ADVERTISEMENT

ಗಾಜಿಯಾಬಾದ್‌ ಹಲ್ಲೆ ಪ್ರಕರಣ: ನಟಿ, ಟ್ವಿಟರ್ ಎಂಡಿ ವಿರುದ್ಧ ಪೊಲೀಸರಿಗೆ ದೂರು

ಪಿಟಿಐ
Published 17 ಜೂನ್ 2021, 6:51 IST
Last Updated 17 ಜೂನ್ 2021, 6:51 IST
ಸ್ವರ ಭಾಸ್ಕರ್
ಸ್ವರ ಭಾಸ್ಕರ್   

ನವದೆಹಲಿ: ಗಾಜಿಯಾಬಾದ್‌ನಲ್ಲಿ ವೃದ್ಧ ಮುಸ್ಲಿಂ ವ್ಯಕ್ತಿಯ ಮೇಲೆ ನಡೆದ ಹಲ್ಲೆ ನಡೆದ ಘಟನೆಯ ವಿಡಿಯೊ ತುಣುಕನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸ್ವರಾ ಭಾಸ್ಕರ್, ಟ್ವಿಟರ್ ಇಂಡಿಯಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ಮತ್ತು ಇತರರ ವಿರುದ್ಧ ದೆಹಲಿ ಪೊಲೀಸರಿಗೆ ದೂರು ಬಂದಿದೆ ಗುರುವಾರ ಮೂಲಗಳು ತಿಳಿಸಿವೆ.

‘ನಟಿ ಸ್ವರಾ ಭಾಸ್ಕರ್, ಟ್ವಿಟರ್‌ ಇಂಡಿಯಾ ಕಂಪನಿ ಎಂಡಿ ಮನೀಶ್ ಮಹೇಶ್ವರಿ ಮತ್ತಿತರರ ವಿರುದ್ಧ ತಿಲಕ್ ಮಾರ್ಗ್ ಪೊಲೀಸ್ ಠಾಣೆಗೆ ದೂರು ಸಲ್ಲಿಕೆಯಾಗಿದೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ‘ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಈ ದೂರಿಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ತಕ್ಷಣ ಲಭ್ಯವಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ ವಿಡಿಯೊದ ತುಣಕಿನಲ್ಲಿ ಹಿರಿಯ ಮುಸ್ಲಿಂ ವ್ಯಕ್ತಿಯೊಬ್ಬರು ‘ನಾಲ್ಕು ಜನರು ನನ್ನನ್ನು ಥಳಿಸಿ, ಗಡ್ಡವನ್ನು ಕತ್ತರಿಸಿದ್ದಾರೆ ಮತ್ತು ಜೈ ಶ್ರೀ ರಾಮ್ ಎಂದು ಹೇಳುವಂತೆ ಒತ್ತಾಯಿಸಿದ್ದಾರೆ ಎಂದು ಹೇಳುವ ದೃಶ್ಯವಿತ್ತು. ಗಾಜಿಯಾಬಾದ್‌ನ ಲೋನಿ ಪ್ರದೇಶದಲ್ಲಿ ಜೂನ್‌ 5 ರಂದು ನಡೆದ ಈ ಘಟನೆ, ಎರಡು ದಿನಗಳ ನಂತರ ಪೊಲೀಸರಿಗೆ ತಿಳಿದಿದೆ. ಈ ಸಂಬಂಧ ಕೆಲವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.