ADVERTISEMENT

ದಾವಣಗೆರೆಯಲ್ಲಿ ಬಿಜೆಪಿ ಬಲ ಪ್ರದರ್ಶನ

ಮಧ್ಯ ಕರ್ನಾಟಕದಲ್ಲಿ ಪ್ರಧಾನಿ ಮೋದಿ ಮೋಡಿ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2023, 19:06 IST
Last Updated 25 ಮಾರ್ಚ್ 2023, 19:06 IST
ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಅಂಗವಾಗಿ ದಾವಣಗೆರೆಯಲ್ಲಿ ಶನಿವಾರ ಆಯೋಜಿಸಿದ್ದ ಮಹಾಸಂಗಮ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಳ್ಳಿಯ ಗದೆ ನೀಡಿದರು. ಸಂಸದ ಜಿ.ಎಂ.ಸಿದ್ದೇಶ್ವರ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್ ಯಡಿಯೂರಪ್ಪ, ಮುಖಂಡರಾದ ಸಿ.ಸಿ ಪಾಟೀಲ, ಲಕ್ಷ್ಮಣ ಸವದಿ, ನಳಿನ್‌ಕುಮಾರ್ ಕಟೀಲ್, ಜಗದೀಶ ಶೆಟ್ಟರ್ ಇದ್ದಾರೆ–ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ್

ದಾವಣಗೆರೆ: ವಿಜಯ ಸಂಕಲ್ಪ ಯಾತ್ರೆ’ಯ ಸಮಾರೋಪದ ಅಂಗವಾಗಿ ಬಿಜೆಪಿಯು ಮಧ್ಯ ಕರ್ನಾಟಕದ ದಾವಣಗೆರೆ ಯಲ್ಲಿ ಶನಿವಾರ ಆಯೋಜಿಸಿದ್ದ ‘ಮಹಾಸಂಗಮ’ ಕಾರ್ಯಕ್ರಮ ಪಕ್ಷದ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಒದಗಿಸಿತು.

ದಕ್ಷಿಣ ರಾಜ್ಯದಲ್ಲಿನ ತನ್ನ ಏಕೈಕ ಅಧಿಕಾರ ಕೇಂದ್ರವನ್ನು ಬಿಟ್ಟುಕೊಡಕೂಡದು ಎಂಬ ಉದ್ದೇಶದೊಂದಿಗೆ ತಿಂಗಳುಗಳ ಹಿಂದೆಯೇ ಯಾತ್ರೆಗಳ ಮೂಲಕ ವಿಧಾನಸಭೆ ಚುನಾವಣೆಯ ಪ್ರಚಾರ ಆರಂಭಿಸಿರುವ ಪಕ್ಷಕ್ಕೆ, ‘ಪ್ರಧಾನಿ ನರೇಂದ್ರ ಮೋದಿ ಅವರ ನಾಮಬಲವೇ ಆಸರೆ’ ಎಂಬುದನ್ನು ಇಲ್ಲಿ ನೆರೆದಿದ್ದ ಲಕ್ಷಾಂತರ ಜನರ ಕರತಾಡನ ಮತ್ತೆ ಸಾಬೀತುಪಡಿಸಿತು.

ಕಾರ್ಯಕ್ರಮಕ್ಕೆ ಸಿದ್ಧಗೊಂಡಿದ್ದ ಪೆಂಡಾಲ್‌ ನಡುವೆ ಇದೇ ಮೊದಲ ಬಾರಿಗೆ ತೆರೆದ ವಾಹನದಲ್ಲಿ ಜನರ ಮಧ್ಯೆ ಭವ್ಯ ‘ಮೆರವಣಿಗೆ’ ಮೂಲಕ ಸಾಗಿದ ಮೋದಿ, ಹೂಮಳೆ ಮೂಲಕ ಸ್ವಾಗತ ಕೋರಿದ ಪಕ್ಷದ ಕಾರ್ಯಕರ್ತರ ಉತ್ಸಾಹವನ್ನು ಕಂಡು ಪುಳಕಿತರಾದರು.

ADVERTISEMENT

ಉರಿ ಬಿಸಿಲನ್ನೂ ಲೆಕ್ಕಿಸದೆ ಪಾಲ್ಗೊಂಡಿದ್ದ ಲಕ್ಷಾಂತರ ಕಾರ್ಯಕರ್ತರ ಪ್ರತಿಕ್ರಿಯೆ ಕೋರಿದ ಪ್ರಧಾನಿ, ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸುವಂತೆ ಮನವಿ ಮಾಡಿದರು.

ತಮ್ಮ ಭಾಷಣದ ಬಹುತೇಕ ಸಮಯವನ್ನು ಕಾಂಗ್ರೆಸ್‌ ವಿರುದ್ಧದ ಟೀಕೆಗೆ ಮೀಸಲಿರಿಸಿದ ಅವರು, ‘ಅವಕಾಶವಾದಿ, ಸ್ವಾರ್ಥ ರಾಜಕಾರಣಕ್ಕೆ ಹೆಸರಾಗಿರುವ ಕಾಂಗ್ರೆಸ್‌ ನೇತೃತ್ವದ ಸರ್ಕಾರಗಳು ಕರ್ನಾಟಕಕ್ಕೆ ಅನುಕೂಲ ಮಾಡಿದ್ದಕ್ಕಿಂತ ನಷ್ಟ ಉಂಟು ಮಾಡಿದ್ದೇ ಹೆಚ್ಚು’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.