ADVERTISEMENT

44 ದಿನದ ಕೂಲಿ ಕೊಡಿಸಿ: ಪ್ರಧಾನಿಗೆ ಹೂದೋಟ ಕೆಲಸಗಾರನ ಮೊರೆ

ಪಿಟಿಐ
Published 27 ಜನವರಿ 2023, 16:08 IST
Last Updated 27 ಜನವರಿ 2023, 16:08 IST
ನರೇಂದ್ರ ಮೋದಿ
ನರೇಂದ್ರ ಮೋದಿ    

ನವದೆಹಲಿ: ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದ ಹೂದೋಟದ ಕೆಲಸಗಾರ ಸುಖ್ ನಂದನ್‌ ಅವರು ಗುತ್ತಿಗೆದಾರನಿಂದ ತಮಗೆ ಬರಬೇಕಾದ 44 ದಿನದ ಕೂಲಿಯನ್ನು ಕೊಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

ಸೆಂಟ್ರಲ್ ವಿಸ್ತಾ ಕೆಲಸದಲ್ಲಿ ತೊಡಗಿದ್ದ ಕಾರ್ಮಿಕರಿಗೆ ಗಣರಾಜ್ಯೋತ್ಸವಕ್ಕೆ ವಿಶೇಷ ಆಹ್ವಾನ ನೀಡಲಾಗಿತ್ತು. ಅವರಲ್ಲಿ 44 ವರ್ಷದ ಸುಖ್‌ ನಂದನ್‌ ಕೂಡ ಒಬ್ಬರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಕ್ಕೆ ಅವರಿಗೆ ಭಾರಿ ಸಂತೋಷವಾಗಿತ್ತು.

‘ಅವಕಾಶ ನೀಡಿದರೆ ಪ್ರಧಾನಿಯವರಲ್ಲಿ ಏನು ಕೇಳುತ್ತೀರಿ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಹಿಂದೆ ಕೆಲಸ ಮಾಡಿದ್ದ ಆಂಧ್ರ ಭವನ್‌ ಯೋಜನೆಯ ಗುತ್ತಿಗೆದಾರ ತಿಂಗಳಿಗೆ ₹14,586ರಂತೆ ಸುಮಾರು ₹21 ಸಾವಿರ ಕೂಲಿಯನ್ನು ನೀಡಬೇಕು. ಆದರೆ ಕೇವಲ ₹6 ಸಾವಿರ ನೀಡುತ್ತೇನೆ ಎನ್ನುತ್ತಿದ್ದಾರೆ. ಕೂಲಿ ಬಾಕಿ ಇಟ್ಟಿದ್ದಕ್ಕಾಗಿ ಅವರ ಬ್ರಷ್‌ ಕಟರ್‌ ನನ್ನ ಬಳಿ ಇಟ್ಟುಕೊಂಡಿದ್ದೇನೆ. ಬಾಕಿ ಹಣ ಕೊಟ್ಟರೆ ಕಟರ್‌ ಹಿಂದಿರುಗಿಸುತ್ತೇನೆ. ಪ್ರಧಾನಿ ಬಾಕಿ ಹಣ ಕೊಡಿಸಲಿ’ ಎಂದರು.

ADVERTISEMENT

ಗುತ್ತಿಗೆದಾರ ಜಿತೆನ್ ಉಪಾಧ್ಯಾಯ ಅವರನ್ನು ಸಂಪರ್ಕಿಸಿದಾಗ ತಾವು ಬಾಕಿ ಪಾವತಿಸಬೇಕಿರುವುದನ್ನು ಒಪ್ಪಿಕೊಂಡರು. ‘ಬಾಕಿ ಮೊತ್ತದ ಬಗ್ಗೆ ವಿವಾದ ಇದೆ, ₹21 ಸಾವಿರ ಪಾವತಿ ಬಾಕಿ ಉಳಿದಿಲ್ಲ. ಬ್ರಷ್‌ ಕಟರ್ ಜತೆಗೆ ಇತರ ಕೆಲವು ಪ್ಲಂಬಿಂಗ್ ಸಾಮಗ್ರಿಗಳೂ ನಂದನ್‌ ಬಳಿ ಇವೆ, ಅದನ್ನು ಮೊದಲಾಗಿ ನೀಡಲಿ, ಆಮೇಲೆ ಬಾಕಿ ಪಾವತಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.