ADVERTISEMENT

Covid-19 India Update: ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಸೆಪ್ಟೆಂಬರ್ 2021, 5:38 IST
Last Updated 21 ಸೆಪ್ಟೆಂಬರ್ 2021, 5:38 IST
ಪಶ್ಚಿಮ ಬಂಗಾಳದ ಸಿಲಿಗುಡಿಯಲ್ಲಿ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಲು ಕಾಯುತ್ತಿರುವ ಹಿರಿಯ ನಾಗರಿಕರು–ಸಂಗ್ರಹ ಚಿತ್ರ
ಪಶ್ಚಿಮ ಬಂಗಾಳದ ಸಿಲಿಗುಡಿಯಲ್ಲಿ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಲು ಕಾಯುತ್ತಿರುವ ಹಿರಿಯ ನಾಗರಿಕರು–ಸಂಗ್ರಹ ಚಿತ್ರ   

ನವದೆಹಲಿ: ದೇಶದಾದ್ಯಂತ 24 ಗಂಟೆಗಳ ಅಂತರದಲ್ಲಿ ಕೋವಿಡ್‌–19 ದೃಢಪಟ್ಟ 26,115 ಹೊಸ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 3,35,04,534ಕ್ಕೆ ಏರಿಕೆಯಾಗಿರುವುದು ಕೇಂದ್ರ ಆರೋಗ್ಯ ಸಚಿವಾಲಯದ ಮಂಗಳವಾರದ ಅಪ್‌ಡೇಟ್‌ನಿಂದ ತಿಳಿದು ಬಂದಿದೆ.

ಪ್ರಸ್ತುತ ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3,09,575ಕ್ಕೆ ಇಳಿಕೆಯಾಗಿದೆ. ಇದು ಕಳೆದ 184 ದಿನಗಳಲ್ಲಿಯೇ ದಾಖಲಾಗಿರುವ ಕಡಿಮೆ ಸಕ್ರಿಯ ಪ್ರಕರಣಗಳಾಗಿವೆ. 24 ಗಂಟೆಗಳಲ್ಲಿ ಕೋವಿಡ್‌ನಿಂದಾಗಿ 252 ಮಂದಿ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 4,45,385 ತಲುಪಿದೆ.

ಒಟ್ಟು ಪ್ರಕರಣಗಳ ಪೈಕಿ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ 0.92ರಷ್ಟಿದೆ ಹಾಗೂ ಗುಣಮುಖ ಪ್ರಮಾಣ ಶೇ 97.75ರಷ್ಟು ದಾಖಲಾಗಿದೆ.

ADVERTISEMENT

ದೇಶದ ಕೋವಿಡ್‌ ಪ್ರಕರಣಗಳ ಸಂಖ್ಯೆ 2020ರ ಡಿಸೆಂಬರ್‌ 19ರಂದು ಒಂದು ಕೋಟಿ ದಾಟಿತು. 2021ರ ಮೇ 4ರಂದು ಎರಡು ಕೋಟಿ ಪ್ರಕರಣಗಳು ಹಾಗೂ ಜೂನ್‌ 23ರಂದು ಕೋವಿಡ್‌ ಪ್ರಕರಣಗಳ ಸಂಖ್ಯೆ ಮೂರು ಕೋಟಿ ಮುಟ್ಟಿತು.

ದೇಶದಲ್ಲಿ ಇದುವರೆಗೂ ಒಟ್ಟು 81,85,13,827 ಡೋಸ್‌ ಕೋವಿಡ್‌ ಲಸಿಕೆ ಹಾಕಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.