ADVERTISEMENT

ಚರ್ಮದ ಶೂ, ಸ್ನೀಕರ್ಸ್‌ ಕಾಳಜಿ ಹೇಗಿರಬೇಕು?

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2021, 19:30 IST
Last Updated 13 ಅಕ್ಟೋಬರ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಹುಶಃ ಲಾಕ್‌ಡೌನ್‌ ದಿನಗಳಲ್ಲಿ ನಮ್ಮ ಬಟ್ಟೆಗಳು ಮಾತ್ರ ಕಪಾಟು ಸೇರಲಿಲ್ಲ, ಸಾವಿರಾರು ರೂಪಾಯಿ ಕೊಟ್ಟು ಕೊಂಡ ಚರ್ಮದ ಶೂಗಳು, ಸ್ನೀಕರ್ಸ್‌ಗಳು ಮೂಲೆ ಸೇರಿದ್ದವು. ಎಷ್ಟು ಸಾವಿರ ಕೊಟ್ಟರೆ ಏನಂತೆ ಹಾಕಿಕೊಳ್ಳುವ ಅವಕಾಶ ಇಲ್ಲದಿದ್ದರೆ! ಹೀಗಾಗಿ ಅದರ ಕುರಿತ ಗಮನ ಕಡಿಮೆ ಆಗಿ, ಹಲವರು ತಮ್ಮ ಬೆಲೆಬಾಳುವ ಶೂಗಳನ್ನು ಹಾಳು ಮಾಡಿಕೊಂಡಿದ್ದಾರೆ.

ನಮ್ಮ ಶೂಗಳ ಬಗ್ಗೆಯೂ ಸ್ವಲ್ಪ ಗಮನ ಇಟ್ಟುಕೊಂಡಿದ್ದರೆ, ಅವು ಈಗ ಬಿಸಾಕುವ ಸ್ಥಿತಿಗೆ ಬರುತ್ತಿರಲಿಲ್ಲ. ಮುಂದೆ ಹೀಗಾಗದಂತೆ ನೋಡಿಕೊಳ್ಳಲು ಕೆಲವು ಟಿಪ್ಸ್‌ಗಳು ಇಲ್ಲಿವೆ.

ಖರೀದಿ ಮಾಡಿ ತಂದ ಶೂಗಳನ್ನು ಬಳಸುವ ಮೊದಲು ಎರಡು ಕೆಲಸಗಳನ್ನು ಮಾಡಬೇಕು. ಒಂದು– ಶೂಗಳಿಗೆ ರಕ್ಷಣಾ ಕವಚವಾಗಿ ಸೋಲ್‌ಗಳನ್ನು ಹಾಕಬೇಕು. ಇದರಿಂದ ಶೂಗಳು ಹೆಚ್ಚು ಬಾಳಿಕೆ ಬರುತ್ತವೆ. ಎರಡನೆಯದು ದೂಳು, ನೀರು ಬಿದ್ದರೂ ಹಾನಿಯಾಗದಂತೆ ತಡೆಯಲು ಸ್ಪ್ರೇ ಬಳಸಬೇಕು. ಚರ್ಮದ ಶೂಗಳಿಗೆ ಕನಿಷ್ಠ ಮೂರು ಬಾರಿಯಾದರೂ ಸ್ಪ್ರೇ ಮಾಡಬೇಕು. ಆರು ತಿಂಗಳು ಉಪಯೋಗಿಸಿದ ಬಳಿಕ ಮತ್ತೊಮ್ಮೆ ಸ್ಪ್ರೇ ಸಿಂಪಡಿಸಬೇಕು.

ADVERTISEMENT

ಸ್ನೀಕರ್ಸ್‌ಗಳಿಗೂ ಈ ರೀತಿಯ ಸ್ಪ್ರೇ ಬಳಸುವುದರಿಂದ ಹೆಚ್ಚು ಬಾಳಿಕೆ ಬರುತ್ತವೆ. ಇಂಥ ಸ್ಪ್ರೇಗಳು ದೂಳು ಮತ್ತು ಶೂಗಳ ಮೇಲ್ಮೈಗಳ ಮಧ್ಯೆ ಒಂದು ಪದರ ಆಗುವುದರಿಂದ ಶೂಗಳು ಅಥವಾ ಸ್ನೀಕರ್ಸ್‌ಗಳು ಹಾಳಾಗುವುದಿಲ್ಲ.

ಚರ್ಮದ ಶೂಗಳನ್ನು ವಾರಕ್ಕೆ ಒಮ್ಮೆಯಾದರೂ ಪಾಲಿಷ್‌ ಮಾಡಬೇಕು. ಅದರಲ್ಲಿರುವ ಮೇಣವು ಶೂಗಳು ದೂಳಿನಿಂದ ಹಾಳಾಗುವುದನ್ನು ತಡೆಯುತ್ತದೆ.

ಶೂಗಳನ್ನು ಕಳಸಿ ಇಡುವಾಗ ಶೂಲೇಸ್‌ಗಳನ್ನು ಕಳಚುವುದು ಉತ್ತಮ.

ಲೆದರ್‌ ಶೂಗಳನ್ನು ದಿನಾ ಬಳಸುವುದರಿಂದ ಅದು ಹೆಚ್ಚು ದಿನ ಬಾಳಿಕೆ ಬರುವುದಿಲ್ಲ. ಬೆವರಿನಿಂದ ಶೂಗಳು ಒದ್ದೆ ಆಗುತ್ತವೆ. ಇದು ಒಣಗಲು ಸಮಯಾವಾಕಾಶ ಬೇಕು. ಅವುಗಳನ್ನು ಒತ್ತಾಯಪೂರ್ವಕವಾಗಿ ಒಣಗುವಂತೆ ಮಾಡಬಾರದು.

ಸ್ನೀಕರ್ಸ್‌ಗಳನ್ನು ಕೈಯಲ್ಲಿ ತೊಳೆಯಬಹುದು. ಬ್ರಷ್‌ ಬಳಸಿ ಕೊಳೆಯನ್ನು ತೆಗೆಯಬಹುದಾಗಿದೆ. ಸ್ನೀಕರ್ಸ್‌ಗಳನ್ನು ವಾಷಿಂಗ್‌ ಮೆಷಿನ್‌ಗೆ ಹಾಕಬೇಡಿ. ಕೊಳೆ ಹಿಡಿದಿರುವ ಸ್ನೀಕರ್ಸ್‌ಗಳನ್ನು ತಿಂಗಳುಗಳ ಕಾಲ ಹಾಗೇ ಇಡಬೇಡಿ, ತಕ್ಷಣದಲ್ಲಿ ತೊಳೆದು ಬಿಡಿ. ಶೂಗಳು ಒದ್ದೆ ಆಗಿದ್ದರೆ, ಮೊದಲು ಅವುಗಳ ಮೇಲಿನ ಗಲೀಜನ್ನು ಒರೆಸಿ ನಂತರ ಒಣಗಲು ಬಿಡಿ.

ಚರ್ಮದ ಶೂಗಳನ್ನು ಒಣಗಿಸಲು ಹೀಟರ್‌ಗಳನ್ನು ಬಳಸಬಾರದು. ನೇರವಾಗಿ ಸೂರ್ಯನ ಕಿರಣ ಇರುವಲ್ಲಿಯೂ ಅವುಗಳನ್ನು ಇಡಬಾರದು. ನೆರಳಿರುವಲ್ಲಿ ಶೂಗಳನ್ನು ಒಣಗಲು ಬಿಡಿ, ನಂತರ ಯಾವುದಾದರೂ ಶೂಗಳಿಗೆ ಬಳಸುವ ಕ್ರೀಮ್‌ ಅನ್ನು ಲೇಪಿಸಿ.

ಸ್ನೀಕರ್ಸ್‌ಗಳನ್ನು ನೇರವಾಗಿ ಸೂರ್ಯನ ಕಿರಣಗಳಗೆ ಒಡ್ಡಿ ಒಣಗಿಸಬಹುದು. ಹೀಗೆ ಮಾಡುವ ಮೊದಲು ಒಳಗಿರುವ ಸೋಲ್‌ಗಳನ್ನು ಬೇರ್ಪಡಿಸಿ.

ಮನೆಯಲ್ಲಿ ಶೂಗಳನ್ನು ಮತ್ತು ಸ್ನೀಕರ್ಸ್‌ಗಳನ್ನು ಇಡಲು ಮರದ ಸ್ಟ್ಯಾಂಡ್‌ಗಳನ್ನೇ ಬಳಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.