ADVERTISEMENT

ಕುಂದಾಪುರದಲ್ಲಿ ವಿವಿಪ್ಯಾಟ್ ಪ್ರಾತ್ಯಕ್ಷಿಕೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 5:49 IST
Last Updated 29 ಮಾರ್ಚ್ 2018, 5:49 IST

ಉಡುಪಿ: ಇದೇ ಮೊದಲ ಬಾರಿಗೆ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಳಸಲಾಗುತ್ತಿರುವ ಮತ ಖಾತರಿ ಯಂತ್ರ (ವಿವಿಪ್ಯಾಟ್) ಕುರಿತು ಕುಂದಾಫುರ ಪುರಸಭಾ ವ್ಯಾಪ್ತಿಯ ಜನರಿಗೆ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿದೆ. ಯಂತ್ರವನ್ನು ಬಳಸುವುದು ಹೇಗೆ, ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ.

ಏಪ್ರಿಲ್ 2ರಂದು ಬೆಳಿಗ್ಗೆ 11 ಗಂಟೆಗೆ ಸರ್ಕಾರಿ ಪ್ರಾಥಮಿಕ ಶಾಲೆ ಹೂಂಚಾರು ಬೆಟ್ಟು ವಡೇರಹೋಬಳಿ, ಹೂಚಾರ್ ಬೆಟ್ಟು ವಾರ್ಡ್ ಮತದಾರರಿಗೆ ಹಾಗೂ ಸಂಜೆ 4 ಗಂಟೆಗೆ ಸಮುದಾಯ ಭವನ ಗಾಂಧಿ ಪಾರ್ಕ್, ಟಿ.ಟಿ ರಸ್ತೆ, ನಾನಾ ಸಾಹೇಬ್ ರಸ್ತೆ, ಶಾಂತಿ ನಿಕೇತನ, ಮಂಗಲ್ ಪಾಂಡ್ಯ ರಸ್ತೆ ವಾರ್ಡ್ ಮತದಾರರಿಗೆ ಪ್ರಾತ್ಯಕ್ಷಿಕೆ ನೀಡಲಾಗುತ್ತದೆ.

ಏಪ್ರಿಲ್ 3ರಂದು ಬೆಳಿಗ್ಗೆ 11 ಗಂಟೆಗೆ ಅಂಬೇಡ್ಕರ್ ಭವನ, ವಿಠಲವಾಡಿ, ಬರೆಕಟ್ಟು ರಸ್ತೆ ವಾರ್ಡ್ ಮತದಾರರಿಗೆ, ಸಂಜೆ 4 ಗಂಟೆಗೆ ಗಂಟೆಗೆ ಪುರಸಭಾ ಕಚೇರಿ ಸಭಾಂಗಣ, ಚರ್ಚ್ ರಸ್ತೆ, ಸೆಂಟ್ರಲ್ ವಾರ್ಡ್, ಮೀನು ಮಾರುಕಟ್ಟೆ, ಸರ್ಕಾರಿ ಆಸ್ಪತ್ರೆ ವಾರ್ಡ್ ಮತದಾರರಿಗೆ ಮಾಹಿತಿ ನೀಡಲಾಗುವುದು.

ADVERTISEMENT

ಏಪ್ರಿಲ್ 4ರಂದು ಬೆಳಿಗ್ಗೆ 11 ಗಂಟೆಗೆ ಸರ್ಕಾರಿ ಪ್ರಾಥಮಿಕ ಶಾಲೆ ಚಿಕ್ಕನ್ ಸಾಲ್ ರಸ್ತೆ, ಈಸ್ಟ್ ಬ್ಲಾಕ್, ಖಾರ್ವಿಕೇರಿ, ಬಹದ್ದೂರ್ ಷಾ ರಸ್ತೆ ವಾರ್ಡ್ ಮತದಾರರಿಗೆ ಹಾಗೂ ಎಪ್ರಿಲ್ 5 ರಂದು ಬೆಳಿಗ್ಗೆ 11 ಗಂಟೆಗೆ ಸರ್ಕಾರಿ ಪ್ರಾಥಮಿಕ ಶಾಲೆ ಮುದ್ದುಗುಡ್ಡೆ, ಫೆರ್ರಿ ರಸ್ತೆ, ಮುದ್ದುಗುಡ್ಡೆ, ವೆಸ್ಟ್ ಬ್ಲಾಕ್ ವಾರ್ಡ್, ಮಂಗಳೂರು ಟೈಲ್ಸ್ ಫ್ಯಾಕ್ಟರಿ ವಾರ್ಡ್ ಮತದಾರರಿಗೆ ಪ್ರಾತ್ಯಕ್ಷಿಕೆ ಇದೆ. ಸಂಜೆ 4 ಗಂಟೆಗೆ ಉರ್ದು ಶಾಲೆ ಕೋಡಿ, ಕೋಡಿ ದಕ್ಷಿಣ, ಕೋಡಿ ಮಧ್ಯ, ಕೋಡಿ ಉತ್ತರ ವಾರ್ಡ್‌ನಲ್ಲಿ ಪ್ರಾತ್ಯಕ್ಷಿಕೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.