ADVERTISEMENT

ನಿಮ್ಮ ಮನೋ ವ್ಯಾಕುಲತೆಯನ್ನು ಸಂಗಾತಿಯೊಂದಿಗೆ ಹಂಚಿಕೊಳ್ಳಬಹುದೇ?

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2019, 11:40 IST
Last Updated 22 ಅಕ್ಟೋಬರ್ 2019, 11:40 IST
ಮಾನಸಿಕ ಆರೋಗ್ಯ –ಸಾಂದರ್ಭಿಕ ಚಿತ್ರ
ಮಾನಸಿಕ ಆರೋಗ್ಯ –ಸಾಂದರ್ಭಿಕ ಚಿತ್ರ   

ನಕರಾತ್ಮಕ ಚಿಂತನೆ ಹಾಗೂ ಕಡೆಗಣಿಸುವಿಕೆ ಮಾನಸಿಕ ಸ್ವಾಸ್ಥ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಮನಸ್ಸಿನಲ್ಲಿ ಉಂಟಾಗುವ ಈ ತಲ್ಲಣಗಳನ್ನು ಸಂಗಾತಿಯ ಜೊತೆ ಹಂಚಿಕೊಳ್ಳುವುದು ಸುಲಭವಲ್ಲ. ಮಾನಸಿಕ ತೊಂದರೆ ಅನುಭವಿಸುತ್ತಿರುವವರುಸಂಬಂಧದಲ್ಲಿ ಸಾಕಷ್ಟು ಸವಾಲಿನ ಕ್ಷಣಗಳನ್ನು ಎದುರಿಸುತ್ತಿರುತ್ತಾರೆ. ಕೆಲವೊಂದು ಘಟನೆಗಳು ಅವರ ಜೀವನವನ್ನು ಇನ್ನಷ್ಟು ಕಠಿಣವನ್ನಾಗಿಸುತ್ತದೆ. ಹಾಗಾದರೆ ಈ ಮನೋ ಕಳವಳವನ್ನು ನಿಮ್ಮ ಸಂಗಾತಿಯ ಬಳಿ ಯಾವಾಗ ಹೇಳಿಕೊಳ್ಳಬೇಕು? ಇದೆಲ್ಲವನ್ನು ಹೇಳಿದ ಮೇಲೂ ನಿಮ್ಮ ಸಂಬಂಧ ಉಳಿಸಿಕೊಳ್ಳುವುದು ಹೇಗೆ? ಇಲ್ಲಿದೆ ಕೆಲವು ಸಲಹೆಗಳು.

ಸಂಗಾತಿಯ ವರ್ತನೆಯನ್ನು ಅರಿಯಿರಿ

ಮನೋ ವ್ಯಾಕುಲತೆಯ ಬಗ್ಗೆ ನಿಮ್ಮ ಸಂಗಾತಿ ಬಳಿ ಹೇಳಿಕೊಳ್ಳುವ ಮುನ್ನ ಕೆಲವು ವಿಚಾರಗಳನ್ನು ತಿಳಿದುಕೊಳ್ಳಿ. ಮಾನಸಿಕ ಆರೋಗ್ಯದ ಬಗ್ಗೆ ಹೇಳಿದ ತಕ್ಷಣ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪ್ರತಿಕ್ರಿಯಿಸಬಹುದು. ಹಾಗಾಗಿ ನಿಮ್ಮ ಸಂಗಾತಿ ಹೇಗೆ ಪ್ರತಿಕ್ರಿಯಿಸಬಹುದು ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ಒಂದು ವೇಳೆ ನಿಮ್ಮ ಸಂಗಾತಿ ನಕರಾತ್ಮವಾಗಿ ಪ್ರತಿಕ್ರಿಯಿಸಿದರೆ, ಅದನ್ನು ಎದುರಿಸಲು ನೀವೂ ಸಿದ್ಧರಾಗಿರಬೇಕು.

ADVERTISEMENT

ನಿಮ್ಮ ಸ್ಥಿತಿಯ ಅವಲೋಕನ ಮಾಡಿಕೊಳ್ಳಬೇಕು

ನಿಮ್ಮ ಮನಸ್ಥಿತಿಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಳ್ಳಿ. ಮಾನಸಿಕ ಆರೋಗ್ಯ ಯಾವ ಹಂತದಲ್ಲಿದೆ, ಆಪ್ತಸಮಾಲೋಚನೆಯನ್ನು ಈಗಷ್ಟೇ ಪ್ರಾರಂಭಿಸಿದ್ದೀರಾ?..ಹೀಗೊಂದಿಷ್ಟು ಅಂಶಗಳನ್ನು ಗ್ರಹಿಸಿಕೊಳ್ಳಲು ಪ್ರಯತ್ನಿಸಿ. ನಿಮ್ಮ ಸಂಗಾತಿಯ ಯಾವ ಮಾತು ನಿಮಗೆ ಕೋಪ, ಉದ್ವೇಗ ತರಿಸುತ್ತಿದೆ ಎನ್ನುವುದನ್ನು ಸಂಗಾತಿಯೊಂದಿಗೆ ಹೇಳಿಕೊಳ್ಳುವುದು ಉತ್ತಮ.

ಸಮಯ

ಈಗಷ್ಟೇ ಒಬ್ಬರೊಂದಿಗೆ ಸಮಯ ಕಳೆಯಲು ಪ್ರಾರಂಭಿಸಿದ್ದರೆ, ಈ ವಿಷಯವನ್ನು ಹೇಳುವುದು ಸೂಕ್ತವಲ್ಲ. ಮನಶಾಸ್ತ್ರಜ್ಞರ ಪ್ರಕಾರ, ಸಂಬಂಧವೊಂದು ಗಟ್ಟಿಯಾದ ನಂತರ, ಒಂದು ನೆಮ್ಮದಿಯ ಅನುಭವ ದೊರೆತಾಗ ಮಾತ್ರ ನಿಮ್ಮ ಸ್ಥಿತಿಯ ಬಗ್ಗೆ ಹೇಳಿದರೆ ಒಳಿತು. ಆಗ ಅವರು ನಿಮ್ಮ ವ್ಯಕ್ತಿತ್ವವನ್ನು ಸರಿಯಾಗಿ ಅರ್ಥೈಸಿಕೊಂಡಿರುತ್ತಾರೆ.

ನೀವು ನೀವಾಗಿರಿ

ನಿಮ್ಮ ಮಾನಸಿಕ ತಳಮಳವನ್ನು ಹೇಳಿಕೊಳ್ಳುವಾಗ ತಾಳ್ಮೆಯಿಂದ, ಸಮಚಿತ್ತದಿಂದ ಇರಲು ಯತ್ನಿಸಿ. ನಿಮಗೆ ಭಯ ಅಥವಾ ಉದ್ವೇಗ ಉಂಟಾದರೆ ಹೆದರಬೇಕಿಲ್ಲ. ಅದು ಸಾಮಾನ್ಯ. ಈ ರೀತಿಯ ಭಾವನಾತ್ಮಕ ವಿಷಯಗಳನ್ನು ಹೇಳುವ ಮುನ್ನ ಸಾಕಷ್ಟು ಸಮಯ ತೆಗೆದುಕೊಂಡು ಯೋಚಿಸಿ, ನಂತರ ಮನಸ್ಸು ಬಿಚ್ಚಿ ಮಾತಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.