ADVERTISEMENT

2021ರಿಂದ ವರ್ಷಕ್ಕೆ ನಾಲ್ಕು ಬಾರಿ ಜೆಇಇ–ಮೇನ್ಸ್‌

ಫೆಬ್ರುವರಿಯಲ್ಲಿ ಮೊದಲನೇ ಸುತ್ತು –ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌

ಪಿಟಿಐ
Published 16 ಡಿಸೆಂಬರ್ 2020, 15:46 IST
Last Updated 16 ಡಿಸೆಂಬರ್ 2020, 15:46 IST
ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌
ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌   

ನವದೆಹಲಿ: ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹಾಗೂ ಹೆಚ್ಚಿನ ಅಂಕಗಳನ್ನು ಪಡೆಯಲು ಸಹಕಾರಿಯಾಗುವಂತೆ, ಎಂಜಿನಿಯರಿಂಗ್‌ ಕಾಲೇಜುಗಳ ಪ್ರವೇಶಕ್ಕೆ ಇರುವ ಜೆಇಇ–ಮೇನ್ಸ್‌ ಪರೀಕ್ಷೆಯನ್ನು2021ರಿಂದ ವರ್ಷಕ್ಕೆ ನಾಲ್ಕು ಬಾರಿ ನಡೆಸುವುದಾಗಿ ಕೇಂದ್ರ ಶಿಕ್ಷಣ ಸಚಿವ ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ ಬುಧವಾರ ಘೋಷಿಸಿದ್ದಾರೆ.

ಫೆ.23ರಿಂದ 26ರವರೆಗೆ ಮೊದಲ ಸುತ್ತು ನಡೆಯಲಿದ್ದು, ಮಾರ್ಚ್‌, ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಇನ್ನುಳಿದ ಸುತ್ತುಗಳು ನಡೆಯಲಿವೆ.

‘ವಿದ್ಯಾರ್ಥಿಗಳಿಂದ ಬಂದಂತಹ ಸಲಹೆಗಳನ್ನು ನಾವು ಪರಿಶೀಲಿಸಿ, ಜೆಇಇ–ಮೇನ್ಸ್‌ ಪರೀಕ್ಷೆಯನ್ನು ವರ್ಷಕ್ಕೆ ನಾಲ್ಕು ಬಾರಿ ನಡೆಸಲು ನಿರ್ಧರಿಸಿದ್ದೇವೆ’ ಎಂದು ನಿಶಾಂಕ್‌ ಹೇಳಿದರು.

ADVERTISEMENT

‘ಫೆಬ್ರುವರಿಯಲ್ಲಿ ಮೊದಲ ಸುತ್ತಿನ ಪರೀಕ್ಷೆ ನಡೆಯಲಿದ್ದು, ಕೊನೆಯ ಪರೀಕ್ಷೆ ನಡೆದ ಐದು ದಿನದೊಳಗಾಗಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗುವುದು’ ಎಂದರು.

‘ಈ ನಿರ್ಧಾರದಿಂದಾಗಿ ನಾನಾ ಕಾರಣದಿಂದಾಗಿ ಪರೀಕ್ಷೆಯಿಂದ ವಿದ್ಯಾರ್ಥಿಗಳು ವಂಚಿತರಾಗುವುದು ತಪ್ಪುತ್ತದೆ. ಒಟ್ಟು 90 ಪ್ರಶ್ನೆಗಳ ಪೈಕಿ 75 ಪ್ರಶ್ನೆಗಳಿಗೆ(ಭೌತಶಾಸ್ತ್ರ, ಗಣಿತ ಹಾಗೂ ರಸಾಯನಶಾಸ್ತ್ರದಲ್ಲಿ ತಲಾ 25) ಉತ್ತರಿಸುವ ಆಯ್ಕೆಯನ್ನು ವಿದ್ಯಾರ್ಥಿಗಳಿಗೆ ನೀಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.