ADVERTISEMENT

ವೆಂಕಯ್ಯನಾಯ್ಡು ಅವರ ವೈಯಕ್ತಿಕ ಖಾತೆಯ ‘ಬ್ಲೂ ಟಿಕ್‘ ತೆಗೆದ ಟ್ವಿಟರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಜೂನ್ 2021, 8:52 IST
Last Updated 5 ಜೂನ್ 2021, 8:52 IST
ವೆಂಕಯ್ಯನಾಯ್ಡು ಟ್ವಿಟರ್ ಖಾತೆಯ ಸ್ಕ್ರೀನ್ ಗ್ರ್ಯಾಬ್
ವೆಂಕಯ್ಯನಾಯ್ಡು ಟ್ವಿಟರ್ ಖಾತೆಯ ಸ್ಕ್ರೀನ್ ಗ್ರ್ಯಾಬ್   

ನವದೆಹಲಿ: ಸಾಮಾಜಿಕ ಜಾಲತಾಣ ಸಂಸ್ಥೆ ಟ್ವಿಟರ್ ಶನಿವಾರ, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ವೈಯಕ್ತಿಕ ಟ್ವಿಟರ್ ಖಾತೆಯ ವೆರಿಫೈಯ್ಡ್ ಬ್ಲೂ ಬ್ಯಾಡ್ಜ್ ಅನ್ನು ತೆಗೆದುಹಾಕಿದೆ.

ಉಪರಾಷ್ಟ್ರಪತಿಗಳ ಕಚೇರಿ ನಿರ್ವಹಿಸುವ ವೆಂಕಯ್ಯ ನಾಯ್ಡು ಅವರ ಅಧಿಕೃತ ಖಾತೆ ವೈಸ್ ಪ್ರೆಸಿಡೆಂಟ್ ಆಫ್ ಇಂಡಿಯಾ @ವಿಪಿಸೆಕ್ರೇಟರಿಯೇಟ್(Vice President of India@VPSecretariat)ನಲ್ಲಿ ಬ್ಲೂ ಟಿಕ್ ಈಗಲೂ ಹಾಗೆಯೇ ಇದೆ.

ನಾಯ್ಡು ಅವರ ವೈಯಕ್ತಿಕ ಖಾತೆ, 1.3 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿದ್ದು, ಕೊನೆಯ ಟ್ವೀಟ್ ಕಳೆದ ವರ್ಷ ಜುಲೈ 23 ರಂದು ಮಾಡಲಾಗಿದೆ.

ಕೇಂದ್ರವು ಘೋಷಿಸಿರುವ ಹೊಸ ಐಟಿ ನಿಯಮಗಳ ಕುರಿತು ಟ್ವಿಟರ್ ಕೇಂದ್ರ ಸರ್ಕಾರದೊಂದಿಗೆ ಸಂಘರ್ಷದಲ್ಲಿ ತೊಡಗಿದ್ದು, ಇದೇ ಸಂದರ್ಭ ವೆಂಕಯ್ಯ ನಾಯ್ಡು ಅವರ ಖಾತೆಯಿಂದ ಬ್ಯೂ ಟಿಕ್ ತೆಗೆಯಲಾಗಿದೆ.

ಇವುಗಳನ್ನೂಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.