ADVERTISEMENT

‘ಟೆಲಿಪ್ರಾಂಪ್ಟರ್ ಪಿಎಂ’: ಮೋದಿ ಭಾಷಣ ನಿಂತ ವಿಡಿಯೊ ಟ್ವಿಟರ್‌ನಲ್ಲಿ ಟ್ರೆಂಡ್

​ಪ್ರಜಾವಾಣಿ ವಾರ್ತೆ
Published 18 ಜನವರಿ 2022, 14:49 IST
Last Updated 18 ಜನವರಿ 2022, 14:49 IST
   

ನವದೆಹಲಿ: ನಿನ್ನೆ ವಿಶ್ವ ಆರ್ಥಿಕೆ ವೇದಿಕೆಯನ್ನು ಉದ್ದೇಶಿಸಿ ವರ್ಚುವಲ್ ಆಗಿ ಮಾತನಾಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಭಾಷಣವು ಟೆಲಿ ಪ್ರಾಂಪ್ಟರ್ ದೋಷದಿಂದ ಅರ್ಧಕ್ಕೆ ನಿಂತ ವಿಡಿಯೊ ಟ್ವಿಟರ್‌ನಲ್ಲಿ ವೈರಲ್ ಆಗಿದೆ. ಟ್ವಿಟರ್‌ನಲ್ಲಿ ಈ ವಿಡಿಯೊ ಪೋಸ್ಟ್ ಮಾಡಿ ಕೆಲವರು #ಟೆಲಿಪ್ರಾಂಪ್ಟರ್ ಪಿಎಂ #ರಿಯಲ್ ಪಪ್ಪು ಎಂಬಿತ್ಯಾದಿ ಹ್ಯಾಶ್ ಟ್ಯಾಗ್ ನೀಡಿ ಟ್ರೋಲ್ ಮಾಡಿದರೆ, ಮತ್ತೆ ಕೆಲವರು ಇದು ತಾಂತ್ರಿಕ ದೋಷ ಸಮರ್ಥಿಸಿಕೊಂಡಿದ್ದಾರೆ.

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸಹ ಈ ವಿಡಿಯೊ ಬಗ್ಗೆ ಟ್ವೀಟ್ ಮಾಡಿದ್ದು, ಟೆಲಿಪ್ರಾಂಪ್ಟರ್ ಸಹ ಇಷ್ಟೊಂದು ಸುಳ್ಳುಗಳನ್ನು ಸಹಿಸಿಕೊಳ್ಳುತ್ತಿಲ್ಲ ಎಂದು ಕುಟುಕಿದ್ದಾರೆ.

ಆಗಿದ್ದೇನು?: ವಿಶ್ವ ಆರ್ಥಿಕ ವೇದಿಕೆಯ ‘ದಾವೋಸ್ ಅಜೆಂಡಾ 2022’ ಶೃಂಗಸಭೆಯಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಮಾಡುತ್ತಿದ್ದ ವಿಶೇಷ ಭಾಷಣಕ್ಕೆ ಟೆಲಿಪ್ರಾಂಪ್ಟರ್ ವೈಫಲ್ಯದಿಂದ ತೊಡಕು ಉಂಟಾಯಿತು.

ADVERTISEMENT

ಕೂಡಲೇ ಮೋದಿ ಪಕ್ಕದಲ್ಲಿದ್ದ ಸಿಬ್ಬಂದಿ ಕಡೆಗೆ ನೋಡುತ್ತಾರೆ. ಬಳಿಕ, ಒಂದೆರಡು ಪದ ಮಾತನಾಡಿ ಮತ್ತೆ ಪಕ್ಕಕ್ಕೆ ನೋಡುತ್ತಾರೆ. ಅವರ ಸಿಬ್ಬಂದಿಯ ಸದಸ್ಯರೊಬ್ಬರು ದಾವೋಸ್‌ನಲ್ಲಿರುವವರಿಗೆ ಧ್ವನಿ ಕೇಳಿಸುತ್ತಿದೆಯೇ ಎಂದು ಕೇಳಲು ಹಿಂದಿಯಲ್ಲಿ ಅವರಿಗೆ ಹೇಳುತ್ತಾರೆ. ನಂತರ ನೇರವಾಗಿ ಕ್ಯಾಮೆರಾದತ್ತ ನೋಡಿದ ಮೋದಿ, ಏನನ್ನೋ ಹೇಳಲು ಪ್ರಯತ್ನಿಸುತ್ತಾರೆ. ಆದರೆ, ಒಂದು ಮಾತನ್ನೂ ಆಡುವುದಿಲ್ಲ.ಬಳಿಕ, 10 ಸೆಕೆಂಡುಗಳ ಕಾಲ ಮೌನವಾಗುತ್ತಾರೆ. ನಂತರ ಇಯರ್‌ಫೋನ್ ಅನ್ನು ಸರಿಮಾಡಿಕೊಂಡುಕ್ಲಾಸ್ ಶ್ವಾಬ್‌ ಅವರನ್ನು ಉದ್ದೇಶಿಸಿ ನನ್ನ ಧ್ವನಿ ಕೇಳುತ್ತಿದೆಯೇ? ಎಂದು ಹಿಂದಿಯಲ್ಲಿ ಕೇಳುತ್ತಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಡಬ್ಲ್ಯುಇಎಫ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಕ್ಲಾಸ್ ಶ್ವಾಬ್ ಅವರು, ಕೇಳುತ್ತಿದೆ ಎಂದು ಉತ್ತರಿಸುತ್ತಾರೆ. ಮತ್ತೆ ಮೋದಿ ನನ್ನ ಇಂಟರ್‌ಪ್ರಿಟೇಶನ್ ಕೇಳುತ್ತಿದ್ದಯೇ ಎನ್ನುತ್ತಾರೆ.ನಂತರ ‘ನನಗೆ ನಿಮ್ಮ ಮಾತುಗಳು ಚೆನ್ನಾಗಿ ಕೇಳಿಸುತ್ತಿವೆ. ನಾವು ಈಗಅಧಿಕೃತ ಅಧಿವೇಶನವನ್ನು ಪ್ರಾರಂಭಿಸಬಹುದು’ ಎಂದು ಹೇಳುತ್ತಾರೆ ಶ್ವಾಬ್. ಮತ್ತೊಮ್ಮೆ ಮೋದಿಯನ್ನು ಪರಿಚಯಿಸುತ್ತಾರೆ. ನಂತರ ಪ್ರಧಾನಿ ಮೋದಿಭಾಷಣವನ್ನು ಹೊಸದಾಗಿ ಪ್ರಾರಂಭಿಸುತ್ತಾರೆ.

ಅಂತಹ ಉನ್ನತ ಸಭೆಯೊಂದರಲ್ಲಿ ಟೆಲಿಪ್ರಾಂಪ್ಟರ್ ದೋಷ ಸಾಮಾನ್ಯವಲ್ಲ. 2009ರಲ್ಲಿ, ಐರಿಶ್ ಪ್ರಧಾನ ಮಂತ್ರಿಯು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ ಭಾಷಣವನ್ನು ಟೆಲಿಪ್ರಾಂಪ್ಟರ್‌ನಿಂದ ಓದಿದ್ದರು. ಮತ್ತು 2015 ರಲ್ಲಿ ಸ್ವತಃ ಮೋದಿಯವರು ಅಂದಿನ ಶ್ರೀಲಂಕಾ ಅಧ್ಯಕ್ಷರ ಪತ್ನಿಯನ್ನು ಎಂ.ಆರ್.ಎಸ್. ಸಿರಿಸೇನ ಎಂದು ಸಂಭೋದಿಸಿದ್ದರು.

ಸೋಮವಾರದ ಟೆಲಿಪ್ರಾಂಪ್ಟರ್ ದೋಷದ ಹಿಂದಿನ ಸತ್ಯ ಏನೇ ಇದ್ದರೂ ಮೋದಿ ಟೆಲಿಪ್ರಾಂಪ್ಟರ್ ಇಲ್ಲದೆ ಮಾತನಾಡಲಾರರು ಎಂಬ ಅರ್ಥದಲ್ಲಿ ಕೆಲವರು ಟ್ವೀಟ್ ಮಾಡಿ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.