ADVERTISEMENT

ಟ್ರೆಂಡ್‌ಗೂ ಬಾಳಿಕೆಗೂ ಕಾರ್ಗೋ ಸ್ಟೈಲ್‌

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2021, 19:30 IST
Last Updated 31 ಅಕ್ಟೋಬರ್ 2021, 19:30 IST
ಕಾರ್ಗೋ ಪ್ಯಾಂಟ್‌
ಕಾರ್ಗೋ ಪ್ಯಾಂಟ್‌   

ಈ ನಡುವೆ ಹಳೆಯ ಫ್ಯಾಷನ್‌ ಹೊಸ ರೂಪದಲ್ಲಿ ಮತ್ತೆ ಮಾರುಕಟ್ಟೆಗೆ ಬರುವ ಟ್ರೆಂಡ್ ಆರಂಭವಾಗಿ ನಾಲ್ಕೈದು ವರ್ಷಗಳು ಕಳೆದಿವೆ. ಈಗ ಆ ಟ್ರೆಂಡ್‌ಗೆ ಕಾರ್ಗೋ ಸ್ಟೈಲ್‌ ಕೂಡ ಸೇರಿದೆ. ಒಂದು ಕಾಲದಲ್ಲಿ ಯುವಜನತೆ ಮೆಚ್ಚಿ ಧರಿಸುತ್ತಿದ್ದ ಕಾರ್ಗೋ ಪ್ಯಾಂಟ್ ಈಗ ಮಾರುಕಟ್ಟೆಯಲ್ಲಿ ಮತ್ತೆ ಸದ್ದು ಮಾಡುತ್ತಿದೆ.

***

ಬದಲಾವಣೆ ಎನ್ನುವುದಕ್ಕೆ ಫ್ಯಾಷನ್ ಕ್ಷೇತ್ರ ಉತ್ತಮ ಉದಾಹರಣೆ. ಸದಾ ಬದಲಾಗುತ್ತಲೇ ಇರುವ ಕ್ಷೇತ್ರಗಳಲ್ಲಿ ಫ್ಯಾಷನ್ ಕ್ಷೇತ್ರ ಸದಾ ಮುಂದಿರುತ್ತದೆ. ಕಳೆದ ವರ್ಷದ ಫ್ಯಾಷನ್ ಈ ವರ್ಷ ಇರುವುದಿಲ್ಲ. ಮುಂದಿನ ವರ್ಷ ಆರಂಭವಾಗುವ ಮೊದಲೇ ಈ ವರ್ಷದ ಫ್ಯಾಷನ್ ಮೂಲೆಗುಂಪಾಗಿರುತ್ತದೆ. ಈ ನಡುವೆ ಹಳೆಯ ಫ್ಯಾಷನ್‌ ಹೊಸ ರೂಪದಲ್ಲಿ ಮತ್ತೆ ಮಾರುಕಟ್ಟೆಗೆ ಬರುವ ಟ್ರೆಂಡ್ ಆರಂಭವಾಗಿ ನಾಲ್ಕೈದು ವರ್ಷಗಳು ಕಳೆದಿವೆ. ಈಗ ಆ ಟ್ರೆಂಡ್‌ಗೆ ಕಾರ್ಗೋ ಸ್ಟೈಲ್‌ ಕೂಡ ಸೇರಿದೆ. ಒಂದು ಕಾಲದಲ್ಲಿ ಯುವಜನತೆ ಮೆಚ್ಚಿ ಧರಿಸುತ್ತಿದ್ದ ಕಾರ್ಗೋ ಪ್ಯಾಂಟ್ ಈಗ ಮಾರುಕಟ್ಟೆಯಲ್ಲಿ ಮತ್ತೆ ಸದ್ದು ಮಾಡುತ್ತಿದೆ.

ADVERTISEMENT

ಕಾರ್ಗೋ ಪ್ಯಾಂಟ್‌

ಕಾರ್ಗೋ ಸ್ಟೈಲಿನ ಪ್ಯಾಂಟ್‌ನಲ್ಲಿ ಎಡ ಹಾಗೂ ಬಲ ಎರಡೂ ಭಾಗದಲ್ಲಿ ಜೇಬುಗಳಿರುತ್ತವೆ. ಇದರಲ್ಲಿ ಹೆಚ್ಚು ಜೇಬುಗಳಿರುವ ಕಾರಣಕ್ಕೆ ಜನ ಇದನ್ನು ಧರಿಸಲು ಇಷ್ಟಪಡುತ್ತಿದ್ದರು. ಇದರ ಜೊತೆ ಟೀ ಶರ್ಟ್‌, ಶರ್ಟ್ ಧರಿಸಿದರೆ ಹೆಚ್ಚು ಸೂಕ್ತ. ಸಿನಿಮಾಗಳಲ್ಲೂ ನಟ–ನಟಿಯರು ಕಾರ್ಗೋ ಪ್ಯಾಂಟ್ ಧರಿಸುತ್ತಿದ್ದರು. ಒಂದು ಕಾಲದಲ್ಲಿ ಸಿನಿಮಾಗಳಲ್ಲಿ ಕಾರ್ಗೋ ಪ್ಯಾಂಟ್ ಟ್ರೆಂಡ್ ಸೃಷ್ಟಿಸಿದ್ದು ಸುಳ್ಳಲ್ಲ. ಹೆಣ್ಣುಮಕ್ಕಳು ಹಾಗೂ ಗಂಡುಮಕ್ಕಳು ಇಬ್ಬರಿಗೂ ಈ ಪ್ಯಾಂಟ್ ಹೊಂದುತ್ತದೆ.

ಚಳಿಗಾಲದಲ್ಲಿ ಬೇಡಿಕೆ ಹೆಚ್ಚು

ಕಾರ್ಗೋ ಪ್ಯಾಂಟ್‌ ಅನ್ನು ಕಾಟನ್‌, ಸಿಂಥೆಟಿಕ್‌, ಜೀನ್ಸ್ ಬಟ್ಟೆಗಳಲ್ಲಿ ವಿನ್ಯಾಸ ಮಾಡಿರುತ್ತಾರೆ. ಇದು ದಪ್ಪಗಿರುವ ಕಾರಣ ಚಳಿಗಾಲದಲ್ಲಿ ಧರಿಸಲು ಹೆಚ್ಚು ಸೂಕ್ತ ಎನ್ನಿಸುತ್ತದೆ. ಚಳಿಗಾಲದಲ್ಲಿ ಸ್ವೆಟ್‌ಶರ್ಟ್‌, ಜಾಕೆಟ್‌, ಪುಲ್ಲೋವರ್ ಧರಿಸಿದಾಗ ಈ ಪ್ಯಾಂಟ್ ಧರಿಸಲು ಸೂಕ್ತ ಎನ್ನಿಸುತ್ತದೆ. ಚಳಿಗಾಲದಲ್ಲಿ ಇದು ನಮ್ಮನ್ನು ಬೆಚ್ಚಗಿರಿಸುತ್ತದೆ. ಆ ಕಾರಣಕ್ಕೆ ಚಳಿಗಾಲದಲ್ಲಿ ಇದಕ್ಕೆ ಕೊಂಚ ಬೇಡಿಕೆ ಹೆಚ್ಚು.

ಪೊಕೆಟ್‌ಗಳು ವಿಶೇಷತೆ

ಕಾರ್ಗೋ ಪ್ಯಾಂಟ್ ಕನಿಷ್ಠ 6 ರಿಂದ 8 ಪೊಕೆಟ್‌ಗಳನ್ನು ಹೊಂದಿರುತ್ತದೆ. ಈ ಪ್ಯಾಂಟ್ ಧರಿಸುವುದರಿಂದ ನಾವು ಬ್ಯಾಗ್ ಒಯ್ಯುವ ಅವಶ್ಯಕತೆ ಇರುವುದಿಲ್ಲ. ಫೋನ್‌, ವ್ಯಾಲೆಟ್‌, ಚಾರ್ಜರ್‌, ಇಯರ್‌ ಫೋನ್‌ ಎಲ್ಲವನ್ನೂ ಇದರ ಜೇಬಿನಲ್ಲೇ ತುರುಕಿಕೊಳ್ಳಬಹುದು. ಒಂದು ದಿನದ ಪಿಕ್‌ನಿಕ್ ಹೋಗಲು ಈ ಪ್ಯಾಂಟ್ ಹೆಚ್ಚು ಸೂಕ್ತ.

ಮಕ್ಕಳಿಂದ ವೃದ್ಧರವರೆಗೆ..

ಈ ಪ್ಯಾಂಟ್ ಮಕ್ಕಳಿಂದ ವಯಸ್ಸಾದವರವರೆಗೆ ಎಲ್ಲರೂ ಧರಿಸಬಹುದು. ಎಲ್ಲರಿಗೂ ಸಲ್ಲುವ ಪ್ಯಾಂಟ್ ಅಂತಲೇ ಇದನ್ನು ಕರೆಯಬಹುದು.

ಹೆಚ್ಚು ಬಾಳಿಕೆ

ಬಾಳಿಕೆ ವಿಷಯದಲ್ಲೂ ಕಾರ್ಗೋ ಪ್ಯಾಂಟ್‌ ಉತ್ತಮ. ಈ ಪ್ಯಾಂಟ್‌ ಉತ್ತಮ ಗುಣಮಟ್ಟದ್ದಾಗಿದ್ದು ಬಹಳ ದಿನಗಳವರೆಗೆ ಬಾಳಿಕೆ ಬರುತ್ತದೆ. ಇದರಲ್ಲಿ ವಿವಿಧ ಬಣ್ಣದ ಹಾಗೂ ಬಟ್ಟೆಯ ಪ್ಯಾಂಟ್‌ಗಳು ಲಭ್ಯವಿದ್ದು ಮಿಲಿಟರಿ ಬಣ್ಣದ ಪ್ಯಾಂಟ್ ಹೆಚ್ಚು ಚಾಲ್ತಿಯಲ್ಲಿದೆ.

ಕಾರ್ಗೋ ಸೆಟ್‌

ಅಡಿಯಿಂದ ಮುಡಿಯವರೆಗೆ ಒಂದೇ ಬಣ್ಣದ ಕಾರ್ಗೋ ಸೆಟ್‌ ಕೂಡ ಇಂದು ಫ್ಯಾಷನ್ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಒಂದು ಕಾಲಿಗೆ ಒಂದು ಬಣ್ಣ, ಇನ್ನೊಂದು ಕಾಲಿಗೆ ಇನ್ನೊಂದು ಬಣ್ಣದ ಕಾರ್ಗೋ ಪ್ಯಾಂಟ್ ಕೂಡ ಇತ್ತೀಚೆಗೆ ಮಾರುಕಟ್ಟೆಯಲ್ಲಿ ಟ್ರೆಂಡ್ ಸೃಷ್ಟಿಸುತ್ತಿದೆ.

ಎಲ್ಲಾ ಋತುಮಾನಕ್ಕೂ ಸೈ

ಕಾರ್ಗೋ ಪ್ಯಾಂಟ್ ಚಳಿಗಾಲ, ಮಳೆಗಾಲ ಹಾಗೂ ಬೇಸಿಗೆಕಾಲ ಎಲ್ಲಾ ಕಾಲದಲ್ಲೂ ಧರಿಸಲು ಸೂಕ್ತ ಎನ್ನಿಸುತ್ತದೆ. ಮೊಣಕಾಲಿನ ಬಳಿ ಅಗಲವಾಗಿದ್ದು ಗಾಳಿಯಾಡುವಂತಿರುವ ಪ್ಯಾಂಟ್ ಬೇಸಿಗೆಕಾಲಕ್ಕೆ ಹೆಚ್ಚು ಸೂಕ್ತ ಎನ್ನಿಸುತ್ತದೆ. ಮೊಣಕಾಲಿನ ಬಳಿ ಜಿಪ್‌ ಇರುವ ಪ್ಯಾಂಟ್ ಟ್ರೆಂಡಿಯಾಗಿ ಕಾಣಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.