ADVERTISEMENT

ಮೋದಿಯವರು ಸಾಂವಿಧಾನಿಕ ಹುದ್ದೆಗೇರಿ 20 ವರ್ಷ: ಬಿಜೆಪಿ ನಾಯಕರಿಂದ ಗುಣಗಾನ

ಪಿಟಿಐ
Published 7 ಅಕ್ಟೋಬರ್ 2021, 9:54 IST
Last Updated 7 ಅಕ್ಟೋಬರ್ 2021, 9:54 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸರ್ಕಾರದ ಮುಖ್ಯಸ್ಥರಾಗಿ ಸಾಂವಿಧಾನಿಕ ಹುದ್ದೆಗೇರಿಗುರುವಾರಕ್ಕೆ (ಅ.7) 20 ವರ್ಷಗಳು (ಗುಜರಾತಿನಲ್ಲಿ 13 ವರ್ಷಗಳು ಸಿ.ಎಂ ಆಗಿದ್ದೂ ಸೇರಿದಂತೆ) ಪೂರೈಸಿವೆ. ಈ ಸಂದರ್ಭದಲ್ಲಿ ಬಿಜೆಪಿಯ ಹಿರಿಯ ನಾಯಕರು ಮೋದಿಯವರ ನಾಯಕತ್ವ, ಉತ್ತಮ ಆಡಳಿತ ಮತ್ತು ಅವರು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಶ್ಲಾಘಿಸಿದ್ದಾರೆ.

ಮೂರು ದಶಕಗಳಿಂದ ಮೋದಿಯವರ ಆಪ್ತರಾಗಿರುವ ಗೃಹ ಸಚಿವ ಅಮಿತ್‌ ಶಾ, ‘2001ರ ಇದೇ ದಿನದಂದು ಮೋದಿಯವರು ಗುಜರಾತ್‌ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನದಿಂದಲೂ ಉತ್ತಮ ಆಡಳಿತ ಮತ್ತು ಅಭಿವೃದ್ಧಿಯ ಪಯಣವು ಯಾವುದೇ ಅಡೆತಡೆಯಿಲ್ಲದೇ ನಿರಂತರವಾಗಿ ಸಾಗುತ್ತಿದೆ‘ ಎಂದು ಹೇಳಿದ್ದಾರೆ.

ದೇಶದ ಪ್ರಗತಿಗಾಗಿ ಪ್ರಧಾನಿಯವರು ಹಗಲು ರಾತ್ರಿ ದುಡಿಯುತ್ತಿದ್ದಾರೆ ಎಂದು ಶಾ ಟ್ವೀಟ್‌ ಮಾಡಿದ್ದಾರೆ.

ADVERTISEMENT

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ‘ಮೋದಿಯವರು ದೇಶವನ್ನು ನಿರಾಶೆಯ ವಾತಾವರಣದಿಂದ ಹೊರಗೆ ತಂದು, ಪ್ರಗತಿಯ ಹಾದಿಯಲ್ಲಿ ಕೊಂಡೊಯ್ಯುತ್ತಾ ‘ವಿಶ್ವ ಗುರು‘ (ವಿಶ್ವ ನಾಯಕ) ಆಗಿದ್ದಾರೆ‘ ಎಂದು ಹೇಳಿದ್ದಾರೆ.

‘ಅವರು ಕರ್ಮಯೋಗಿಯಂತೆ ಕೆಲಸ ಮಾಡುತ್ತಿದ್ದಾರೆ. ನವ ಭಾರತ ನಿರ್ಮಾಣದ ಬಗ್ಗೆ ದೇಶದ ಜನರಲ್ಲಿ ಆತ್ಮವಿಶ್ವಾಸ ತುಂಬುತ್ತಿದ್ದಾರೆ‘ ಎಂದು ನಡ್ಡಾ ತಿಳಿಸಿದ್ದಾರೆ.

ಪ್ರಧಾನಿ ಮೋದಿಯವರನ್ನು ಅಭಿನಂದಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್‌, ‘ಮೋದಿಯವರು ಕಳಂಕ ರಹಿತವಾಗಿ ಈ 20 ವರ್ಷಗಳನ್ನು ಜನರ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದಾರೆ‘ ಎಂದು ಶ್ಲಾಘಿಸಿದ್ದಾರೆ. ‘ಅವರ ಜನಪ್ರಿಯತೆ ಇನ್ನೂ ಹೆಚ್ಚಾಗಲಿ‘ ಎಂದು ಆಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.