ADVERTISEMENT

ಚೆಲ್ಲಾಪಿಲ್ಲಿ

​ಪ್ರಜಾವಾಣಿ ವಾರ್ತೆ
Published 3 ಜುಲೈ 2018, 20:27 IST
Last Updated 3 ಜುಲೈ 2018, 20:27 IST
   

ಶಿಶು ಆರೈಕೆಯ ಉತ್ಪನ್ನ

ಏವಾನ್ ಕೇರ್ ಲ್ಯಾವೆಂಡರ್ ಬೇಬಿ ವಾಷ್ ಮತ್ತು ಶಾಂಪು ಹಾಗೂ ಲ್ಯಾವೆಂಡರ್ ಲೋಷನ್ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ಬೇಬಿ ಕೇರ್ ಉತ್ಪನ್ನಗಳು ಹಾನಿಕಾರಕ ಪ್ಯಾರಾಬೆನ್, ಆಲ್ಕೊಹಾಲ್ ಮತ್ತು ಡೈಗಳಿಂದ ಮುಕ್ತವಾಗಿವೆ. ಇದನ್ನು ವೈದ್ಯಕೀಯವಾಗಿ ಮಕ್ಕಳ ತಜ್ಞರಿಂದ ಪರೀಕ್ಷೆ ಮಾಡಿಸಿ ಒಪ್ಪಿಗೆ ಪಡೆಯಲಾಗಿದೆ. ಇವು ಅಲರ್ಜಿ ಉಂಟು ಮಾಡುವುದಿಲ್ಲ, ಡೈಗಳಿಂದ ಮುಕ್ತವಾಗಿರುತ್ತವೆ ಎಂದು ಕಂಪೆನಿ ಹೇಳಿಕೊಂಡಿದೆ.

ಆರೋಗ್ಯಕರ ಅಡುಗೆ ಎಣ್ಣೆ

ADVERTISEMENT

'ಫಲಾದ ಆರ್ಗೋ ಪ್ರೈವೆಟ್ ಕಂಪನಿ' ಸಾವಯವ ಅಡುಗೆ ಎಣ್ಣೆಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಅಡುಗೆ ಎಣ್ಣೆಯಲ್ಲಿ ಸಾವಯವ ಸಾಸಿವೆ, ಶುದ್ಧ ಕೊಬ್ಬರಿ, ಕಡಲೆಕಾಯಿ, ಸೂರ್ಯಕಾಂತಿ ಸೇರಿದಂತೆ ಹಲವು ಬಗೆ ಪದಾರ್ಥಗಳಿಂದ ತಯಾರಿಸಲಾಗಿದೆ.

ಅಲ್ಲದೆ ಈ ಎಣ್ಣೆಯ ಪ್ಯಾಕಿಂಗ್ ಕೂಡ ಗುಣಮಟ್ಟದಿಂದ ಕೂಡಿದ್ದು, ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡಲಿದೆ. ₹ 120 ರೂಪಾಯಿಂದ ಪ್ರಾರಂಭಗೊಂಡು ₹ 390 ರೂಪಾಯಿವರೆಗೆ ಈ ಎಣ್ಣೆಯ ದರ ನಿಗದಿ ಮಾಡಲಾಗಿದೆ. Www.pureandsure.in ವೆಬ್‌ಸೈಟ್ ಮೂಲಕವೂ ಖರೀದಿಸಬಹುದು.

ಮಿಟಾಶಿ ವಾಶಿಂಗ್ ಮೆಷಿನ್

ಮಿಟಾಶಿ ಕಂಪನಿಯ ಹೋಂಗ್ರೋನ್ ಬ್ರ್ಯಾಂಡ್ ಎಂಬ ವಾಷಿಂಗ್‌ ಮಷಿನ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.ಇದು ಮೂರು ರೀತಿಯ ಹೊಸ ಮಾದರಿಗಳನ್ನು ಒಳಗೊಂಡಿದೆ. ಉತ್ತಮ ಗುಣಮಟ್ಟದ ಸ್ಪೇನ್‌ಲೆಸ್‌ ಸ್ಟೀಲ್ ವಾಶ್ ಟಬ್ ಮತ್ತು ಗಾಜಿನ ಮುಚ್ಚಳ, ಎರಡು ಲಿಂಟ್ ಪಿಲ್ಟರ್, ಹೈಡ್ರಾ ಕ್ಲೀನಿಂಗ್ ಪಲ್ಸೇಟರ್, ರಸ್ಟ್–ಫ್ರೀ ಬಾಡಿ ಮತ್ತು ಆಟೋ ಸೋಕ್‌ಗಳನ್ನು ಒಳಗೊಂಡಿದೆ. ಮಿಟಾಶಿಯ ವಾಷಿಂಗ್ ಮೆಷಿನ್ ಶ್ರೇಣಿ ಎಲ್ಲಾ ಪ್ರಮುಖ ಅಂಗಡಿಗಳು ಮತ್ತು ಆನ್ ಲೈನ್ ಪೋರ್ಟಲ್‌ಗಳಲ್ಲಿ ಲಭ್ಯವಿರುತ್ತವೆ ಎಂದು ಪ್ರಕಟಣೆಯಲ್ಲಿ ಕಂಪೆನಿ ತಿಳಿಸಿದೆ.ಬೆಲೆ ₹15,990ರಿಂದ ಆರಂಭ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.