ADVERTISEMENT

ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ಭಾರತೀಯ ರೈಲ್ವೆ

ಮತ್ತೆ 50 ರೈಲುಗಳು ಪುನರಾರಂಭ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಜೂನ್ 2021, 8:39 IST
Last Updated 17 ಜೂನ್ 2021, 8:39 IST
ಸಾಂದರ್ಭಿಕ ಚಿತ್ರ, ಪ್ರಜಾವಾಣಿ
ಸಾಂದರ್ಭಿಕ ಚಿತ್ರ, ಪ್ರಜಾವಾಣಿ   

ನವದೆಹಲಿ: ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ದೇಶದ ಬಹುತೇಕ ಕಡೆ ಲಾಕ್‌ಡೌನ್‌ ಇದ್ದಿದ್ದರಿಂದ ರೈಲುಗಳಓಡಾಟ ಗಣನೀಯ ಪ್ರಮಾಣದಲ್ಲಿ ಕಡಿಮೆ ಇತ್ತು. ಇದೀಗ ಲಾಕ್‌ಡೌನ್ ಸಡಿಲ ಆಗುತ್ತಿರುವುದರಿಂದ ದೇಶಾದ್ಯಂತ 50 ರೈಲುಗಳು ಜೂನ್ 21 ರಿಂದ ಪುನರಾರಂಭವಾಗಲಿರುವುದಾಗಿ ಭಾರತೀಯ ರೈಲ್ವೆ ಪ್ರಕಟಿಸಿದೆ.

ಇದರಲ್ಲಿ ತುರಂತೊ, ಶತಾಬ್ಧಿ, ರಾಜಧಾನಿ ಮತ್ತು ಇತರ ಕೆಲ ದೂರದೂರಿನ ಎಕ್ಸಪ್ರೆಸ್ ರೈಲುಗಳು ಸೇರಿವೆ.

ಸದ್ಯ ದೇಶಾದ್ಯಂತ ಪ್ರತಿದಿನ 900 ಪ್ರಯಾಣಿಕ ರೈಲುಗಳು ಮಾತ್ರ ಸಂಚರಿಸುತ್ತಿವೆ. ಪ್ರಯಾಣಿಕರ ಬೇಡಿಕೆ ಇರದಿದ್ದರಿಂದ ಕಳೆದ ತಿಂಗಳು ಕೆಲ ಎಕ್ಸ್‌ಪ್ರೆಸ್‌ ರೈಲುಗಳನ್ನು ರದ್ದು ಪಡಿಸಲಾಗಿತ್ತು. ಕೊರೊನಾ ಎರಡನೇ ಅಲೆಗಿಂತ ಮೊದಲು ದೇಶಾದ್ಯಂತ ಪ್ರತಿ ನಿತ್ಯ 1500 ರೈಲುಗಳು ಸಂಚರಿಸುತ್ತಿದ್ದವು.

ADVERTISEMENT

ಕಳೆದ ತಿಂಗಳು ಕೇವಲ 5 ಲಕ್ಷ ಜನ ಕಾಯ್ದಿರಿಸಿದ ಸೀಟುಗಳಲ್ಲಿ ಪ್ರಯಾಣಿಸಿದ್ದರೆ, ಈ ತಿಂಗಳು 15 ಲಕ್ಷ ಜನ ಸೀಟುಗಳನ್ನು ಕಾಯ್ದಿರಿಸಿದ್ಧಾರೆ. ಲಾಕ್‌ಡೌನ್ ಸಡಿಲಿಕೆಯೇ ಇದಕ್ಕೆ ಕಾರಣ ಎಂದು ಭಾರತೀಯ ರೈಲ್ವೆ ತಿಳಿಸಿದೆ.

‘ನಾವು ರೈಲುಗಳಸಂಚಾರವನ್ನು ಸಾಮಾನ್ಯಗೊಳಿಸುವುದಕ್ಕಾಗಿ ರಾಜ್ಯ ಸರ್ಕಾರಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ‘ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ಸುನೀತ್ ಶರ್ಮಾ ತಿಳಿಸಿದ್ಧಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.