೋಂಕು ಖಚಿತ ಪ್ರಮಾಣ ಕೇವಲ ಶೇ.0.03ಕ್ಕೆ ಕುಸಿದಿದೆ.

ಅಷ್ಟಲ್ಲದೆ ಇಂದು ಕೋವಿಡ್‌ನಿಂದಾಗಿ ಒಂದೇಒಂದು ಸಾವು ಸಂಭವಿಸಿಲ್ಲ.ಶುಕ್ರವಾರವೂ ಯಾವೊಬ್ಬ ಸೋಂಕಿತನೂ ಮೃತಪಟ್ಟಿರಲಿಲ್ಲ ಎಂಬುದು ವಿಶೇಷ.

ADVERTISEMENT

ಸದ್ಯ ಈವರೆಗೆ ಒಟ್ಟು14,37,293ಸೋಂಕು ಪ್ರಕರಣಗಳು ವರದಿಯಾಗಿದ್ದು,14,11,784 ಮಂದಿ ಗುಣಮುಖರಾಗಿದ್ದಾರೆ. 25,079 ಸೋಂಕಿತರು ಮೃತಪಟ್ಟಿದ್ದಾರೆ. ಉಳಿದಂತೆ ಇನ್ನು 430 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ ಒಟ್ಟು1,22,22,285 ಜನರಿಗೆ ಲಸಿಕೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.