ADVERTISEMENT

ನನ್ನ ಆಸ್ತಿ ಇದ್ದಷ್ಟೇ ಇದೆ, 800 ಪಟ್ಟು ಏರಿಕೆ ಆಗಿದ್ದು ಯಾರದ್ದು?: ಸಿ.ಟಿ.ರವಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಅಕ್ಟೋಬರ್ 2021, 12:29 IST
Last Updated 18 ಅಕ್ಟೋಬರ್ 2021, 12:29 IST
ಸಿ.ಟಿ.ರವಿ (ಪ್ರಜಾವಾಣಿ ಸಂಗ್ರಹ ಚಿತ್ರ)
ಸಿ.ಟಿ.ರವಿ (ಪ್ರಜಾವಾಣಿ ಸಂಗ್ರಹ ಚಿತ್ರ)   

ಬೆಂಗಳೂರು: ‘ನನ್ನ ಆಸ್ತಿ ಎಷ್ಟಿತ್ತೋ ಅಷ್ಟೇ ಇದೆ. ಲೋಕಾಯುಕ್ತಕ್ಕೆ ದೂರು ಕೊಟ್ಟವರಿಗೆ ಅದರ ದಾಖಲೆ ಸಿಕ್ಕಿರಬಹುದು. 800 ಪಟ್ಟು ಆಸ್ತಿ ಏರಿಕೆ ಆಗಿದ್ದು ಯಾರದ್ದು ಎಂಬುದು ಕಾಂಗ್ರೆಸ್‌ನವರಿಗೆ ಗೊತ್ತಿರಬಹುದಲ್ಲವೇ? ತಾನು ಕಳ್ಳ, ಪರರ ನಂಬದ ಕಳ್ಳ ಕಾಂಗ್ರೆಸ್‌’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

‘ಕೋತಿ ತಾನು ಬೆಣ್ಣೆ ತಿಂದು ಮೇಕೆ ಮೂತಿಗೆ ಹಚ್ಚಿದಂತೆ ವಿ.ಎಸ್‌.ಉಗ್ರಪ್ಪ ಮಾಧ್ಯಮಗಳಲ್ಲಿ ಬಹಿರಂಗ ಮಾಡಿದ ಆ ಪಕ್ಷದ ಅಧ್ಯಕ್ಷರ ಸತ್ಯ ವಿಶ್ವವಿಖ್ಯಾತ ಆಗುತ್ತಿದ್ದಂತೆ ಬಿಜೆಪಿ ನಾಯಕರ ತಲೆಗೆ ಕಟ್ಟಲು ಮುಂದಾದರು. ಕಮಿಷನ್‌ ಗಿರಾಕಿಗಳ ಸತ್ಯ ಹೊರಬರುತ್ತಿದ್ದಂತೆ ಬಿಜೆಪಿ ವಿರುದ್ಧ ಟ್ವೀಟ್‌ ಮಾಡಿ ವಿಷಯಾಂತರ ಮಾಡುತ್ತಿರುವುದು ನಾಚಿಕೆಗೇಡು’ ಎಂದು ರವಿ ಟ್ವೀಟ್‌ ಮಾಡಿದ್ದಾರೆ.

‘ಕಾಂಗ್ರೆಸ್‌ ಪಕ್ಷದಲ್ಲೇ ಭ್ರಷ್ಟಾಚಾರದ ಹೆಗ್ಗಣಗಳಿಂದ ಲೂಟಿಯಾಗುತ್ತಿದ್ದರೂ ಬೇರೆಯವರ ಬಗ್ಗೆ ಮಾತನಾಡುವ ಕಾಂಗ್ರೆಸ್‌ ಪಕ್ಷದ ಸಿದ್ಧಾಂತಗಳಿಗೆ ಯಾವ ಬೆಲೆ ಇದೆ? ನಾವು ಎಲ್ಲ ವರ್ಗದ ಪರ ಎಂದು ಎಲ್ಲರ ಮುಂದೆ ಪರ್ಸೆಂಟೇಜ್‌ಗಾಗಿ ಕೈ ಚಾಚುವ ಭ್ರಷ್ಟರಿಂದ ಈ ದೇಶ, ರಾಜ್ಯ ಉದ್ಧಾರವಾಗಲು ಸಾಧ್ಯವೇ’ ಎಂದು ರವಿ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.