ADVERTISEMENT

ಕೋವಿಡ್ ಲಸಿಕಾ ಅಭಿಯಾನ: ದೇಶದಲ್ಲಿ 90 ಕೋಟಿಗೂ ಅಧಿಕ ಡೋಸ್ ನೀಡಿಕೆ

ಪಿಟಿಐ
Published 2 ಅಕ್ಟೋಬರ್ 2021, 9:46 IST
Last Updated 2 ಅಕ್ಟೋಬರ್ 2021, 9:46 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಭಾರತದಲ್ಲಿ ಶನಿವಾರದ ವೇಳೆಗೆ 90 ಕೋಟಿಗೂ ಅಧಿಕ ಕೋವಿಡ್-19 ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವಿಯಾ ಟ್ವೀಟ್ ಮಾಡಿದ್ದಾರೆ.

ಕೋವಿಡ್-19ಗೆ ಸಂಬಂಧಿಸಿದಂತೆ ಜಾಗತಿಕವಾಗಿ 50 ಲಕ್ಷಕ್ಕೂ ಅಧಿಕ ಜನರು ಮೃತಪಟ್ಟಿರುವ ಒಂದು ದಿನದ ನಂತರ ರಾಷ್ಟ್ರವು ಲಸಿಕಾ ಅಭಿಯಾನದಲ್ಲಿ ಮೈಲಿಗಲ್ಲನ್ನು ಸಾಧಿಸಿದೆ. ಡೆಲ್ಟಾ ರೂಪಾಂತರವು ಸಾವಿನ ಸಂಖ್ಯೆಯ ಹೆಚ್ಚಳಕ್ಕೆ ಕಾರಣವಾಗಿದ್ದು, ಮುಖ್ಯವಾಗಿ ಲಸಿಕೆ ಹಾಕಿಸಿಕೊಳ್ಳದವರನ್ನು ಗುರಿಯಾಗಿಸಿದೆ.

ಅಧಿಕೃತ ದಾಖಲೆಗಳ ಪ್ರಕಾರ, ಸೆ.19 ವರೆಗೆ ಕೋವಿಶೀಲ್ಡ್‌ ಲಸಿಕೆಯ 65.25 ಕೋಟಿಗೂ ಅಧಿಕ ಹಾಗೂ ಕೋವ್ಯಾಕ್ಸಿನ್‌ನ 9.1 ಕೋಟಿಗೂ ಹೆಚ್ಚು ಡೋಸ್‌ಗಳನ್ನು ಸ್ವೀಕರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ADVERTISEMENT

ಪುಣೆ ಮೂಲದ ಸೀರಂ ಇನ್ಸ್‌ಟಿಟ್ಯೂಟ್‌ ಆಫ್‌ ಇಂಡಿಯಾ (ಎಸ್‌ಐಐ) ಕೋವಿಶೀಲ್ಡ್‌ ಹಾಗೂ ಹೈದರಾಬಾದ್‌ ಮೂಲದ ಭಾರತ್ ಬಯೋಟೆಕ್‌ ಕಂಪನಿ ಕೋವ್ಯಾಕ್ಸಿನ್‌ ಲಸಿಕೆಯನ್ನು ಉತ್ಪಾದಿಸಿ, ಪೂರೈಸುತ್ತಿವೆ.

ಅಕ್ಟೋಬರ್‌ನಲ್ಲಿ ಕೋವಿಶೀಲ್ಡ್‌ನ 22 ಕೋಟಿ ಡೋಸ್‌ಗಳನ್ನು ಪೂರೈಕೆ ಮಾಡುವುದಾಗಿ ಎಸ್‌ಐಐ ಮಾಹಿತಿ ನೀಡಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.