ADVERTISEMENT

ಗೋವಾದಲ್ಲಿ 32 ಪಿಎಫ್ಐ ಸದಸ್ಯರ ಬಂಧನ: ಸಿಎಂ ಪ್ರಮೋದ್ ಸಾವಂತ್

ಪಿಟಿಐ
Published 31 ಮಾರ್ಚ್ 2023, 16:04 IST
Last Updated 31 ಮಾರ್ಚ್ 2023, 16:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪಣಜಿ: ಕೇಂದ್ರ ಸರ್ಕಾರವು ರ್‍ಯಾಡಿಕಲ್ ಇಸ್ಲಾಮಿಕ್ ಸಂಘಟನೆ ಮೇಲೆ ನಿಷೇಧ ಹೇರಿದ ನಂತರ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) 32 ಮಂದಿ ಸದಸ್ಯರನ್ನು ಗೋವಾದಲ್ಲಿ ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಪ್ರಪ್ರಮೋದ್ ಸಾವಂತ್ ಅವರು ವಿಧಾನಸಭೆಯಲ್ಲಿ ಶುಕ್ರವಾರ ತಿಳಿಸಿದ್ದಾರೆ.

ಗೋವಾದಲ್ಲಿ ಪಿಎಫ್‌ಐ ಚಟುವಟಿಕೆಗಳ ಕುರಿತು, ಬಿಜೆಪಿ ಶಾಸಕ ಪರ್ವೀನ್‌ ಅರ್ಲೇಕರ್‌ ಅವರ ಪ್ರಶ್ನೆಗೆ ಕಲಾಪದಲ್ಲಿ ಉತ್ತರಿಸಿದ ಅವರು, ಪಿಎಫ್‌ಐ ನಿಷೇಧ ಮಾಡುವ ಮೊದಲು ಗೋವಾ ಪೊಲೀಸರು ಈ ಸಂಘಟನೆಯ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದ 18 ಜನರನ್ನು ಬಂಧಿಸಿದ್ದಾರೆ ಎಂದು ತಿಳಿಸಿದರು.

ಈ ಪಕ್ಷ ನಿಷೇಧಿತವಾದ ಬಳಿಕ ಫರ್ತೋಡಾ, ಮೈನಾ–ಕ್ಯುರ್ತೋರಿಂ, ವಾಸ್ಕೋ, ವಾಲ್ಪೊಯ್‌, ಪೊಂಡಾ ಮತ್ತು ಮಾರ್ಗೋ ಠಾಣೆಗಳಲ್ಲಿ ದೂರು ದಾಖಲಾದ ಪ್ರಕರಣಗಳಲ್ಲಿ ಒಟ್ಟು 32 ಮಂದಿ ಪಿಎಫ್‌ಐ ಸದಸ್ಯರನ್ನು ಬಂಧಿಸಿದ್ದಾರೆ ಎಂದು ಸಿಎಂ ತಿಳಿಸಿದರು.

ADVERTISEMENT

ಪಿಎಫ್‌ಐ ಎಲ್ಲ ಕಚೇರಿಗಳ ಮೇಲೆ ಮೊಹರು ಮಾಡಿ, ಅಲ್ಲಿನ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳನ್ನು ಆಯಾ ಜಿಲ್ಲೆಯ ಮ್ಯಾಜಿಸ್ಟ್ರೇಟರ್‌ಗಳಿಗೆ ಹಸ್ತಾಂತರಿಸಲಾಗಿದೆ. ಪಿಎಫ್‌ಐ ಸಿಬ್ಬಂದಿಯ ಮೇಲೂ ಪೊಲೀಸರಿಗೆ ಕಣ್ಣಿಡಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಗೋವಾದ ಪಿಎಫ್‌ಐ ಚಟುವಟಿಕೆಗಳಿಗೆ ಹಣಕಾಸು ಸಹಾಯ ಮಾಡುತ್ತಿದ್ದ ಎಂಬ ಮಾಹಿತಿ ಮೇರೆಗೆ ಅಲ್ತಾಫ್‌ ಸೈಯದ್‌ ಮತ್ತು ಸಹಚರರ ಮೇಲೆ ದೂರು ದಾಖಲಾಗಿದೆ. ನಂತರ ವಾರೆಂಟ್‌ ಪಡೆದುಕೊಂಡ ಅವರ ಕಚೇರಿ ಮತ್ತು ನಿವಾಸದಲ್ಲಿ ಶೋಧಕಾರ್ಯ ನಡೆದಿದೆ. ಇದರಿಂದ ಸೈಯದ್‌ ರಾಜಕೀಯ ಗುಂಪು ‘ವಿ ಫಾರ್ ಫರ್ತೋಡಾ’ ಅವರಿಗೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಆದರೆ ತನಿಖೆಯು ಮುಂದುವರೆದಿದೆ. ರಾಷ್ಟ್ರವ್ಯಾಪಿ 100ಕ್ಕೂ ಹೆಚ್ಚು ಆರೋಪಿತ ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.