ADVERTISEMENT

‘ಕರಾವಳಿ ಕರ್ನಾಟಕಕ್ಕೆ ನವೆಂಬರ್‌ನಿಂದ ಪಡಿತರದಲ್ಲಿ ಕೆಂಪು ಕುಚ್ಚಲಕ್ಕಿ’

​ಪ್ರಜಾವಾಣಿ ವಾರ್ತೆ
Published 27 ಮೇ 2021, 12:23 IST
Last Updated 27 ಮೇ 2021, 12:23 IST
   

ಬೆಂಗಳೂರು: ‘ಕರಾವಳಿ ಕರ್ನಾಟಕಕ್ಕೆ ಪಡಿತರ ಮೂಲಕ ನವೆಂಬರ್ ತಿಂಗಳಿಂದ ಕೆಂಪು ಕುಚ್ಚಲಕ್ಕಿ ಪೂರೈಸುವ ನಿರ್ಣಯ ಮಾಡಲಾಗಿದೆ’ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಆಹಾರ ಇಲಾಖೆಯ ಅಧಿಕಾರಿಗಳ ಜೊತೆ ಗುರುವಾರ ಸಮಾಲೋಚನೆ ನಡೆಸಿದ ಬಳಿಕ ಮಾತನಾಡಿದ ಅವರು,‘ಪಡಿತರ ಮೂಲಕ ಕೆಂಪು ಕುಚ್ಚಲಕ್ಕಿ ವಿತರಿಸುವಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜನರ ಬೇಡಿಕೆ‌ ಇತ್ತು. ಪಡಿತರದಲ್ಲಿ ನೀಡುವ ಸಾಮಾನ್ಯ ಅಕ್ಕಿ ಊಟ ಮಾಡಲು ಸಾಧ್ಯವಿಲ್ಲ. ಜಿಲ್ಲೆಯಲ್ಲಿ ತಯಾರಾಗುವ ಕೆಂಪು ಕುಚ್ಚಲಕ್ಕಿ ಬೇಕು ಅಂತ ಜನ ಬೇಡಿಕೆ ಇಟ್ಟಿದ್ದರು’ ಎಂದು ತಿಳಿಸಿದರು.

‘ಹಲವರು ಪಡಿತರ ಪಡೆಯದೆ, ಅಕ್ಕಿ ಮಾರಾಟದ ದೂರುಗಳು ಬರುತ್ತಿವೆ. ಈ ಸಂಬಂಧ ಅಧಿಕಾರಿಗಳ ಜೊತೆ ಸಭೆ ಮಾಡಿದ್ದೇವೆ. ಆಹಾರ ಸಚಿವರ ಜೊತೆಗೂ ಸಭೆ ಮಾಡಲಾಗಿದೆ. ಎಂಒ4, ಜ್ಯೋತಿ, ಅಭಿಲಾಷ, ಜಯ ತಳಿಯ ಅಕ್ಕಿ ಪಡೆಯಲು ಕೇಂದ್ರದ ಅನುಮತಿ ಬೇಕಿದೆ. ಕರಾವಳಿ ಜಿಲ್ಲೆಯ ಕೆಂಪು ಕುಚ್ಚಲಕ್ಕಿ ಬೇಡಿಕೆಯನ್ನು ಈ ಮೂಲಕ ಈಡೇರಿಸಲಾಗುವುದು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.