ADVERTISEMENT

ಕಿರಾಣಿ ಅಂಗಡಿಗಳಲ್ಲಿ ಆನ್‌ಲೈನ್‌ ಶಾಪಿಂಗ್‌: ಮನೆ ಬಾಗಿಲಿಗೆ ಭಿಮಾರ್ಟ್‌

ಸುಮನಾ ಕೆ
Published 8 ಮೇ 2020, 19:30 IST
Last Updated 8 ಮೇ 2020, 19:30 IST
ಭಿಮಾರ್ಟ್‌‌
ಭಿಮಾರ್ಟ್‌‌   

ಬೆಂಗಳೂರು: ಕೋವಿಡ್‌ –19 ವೈರಸ್‌ ಸೋಂಕು ಭಯದಿಂದಾಗಿ ಮನೆಯಿಂದ ಹೊರಗೆ ಕಾಲಿಡಲು ಭಯ. ಅಗತ್ಯ ವಸ್ತುಗಳನ್ನು ತರಲು ಅಂಗಡಿಗೆ ಹೋದರೆ, ಅಲ್ಲಿ ಅಂತರ ಕಾಯ್ದುಕೊಳ್ಳುವುದು, ಕ್ಯೂ ನಿಂತುಕೊಳ್ಳಬೇಕು.

ಇವೆಲ್ಲದಕ್ಕೂ ಪರಿಹಾರ ಎಂಬಂತೆ ಬೆಂಗಳೂರಿನ ಜಿಎಂ ಗ್ಲೋಬಲ್‌ ಕಂಪೆನಿ ‘ಭಿಮಾರ್ಟ್’ ಎಂಬ ಮೊಬೈಲ್ ಅಪ್ಲಿಕೇಷನ್‌ ಅಭಿವೃದ್ಧಿಪಡಿಸಿದ್ದು, ಈ ಆ್ಯಪ್‌ ಮೂಲಕಪರಿಚಯದ ಕಿರಾಣಿ ಅಂಗಡಿ ಯಿಂದಲೇ ವಸ್ತುಗಳನ್ನು ಆರ್ಡರ್‌ ಮಾಡಿ ತರಿಸಿಕೊಳ್ಳಬಹುದು. ಈ ಅಪ್ಲಿಕೇಷನ್ ಅನ್ನು ಕಂಪೆನಿಯ ಸ್ಥಾಪಕರಾದ ಜಿ.ಎಂ. ಲಿಂಗ‌ರಾಜು ಹಾಗೂ ಎಂ.ರಫೀಕ್‌ ರಾಜ್ ಅಭಿವೃದ್ಧಿಪಡಿಸಿದ್ದಾರೆ.

ಇದು ಯಾವ ಆ್ಯಪ್‌?
ಈ ಆ್ಯಪ್‌ ಗ್ರಾಹಕರು ಹಾಗೂ ಕಿರಾಣಿ ಅಂಗಡಿ ಮಧ್ಯೆ ಸೇತುವಾಗಿ ಕೆಲಸ ಮಾಡುತ್ತದೆ. ಆ್ಯಪ್‌ ಇನ್‌ಸ್ಟಾಲ್‌ ಮಾಡಿಕೊಂಡ ಬಳಿಕ ಗ್ರಾಹಕರು ಆ್ಯಪ್‌ ಮೂಲಕವೇ ದಿನಸಿ, ಅಗತ್ಯ ವಸ್ತುಗಳನ್ನು ಆರ್ಡರ್‌ ಮಾಡಬಹುದು. ನೆಟ್‌ ಬ್ಯಾಂಕಿಂಗ್ ಅಥವಾ ಕ್ಯಾಶ್‌ ಆನ್‌ ಡೆಲಿವೆರಿ‌ ಮೂಲಕ ಹಣವನ್ನೂ ಪಾವತಿಸಬಹುದು. ಆರ್ಡರ್‌ ಕನ್ಫರ್ಮ್‌ ಆದ ನಂತರ ಅಂಗಡಿಯವರು ಅಥವಾ ಭಿಮಾರ್ಟ್‌ ಸಿಬ್ಬಂದಿ ವಸ್ತುಗಳನ್ನು ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸುತ್ತಾರೆ.

ADVERTISEMENT

‘ಈಗ ಲಾಕ್‌ಡೌನ್‌ ಅವಧಿಯಲ್ಲಿ ಮಾಸ್ಕ್‌, ಸ್ಯಾನಿಟೈಸರ್‌ ಮೊದಲಾದ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುತ್ತಲೇ ವಸ್ತುಗಳನ್ನು ಪ್ಯಾಕ್‌ ಮಾಡಲಾಗುತ್ತದೆ’ ಎಂದು ಮಾಹಿತಿ ನೀಡುತ್ತಾರೆ ಕಂಪೆನಿ ಸಿಇಒ ರಫೀಕ್‌ ರಾಜ್‌.

ಕಿರಾಣಿ ಅಂಗಡಿಗಳನ್ನು ಉತ್ತೇಜಿಸಲು ಈ ಆ್ಯಪ್‌ ಅಭಿವೃದ್ದಿಪಡಿಸಲಾಗಿದೆ. ಸಣ್ಣ ಹಾಗೂ ಮಧ್ಯಮ ವರ್ಗದ ವ್ಯಾಪಾರಿಗಳಿಗೆ ಉಪಯೋಗವಾಗಬೇಕು ಎಂಬುದು ನಮ್ಮ ಉದ್ದೇಶ.ಈಗ ಮಲ್ಲೇಶ್ವರ, ರಾಜಾಜಿನಗರ, ಇಂದಿರಾ ನಗರ, ಕೋರಮಂಗಲ ಸೇರಿದಂತೆ ನಗರದ 12ಕ್ಕೂ ಹೆಚ್ಚು ಸ್ಥಳಗಳಲ್ಲಿ 800ಕ್ಕೂ ಹೆಚ್ಚು ಕಿರಾಣಿ ಅಂಗಡಿಗಳು ಈ ಆ್ಯಪ್‌ ಬಳಕೆ ಮಾಡುತ್ತಿವೆ. 12 ಸಾವಿರಕ್ಕೂ ಹೆಚ್ಚು ಗ್ರಾಹಕರು ಬಳಕೆ ಮಾಡುತ್ತಿದ್ದಾರೆ.

ಈ ಆ್ಯಪ್‌ ವೈಶಿಷ್ಟ್ಯವೆಂದರೆ ಗ್ರಾಹಕರುತಮಗೆ ಇಚ್ಛಿಸಿದ ಅಂಗಡಿಯಿಂದ ಬೇಕಾದ ವಸ್ತುಗಳನ್ನು ಆರ್ಡರ್‌ ಮಾಡಬಹುದು. ಯಾವ ಅಂಗಡಿ, ಅದರ ಮಾಲೀಕರು, ಅಲ್ಲಿರುವ ಸಾಮಾನು ವಿವರ ಎಲ್ಲಾ ಮಾಹಿತಿ ಇದರಲ್ಲಿ ಲಭ್ಯವಿರುತ್ತದೆ. ಆ ಮೂಲಕಕಿರಾಣಿ ಅಂಗಡಿಗೇ ಪ್ರಚಾರ ನೀಡಿ, ಉತ್ತೇಜನ ನೀಡುವುದು’ ಎಂದು ತಮ್ಮ ಆ್ಯಪ್‌‌ ಉದ್ದೇಶವನ್ನು ಹಂಚಿಕೊಂಡರು.

ಇದರಲ್ಲಿ ಸಮೀಪದ ದಿನಸಿ ಅಂಗಡಿಗಳು, ಎಲೆಕ್ಟ್ರಾನಿಕ್ಸ್‌, ಪೀಠೋಪಕರಣ, ಇ– ಸರ್ವೀಸ್‌, ಆಭರಣದಂ ಗಡಿಗಳ ಮಾಹಿತಿ ಎಲ್ಲಾ ದೊರೆಯುತ್ತವೆ. ನಿರ್ದಿಷ್ಟ ಅಂಗಡಿಯಲ್ಲಿ ಸಿಗುವ ವಸ್ತುಗಳ ಬಗ್ಗೆ ಭಿಮಾರ್ಟ್‌ ಸಿಬ್ಬಂದಿ ಅಥವಾ ಅಂಗಡಿಯವರೇ ಕಾಲಕಾಲಕ್ಕೆ ಅಪ್ಡೇಟ್‌ ಮಾಡುತ್ತಾರೆ.

ಗ್ರಾಹಕರಿಗೆ ಉಚಿತ
ಈ ಆ್ಯಪ್‌ ಬಳಕೆ ಮಾಡುವ ಕಿರಾಣಿ ಅಂಗಡಿಗಳಿಗೆ ವಾರ್ಷಿಕ ದರ ₹8,000. ಆದರೆ ಗ್ರಾಹಕರು ಈ ಆ್ಯಪ್‌ ಅನ್ನು ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು ಎನ್ನುತ್ತಾರೆ ರಫೀಕ್.

ಆ್ಯಪ್‌ ಡೌನ್‌ಲೋಡ್‌
ಪ್ಲೇಸ್ಟೋರ್‌ ಹಾಗೂ ಆ್ಯಪ್‌ ಸ್ಟೋರ್‌ಗಳಲ್ಲಿ ಈ ಆ್ಯಪ್‌ ಲಭ್ಯ. ಗ್ರಾಹಕರು bhimart - Local Online Shopping App ಟೈಪಿಸಿ, ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಮಾಹಿತಿಗೆ– https://www.bhimart.com/home. ಸಂಪರ್ಕಕ್ಕೆ– 84969 90011

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.