ADVERTISEMENT

28ಕ್ಕೆ ಅಗ್ನಿವೀರರ ಮೊದಲ ಬ್ಯಾಚ್‌ನ ನಿರ್ಗಮನ ಪಥಸಂಚಲನ

ಪಿಟಿಐ
Published 25 ಮಾರ್ಚ್ 2023, 16:22 IST
Last Updated 25 ಮಾರ್ಚ್ 2023, 16:22 IST
ಮಹಿಳಾ ಅಗ್ನಿವೀರರು –ಪಿಟಿಐ ಸಂಗ್ರಹ ಚಿತ್ರ 
ಮಹಿಳಾ ಅಗ್ನಿವೀರರು –ಪಿಟಿಐ ಸಂಗ್ರಹ ಚಿತ್ರ    

ನವದೆಹಲಿ: ಅಗ್ನಿವೀರರ ಮೊದಲ ಬ್ಯಾಚ್‌ನ ನಿರ್ಗಮನ ಪಥ ಸಂಚಲನವು ಮಾರ್ಚ್ 28ರಂದು ಐಎನ್‌ಎಸ್ ಚಿಲ್ಕಾದಲ್ಲಿ ನಡೆಯಲಿದೆ ಎಂದು ನೌಕಾಪಡೆಯು ಶನಿವಾರ ತಿಳಿಸಿದೆ.

ಸಾಂಪ್ರದಾಯಿಕವಾಗಿ ನಿರ್ಗಮನ ಪಥಸಂಚಲನವು (ಪಿಒಪಿ) ಬೆಳಿಗ್ಗೆ ನಡೆಯುತ್ತದೆ. ಆದರೆ, ಭಾರತೀಯ ಸಶಸ್ತ್ರ ಪಡೆಗಳ‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಿರ್ಗಮನ ಪಥಸಂಚಲನವು ಸೂರ್ಯಾಸ್ತದ ಬಳಿಕ ನಡೆಯಲಿದೆ ಎಂದೂ ನೌಕಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

ನೌಕಾಪಡೆಯ ಮುಖ್ಯಸ್ಥ ಆಡ್ಮಿರಲ್ ಆರ್. ಹರಿಕುಮಾರ್ ಅವರು ಮುಖ್ಯ ಅತಿಥಿಯಾಗಿ ಹಾಗೂ ನಿರ್ಗಮನ ಪಥಸಂಚಲನದ ಪರಿಶೀಲನಾ ಅಧಿಕಾರಿಯಾಗಿ ಭಾಗವಹಿಸುವರು ಎಂದು ಅವರು ಮಾಹಿತಿ ನೀಡಿದ್ದಾರೆ.

ADVERTISEMENT

273 ಮಹಿಳಾ ಅಗ್ನಿವೀರರು ಸೇರಿದಂತೆ ಒಟ್ಟು 2,600 ಅಗ್ನಿವೀರರು ಯಶಸ್ವಿಯಾಗಿ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.