ADVERTISEMENT

ಮಹಿಳೆ ಬಹುಪತಿ ಹೊಂದುವುದು ಒಳ್ಳೆಯದು ಎನ್ನುತ್ತಿದೆ ಈ ಅಧ್ಯಯನ

ಏಜೆನ್ಸೀಸ್
Published 28 ಅಕ್ಟೋಬರ್ 2019, 9:20 IST
Last Updated 28 ಅಕ್ಟೋಬರ್ 2019, 9:20 IST
   

ಮಹಿಳೆಯರು ಒಬ್ಬರಿಗಿಂತ ಹೆಚ್ಚು ಸಂಗಾತಿಯನ್ನು ಹೊಂದಿರುವುದು ಒಳ್ಳೆಯದು ಎಂದು ಅಧ್ಯಯನವೊಂದು ಹೇಳುತ್ತಿದೆ.

ಒಬ್ಬ ಗಂಡಸಿಗೆ ಅನೇಕ ಹೆಂಡತಿಯರಿದ್ದರೂ ಒಪ್ಪಿ ಬಿಡುವ ಈ ಸಮಾಜ, ಮಹಿಳೆಗೆ ಹೆಚ್ಚು ಸಂಗಾತಿ ಎಂದರೆ ಖಡಾ ಖಂಡಿತವಾಗಿ ನಿರಾಕರಿಸುತ್ತದೆ. ಹೀಗಿದ್ದೂಮಹಿಳೆಯರು ಹೆಚ್ಚು ಸಂಗಾತಿಯನ್ನು ಹೊಂದುವುದರಿಂದ ಅವರ ಸಂಕಷ್ಟದ ಸಮಯದಲ್ಲಿ ಅನುಕೂಲವಾಗುತ್ತದೆ ಎನ್ನುವ ಭಿನ್ನ ಆಲೋಚನೆಯನ್ನು ರಾಯಲ್‌ ಸೊಸೈಟಿ ಮ್ಯಾಗಜಿನ್‌ನಲ್ಲಿ ಪ್ರಕಟವಾದ ಈ ಅಧ್ಯಯನ ಪ್ರತಿಪಾದಿಸಿದೆ.

ಕೆಲವು ಸಮುದಾಯಗಳಲ್ಲಿ ಮಹಿಳೆಯರು ಬಹುಪತಿಯನ್ನು ಹೊಂದಿದ್ದು, ಅದರಿಂದ ಸಂಕಷ್ಟದ ಸಮಯದಲ್ಲಿ ಸಾಕಷ್ಟು ಅನುಕೂಲಗಳು ಆಗಿವೆ ಎಂದು ಇದರಲ್ಲಿ ವಿವರಿಸಲಾಗಿದೆ.

ADVERTISEMENT

‘ಈಗಿನ ವಾತಾವರಣದ ಪರಿಣಾಮಪುರುಷರ ಆರ್ಥಿಕ ಹಾಗು ಆರೋಗ್ಯ ಸ್ಥಿತಿಗತಿ ಬದಲಾಗುತ್ತಿರುತ್ತದೆ. ಹೀಗಾಗಿ ಮಹಿಳೆಯರು ಒಬ್ಬರಿಗಿಂತ ಹೆಚ್ಚು ಮಂದಿಯನ್ನು ಮದುವೆಯಾಗುವುದು ಚತುರ ತಂತ್ರ. ಅಲ್ಲದೆ,ಬದುಕಿನ ಅಗತ್ಯಗಳು ಕಠಿಣವಾದಾಗಲು ಇದು ಪ್ರಯೋಜನವಾಗುತ್ತದೆ’ ಎಂದು ಅಧ್ಯಯನದ ಪ್ರಮುಖ ಸಂಶೋಧಕರು ತಿಳಿಸಿದರು.

ಈ ಅಧ್ಯಯನಕ್ಕಾಗಿ ಸಂಶೋಧಕರುಪಶ್ಚಿಮ ತಾಂಜೇನಿಯ ಗ್ರಾಮದ ಎಲ್ಲಾ ಮನೆಗಳಿಗೂ ತೆರಳಿಹುಟ್ಟು, ಸಾವು, ಮದುವೆ ಮತ್ತು ವಿಚ್ಛೇದನ ಕುರಿತು ದಾಖಲೆಯನ್ನು ಸಂಗ್ರಹಿಸಿದ್ದಾರೆ. ಎರಡು ದಶಕಗಳ ಅವಧಿಯ ದಾಖಲೆಗಳ ಆಧಾರದ ಮೇಲೆ ಈ ವಿಷಯವನ್ನು ಹೇಳಲಾಗಿದೆ ಎನ್ನುತ್ತಾರೆ ಸಂಶೋಧಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.